ಆರ್‌. ಅಶೋಕ್‌ಗೆ ವಿಪಕ್ಷ ನಾಯಕ ಪಟ್ಟ..ಏನಿದು ಲೆಕ್ಕಾಚಾರ? 2 ಪ್ರಬಲ ಸಮುದಾಯಕ್ಕೆ ಮಣೆ ಹಾಕಿದ ಹೈಕಮಾಂಡ್

ಆರ್‌. ಅಶೋಕ್‌ಗೆ ವಿಪಕ್ಷ ನಾಯಕ ಪಟ್ಟ..ಏನಿದು ಲೆಕ್ಕಾಚಾರ? 2 ಪ್ರಬಲ ಸಮುದಾಯಕ್ಕೆ ಮಣೆ ಹಾಕಿದ ಹೈಕಮಾಂಡ್

Published : Nov 18, 2023, 09:27 AM IST

ಬಿಜೆಪಿಯಲ್ಲಿ ಕೊನೆಗೂ ವಿಪಕ್ಷನಾಯಕನಿಗೆ ಪಟ್ಟ ಕಟ್ಟಲಾಗಿದೆ. ಅಳೆದು ತೂಗಿ ಹೈಕಮಾಂಡ್ ಆರ್ ಅಶೋಕ್‌ಗೆ ಮಣೆ ಹಾಕಿದೆ. ಆದ್ರೆ ಇದರ ಹಿಂದೆ ಹೈಕಮಾಂಡ್ ನೂರೆಂಟ್ ಲೆಕ್ಕಾಚಾರ ಹಾಕಿದ್ರೆ.ಇತ್ತ ಅಶೋಕ್‌ಗೆ ಸಾಲು ಸಾಲು ಸವಾಲು ಮುಂದಿದೆ.
 

ಲೋಕಸಭೆ ಹೊತ್ತಲ್ಲೇ ರಾಜ್ಯ ಬಿಜೆಪಿಯಲ್ಲಿ ಹೊಸ ಹುರುಪು ಶುರುವಾಗಿದೆ. ಅಳೆದುತೂಗಿ ಹೈಕಮಾಂಡ್ ಆರ್ ಅಶೋಕ್‌ಗೆ(R.Ashok) ವಿಪಕ್ಷ ನಾಯಕ ಪಟ್ಟ ಕಟ್ಟಿದೆ. ಆದ್ರೆ ಸಾಮ್ರಾಟ್ ಅಶೋಕ್‌ಗೆ ವಿರೋಧ ಪಕ್ಷದ ನಾಯಕನ(Opposition leader) ಆಯ್ಕೆ ಮಾಡಿದ್ರಲ್ಲಿ ಹೈಕಮಾಂಡ್ ನೂರೆಂಟು ಲೆಕ್ಕಾಚಾರ ಹಾಕ್ಕೊಂಡಿದೆ. ಲಿಂಗಾಯತರಿಗೆ ರಾಜ್ಯಾಧ್ಯಕ್ಷ.ಒಕ್ಕಲಿಗರಿಗೆ ವಿರೋಧ ಪಕ್ಷ ನೀಡಿದ್ರಲ್ಲಿ ವರಿಷ್ಠರು ತಮ್ಮದೇ ರಣತಂತ್ರ ಹೆಣೆದಿದ್ದಾರೆ. ಲೋಕಸಭೆಗೆ ಬಿಜೆಪಿ,ಜೆಡಿಎಸ್(JDS) ದೋಸ್ತಿ ಮಾಡಿಕೊಂಡಿದೆ. ಆದ್ರೆ ಜೆಡಿಎಸ್‌ನ್ನೆ ನಂಬಿ ಕೈ ಕಟ್ಟಿ ಕೂರಲು ಹೈಕಮಾಂಡ್ ಸಿದ್ಧವಿಲ್ಲ.ಜೊತೆಗೆ ಹಳೇ ಮೈಸೂರು ಭಾಗದಲ್ಲಿ ಪಕ್ಷಗಟ್ಟಿಗಳಿಸೋದೇ ವರಿಷ್ಠರು ಮುಖ್ಯವಾಗಿದ್ದು ಒಕ್ಕಲಿಗ ಮತಗಳ ಸೆಳೆಯಲು ಈ ತಂತ್ರ ಹೆಣೆದಿದೆ ಎನ್ನಲಾಗ್ತಿದೆ. ಇದರ ಜೊತೆ ಈಗಾಗಲೇ ಲಿಂಗಾಯತರಿಗೆ ರಾಜ್ಯಾಧ್ಯಕ್ಷ ಹುದ್ದೆ ಕೊಟ್ಟ ಬಿಜೆಪಿ ರಾಜ್ಯದ 2 ಪ್ರಬಲ ಸಮುದಾಯಗಳಿಗೆ ಹುದ್ದೆ ಕೊಟ್ಟಿದೆ.

