ಲೋಕಸಮರಕ್ಕೆ ಅಖಾಡಕ್ಕಿಳಿದ ಬಿಜೆಪಿ ಜೋಡೆತ್ತು: ಖರ್ಗೆ ತವರಿನಿಂದ ಅಶೋಕ್‌, ಸಿಎಂ ತವರಿನಿಂದ ವಿಜಯೇಂದ್ರ ಪ್ರವಾಸ

Nov 22, 2023, 11:21 AM IST

ಅಧಿಕಾರ ಸಿಕ್ಕ ಬೆನ್ನಲ್ಲೇ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ(BY Vijayendra), ವಿರೋಧ ಪಕ್ಷದ ನಾಯಕ ಆರ್. ಅಶೋಕ್ (R.Ashok) ಆ್ಯಕ್ಟಿವ್ ಆಗಿದ್ದಾರೆ. ಮಲ್ಲಿಕಾರ್ಜುನ್ ಖರ್ಗೆ(Mallikarjun Kharge) ತವರಿನಿಂದ ಆರ್. ಅಶೋಕ್ ಬರ ಪ್ರವಾಸ ಮಾಡಿದ್ರೆ, ಸಿದ್ದರಾಮಯ್ಯ ತವರಿನಿಂದ ವಿಜಯೇಂದ್ರ ಪಕ್ಷ ಸಂಘಟನೆ ಪ್ರವಾಸ ಮಾಡುತ್ತಿದ್ದಾರೆ. ಲೋಕಸಭೆಗೂ(Loksabha) ಮುನ್ನ ಸರ್ಕಾರದ ವಿರುದ್ಧ ಅಲೆ ಸೃಷ್ಟಿಸಲು ರಣತಂತ್ರ ರೂಪಿಸಲಾಗುತ್ತಿದೆ. ಡಿಸೆಂಬರ್ 4ರಿಂದ ಬೆಳಗಾವಿಯಲ್ಲಿ ಚಳಿಗಾಲದ ಅಧಿವೇಶನ ನಡೆಯಲಿದೆ. ಅಧಿವೇಶನದಲ್ಲಿ ಸರ್ಕಾರ ಕಟ್ಟಿಹಾಕಲು ವಿಪಕ್ಷ ನಾಯಕ ಅಶೋಕ್ ಸಿದ್ಧತೆ ನಡೆಸುತ್ತಿದ್ದಾರೆ. ಬರ ಅಧ್ಯಯನ ನಡೆಸಿ, ರೈತರ ಅಭಿಪ್ರಾಯ ಸಂಗ್ರಹಿಸಲು ಅಶೋಕ್ ಮುಂದಾಗಿದ್ದಾರೆ. ಅಧಿವೇಶನದಲ್ಲಿ ರೈತರ ಅಭಿಪ್ರಾಯ, ಬರ ವಾಸ್ತವತೆ ಬಿಚ್ಚಿಡಲು ಪ್ಲಾನ್ ಮಾಡಲಾಗಿದೆ. ಅಧಿವೇಶನ ಮೂಲಕವೇ ಕಾಂಗ್ರೆಸ್ ವಿರುದ್ಧ ಪ್ರಚಾರಕ್ಕೆ ರಣತಂತ್ರ ರೂಪಿಸುವ ಸಾಧ್ಯತೆ ಇದೆ. ಲೋಕಸಮರದಲ್ಲಿ ‘ಗ್ಯಾರಂಟಿ’ ಕಾಂಗ್ರೆಸ್ ಕಟ್ಟಿಹಾಕಲು ವಿಜಯ ವ್ಯೂಹ ರಚಿಸಲಾಗ್ತಿದೆ. ಮಂಡ್ಯ, ಮೈಸೂರು ಭಾಗದಲ್ಲಿ ಸುತ್ತಾಡಿದ ಬಿ.ವೈ. ವಿಜಯೇಂದ್ರ. ಹಳೆ ಮೈಸೂರು ಭಾಗದ ಒಕ್ಕಲಿಗ ಮತಗಳ ಸೆಳೆಯಲು ಮಾಸ್ಟರ್ ಪ್ಲಾನ್ ಮಾಡುತ್ತಿದ್ದಾರೆ.

ಇದನ್ನೂ ವೀಕ್ಷಿಸಿ:  ಜಾತಿ ಗಣತಿ ವರದಿ ಬಿಡುಗಡೆ ಸಿಎಂ ಸಿದ್ದರಾಮಯ್ಯ ಒಲವು, ಡಿಕೆ ಶಿವಕುಮಾರ್ ವಿರೋಧ!