Rahul Ghandhi: ಅದೃಷ್ಟ ಪರೀಕ್ಷೆಗೂ ಮುನ್ನ ರಾಮಜನ್ಮಭೂಮಿಗೆ ಅಣ್ಣ-ತಂಗಿ? ಅಯೋಧ್ಯೆ ಭೇಟಿ ಹಿಂದಿನ ಗುಟ್ಟೇನು..?

Apr 26, 2024, 4:45 PM IST

ಇದು ರಾಷ್ಟ್ರ ರಾಜಕಾರಣದ ಫೇಮಸ್ ಅಣ್ಣ-ತಂಗಿಯರ ರಾಜಕೀಯ ಪಗಡೆಯಾಟ. ಗಾಂಧಿ ಕುಟುಂಬದ ಒಡ ಹುಟ್ಟಿದವರು ರಾಜಕೀಯದ ಚದುರಂಗದಲ್ಲಿ ಉರುಳಿಸ್ತಾ ಇರೋ ರೋಚಕ ದಾಳ. ಇಂದಿರಾ ಗಾಂಧಿಯವರ ಮೊಮ್ಮಕ್ಕಳು, ರಾಜೀವ್ ಗಾಂಧಿ-ಸೋನಿಯಾ ಗಾಂಧಿಯವರ ಮಕ್ಕಳು ಅವಳಿ ಅಖಾಡಗಳಿಂದ ಲೋಕಸಭಾ ಚುನಾವಣಾ(Lok Sabha elections 2024) ಅಖಾಡಕ್ಕೆ ಧುಮುಕಲು ತಾಲೀಮು ನಡೆಸ್ತಾ ಇದ್ದಾರೆ. ಗಾಂಧಿ ಕುಟುಂಬ ಕಾಂಗ್ರೆಸ್‌ನ ಶಕ್ತಿ. ಮೂವರು ಪ್ರಧಾನಿಗಳನ್ನು ದೇಶಕ್ಕೆ ನೀಡಿರೋ ಕುಟುಂಬ ಅದು. ಇದೇ ಗಾಂಧಿ ಕುಟುಂಬಕ್ಕೆ ಉತ್ತರ ಪ್ರದೇಶದಲ್ಲಿ ಎರಡು ರಾಜಕೀಯ ಕರ್ಮಭೂಮಿಗಳು. ಒಂದು ರಾಯ್ ಬರೇಲಿ, ಮತ್ತೊಂದು ಅಮೇಥಿ(Amethi). ಗಾಂಧಿ ಪರಿವಾರದವರಿಗೆ ದಶಕಗಳಿಂದಲೂ  ರಾಜಕೀಯ ಶಕ್ತಿ ತುಂಬುತ್ತಾ ಬಂದಿರೋದು ಇವೇ ಎರಡು ಕ್ಷೇತ್ರಗಳು. ಅವಳಿ ಅಖಾಡಗಳಿಂದ ಗಾಂಧಿ ಕುಟುಂಬದವರು ಒಟ್ಟೊಟ್ಟಿಗೇ ಚುನಾವಣೆಗೆ ಸ್ಪರ್ಧಿಸ್ತಾ ಬಂದಿದ್ದಾರೆ. ಆ ಪರಂಪರೆಯನ್ನು ಮುಂದುವರಿಸಲು ಈ ಬಾರಿ ಟೊಂಕ ಕಟ್ಟಿ ನಿಂತಿದ್ದಾರೆ ಅಣ್ಣ-ತಂಗಿ. ರಾಯ್ ಬರೇಲಿ ಮತ್ತು ಅಮೇಥಿ ಲೋಕಸಭಾ ಕ್ಷೇತ್ರಗಳು ದಶಕಗಳಿಂದಲೂ ಕಾಂಗ್ರೆಸ್(Congress) ಭದ್ರಕೋಟೆ. ಆದ್ರೆ ಈ ಬಾರಿ ಬಿದ್ದ ನೆಲದಿಂದಲೇ ಮತ್ತೆ ಮೇಲೆದ್ದು ನಿಲ್ಲಲು ಕಾಂಗ್ರೆಸ್ ಅಧಿನಾಯಕ ರಾಹುಲ್ ಗಾಂಧಿ(Rahul ghandhi) ನಿರ್ಧಾರ ಮಾಡಿರೋ ಹಾಗಿದೆ. 

ಇದನ್ನೂ ವೀಕ್ಷಿಸಿ:  Lok Sabha Elections 2024: ತಮ್ಮ ಹಕ್ಕು ಚಲಾಯಿಸಲು ದುಬೈನಿಂದ ಕೋಲಾರ, ಮಂಗಳೂರಿಗೆ ಬಂದ ಮತದಾರರು!