ಲೋಕಸಭೆ ಚುನಾವಣೆ ದೃಷ್ಟಿಯಿಂದ ಎರಡು ಪ್ರಬಲ ಸಮುದಾಯಗಳ ಓಲೈಕೆ ತಂತ್ರ ಅನುಸರಿದಲಾಗಿದೆ. ವಿಪಕ್ಷ ನಾಯಕ ಪಟ್ಟ ಗಿಟ್ಟಿಸಿಕೊಂಡ ಆರ್.ಅಶೋಕ್‌ ಮುಂದೆ  ಸಾಲು ಸಾಲು ಸವಾಲುಗಳಿವೆ. ಇನ್ನು ಒಕ್ಕಲಿಗ ಸಮುದಾಯಕ್ಕೇ ವಿಪಕ್ಷ ಸ್ಥಾನ ನೀಡೋದೇ ಆಗಿದ್ದರೆ ಹಲವು ಒಕ್ಕಲಿಗ ನಾಯಕರು ಬಿಜೆಪಿಯಲ್ಲಿ ಶಾಸಕರಿದ್ದರು. ಹೀಗಿದ್ದರೂ ಬಿಜೆಪಿ ಹೈಕಮಾಂಡ್(BJP Highcommand) ಆರ್.ಅಶೋಕ್ ಅವರನ್ನೇ ಪರಿಗಣಿಸಿದ್ಯಾಕೆ ಅನ್ನೋ ಪ್ರಶ್ನೆ ಹುಟ್ಟುತ್ತೆ. ಅದಕ್ಕೂ ಹಲವು ಕಾರಣಗಳಿವೆ.ಬಿಜೆಪಿಯಲ್ಲಿ ಹಲವು ಒಕ್ಕಲಿಗ ಸಮುದಾಯದ ಶಾಸಕರಿದ್ದರೂ, ಆರ್. ಅಶೋಕ್ ಸೀನಿಯರ್, ಸತತ 7 ಬಾರಿ ಶಾಸಕರಾಗಿ ಗೆದ್ದಿರುವ ಪ್ರಬಲ ನಾಯಕ ಆರ್ ಅಶೋಕ್ ಡಿಸಿಎಂ ಹಾಗೂ ಸಚಿವರಾಗಿ ಕೆಲಸ ಮಾಡಿರುವ ಅನುಭವ ಹೊಂದಿದ್ದಾರೆ.

 ಇದರ ಜೊತೆ ಕಾಂಗ್ರೆಸ್ ಅಧಿಕಾರಕ್ಕೆ ಬಂದ್ರೂ ಬೆಂಗಳೂರಿನ 28 ಕ್ಷೇತ್ರಗಳ ಪೈಕಿ ಅತಿ ಹೆಚ್ಚು ಅಂದ್ರೆ 16 ಕ್ಷೇತ್ರಗಳಲ್ಲಿ ಬಿಜೆಪಿ ಗೆದ್ದಿದೆ. ಇದರ ಹಿಂದೆ ಆರ್.ಅಶೋಕ್ ಪರಿಶ್ರಮವೂ ಇದೆ. ಹೀಗಾಗಿ ಹೆಚ್ಚು ಸ್ಥಾನ ಗೆದ್ದಿರುವ ಬೆಂಗಳೂರು ಭಾಗದ ನಾಯಕನಿಗೆ ಮಣೆ ಹಾಕುವ ಮೂಲಕ ಮುಂದಿನ ಲೋಕಸಭೆಗೆ ಅನುಕೂಲವಾಗುತ್ತೆ ಅನ್ನೋದು ಬಿಜೆಪಿ ಲೆಕ್ಕಾಚಾರ.ಇನ್ನು ಸದನದಲ್ಲಿ ಸರ್ಕಾರದ ಲೋಪದೋಷವನ್ನು ಗಟ್ಟಿ ಧ್ವನಿಯಲ್ಲಿ ಮಾತನಾಡಲು ಅಶೋಕ್ ಸಮರ್ಥ ನಾಯಕ ಅನ್ನೋದು ಕೂಡ ಬಿಜೆಪಿ ಹೈಕಮಾಂಡ್ ಲೆಕ್ಕಾಚಾರ.

ಇದನ್ನೂ ವೀಕ್ಷಿಸಿ:  Today Horoscope: ಇಂದು ಈ ರಾಶಿಯವರಿಗೆ ಶತ್ರುಗಳ ಬಾಧೆ ಕಾಡಲಿದ್ದು, ಕೆಲಸದಲ್ಲಿ ಕಿರಿಕಿರಿ ಉಂಟಾಗಲಿದೆ..

16:54ಮೋದಿ ವಾರಸ್ದಾರ ಯಾರು? ಕೇಸರಿ ಕೋಟೆಯ ಉತ್ತರಾಧಿಕಾರಿ ರೇಸ್‌ನಲ್ಲಿ ಯೋಗಿ, ಅಮಿತ್ ಶಾ ನಡುವೆ ನಿಕಟ ಪೈಪೋಟಿ!
18:00ಹಸ್ತ ಪಾಳೆಯದಲ್ಲಿ ಸಿದ್ದು ಸೇನೆಯ 'ಸಿದ್ಧ'ತಂತ್ರ: ಡಿಕೆಶಿ ಪಟ್ಟಕ್ಕೆ ಜಾರಕಿಹೊಳಿ ಗಾಳ; 'ಬಂಡೆ' ಸುತ್ತ ಚಕ್ರವ್ಯೂಹ!
43:59Left Right & Centre: ದೇಶದಲ್ಲೀಗ ಮಾನ ಹರಾಜು ಪಾಲಿಟಿಕ್ಸ್ ಜೋರು! ನಿಜಕ್ಕೂ ಮರ್ಯಾದೆ ತೆಗೆದಿದ್ಯಾರು?
21:334 ತಿಂಗಳು, 16 ಲೆಟರ್​; ಸಿಎಂ ಯೋಗಿ ಆದಿತ್ಯನಾಥ್ ಪತ್ರ ತಂತ್ರ ರಹಸ್ಯ
18:02ಬತ್ತಳಿಕೆಯಿಂದ ಬ್ರಹ್ಮಾಸ್ತ್ರ ತೆಗೆದ ಸಿಎಂ ಸಿದ್ದರಾಮಯ್ಯ; ಟಗರು ಗುಮ್ಮಿದ್ದು ಯಾರಿಗೆ?
19:33ರಾಜಾಹುಲಿಯ ರಣಘರ್ಜನೆ, ಸೈಕಲ್ to ಸಿಂಹಾಸನ: ಮಾಜಿ ಸಿಎಂ ಯಡಿಯೂರಪ್ಪ 50 ವರ್ಷಗಳ ರೋಚಕ ಚರಿತ್ರೆ
21:15ಸಪ್ತಸಾಗರದಾಚೆ ಸಿದ್ದು ಬಣದ 'ಅಗೋಚರ ಆಟ': ಡಿಕೆಶಿ ದಂಡು ಕಟ್ಟುವ ಮೊದಲೇ ಸೈನ್ಯ ಜಮಾಯಿಸಿದ್ರಾ ಸಿಎಂ?
20:27ಕಾಂಗ್ರೆಸ್‌ನಲ್ಲಿ ನಿಯತ್ತಿನ ಯುದ್ಧ: ಡಿಕೆ ಯಾವಾಗ ಸಿಎಂ ಆಗ್ತಾರೆ? ಡಿಸಿಎಂ ಬಂಟರ ನೀಡಿದ ಮುಹೂರ್ತ ಏನು?
46:28ತಮಿಳುನಾಡು ಚುನಾವಣಾ ಕಣದಲ್ಲಿ ಬಿರುಗಾಳಿ: ವಿಜಯ್ ಸವಾಲು, ಬಿಜೆಪಿಗೆ ಅಣ್ಣಾಮಲೈ ಶಾಕ್
18:32ಸ್ವಾಮೀಜಿಯನ್ನ ಕಾಲನೇಮಿ ರಾಕ್ಷಸನಿಗೆ ಹೋಲಿಸಿದ್ರಾ ಯೋಗಿ? ಸಂತ Vs ಸನ್ಯಾಸಿ.. ತೆರೆಯ ಹಿಂದಿನ ರೋಚಕ ರಹಸ್ಯ!
Read more