ಜನ ನಿರೀಕ್ಷೆಯಂತೆ ಕೈ ಹಿಡಿಲಿಲ್ಲ, ಆದ್ರೂ ಕೇಂದ್ರದಲ್ಲಿ ಅಧಿಕಾರ ಹಿಡಿಯಲು ಪ್ರಯತ್ನ ಮಾಡ್ತೀವಿ: ಪ್ರಿಯಾಂಕ್ ಖರ್ಗೆ

ಜನ ನಿರೀಕ್ಷೆಯಂತೆ ಕೈ ಹಿಡಿಲಿಲ್ಲ, ಆದ್ರೂ ಕೇಂದ್ರದಲ್ಲಿ ಅಧಿಕಾರ ಹಿಡಿಯಲು ಪ್ರಯತ್ನ ಮಾಡ್ತೀವಿ: ಪ್ರಿಯಾಂಕ್ ಖರ್ಗೆ

Published : Jun 05, 2024, 09:51 AM IST

ಜೆಡಿಎಸ್ ಬಿಜೆಪಿ ಮೈತ್ರಿಯಿಂದಾಗಿ ನಮಗೆ ಹಿನ್ನಡೆ ಆಗಿರಬಹುದು ಅಂತ ಮೇಲ್ನೋಟಕ್ಕೆ ಅನ್ನಿಸುತ್ತೆ ಎಂದು ಪ್ರಿಯಾಂಕ್‌ ಖರ್ಗೆ ಹೇಳಿದ್ದಾರೆ.
 

ನಮ್ಮ ಸರ್ಕಾರದ ಯೋಜನೆಗಳನ್ನು ಪ್ರಾಮಾಣಿಕವಾಗಿ ಜನರಿಗೆ ತಲುಪಿಸಿದ್ದೇವೆ, ಕಲ್ಯಾಣ ಕರ್ನಾಟಕದ (Kalyana Karnataka) ಅಭಿವೃದ್ಧಿ ನೀಲಿನಕ್ಷೆ ರೂಪಿಸಿದ್ದೇವೆ, ನಾವು ಅಭಿವೃದ್ಧಿಗೆ ಆದ್ಯತೆ ಕೊಟ್ಟಿದ್ದೇವೆ ಎಂದು ಕಲಬುರಗಿಯಲ್ಲಿ ಸಚಿವ ಪ್ರಿಯಾಂಕ್ ಖರ್ಗೆ (Priyank Kharge) ಹೇಳಿಕೆ ನೀಡಿದ್ದಾರೆ. ಕಲಬುರಗಿ ಲೋಕಸಭಾ ಕ್ಷೇತ್ರದಲ್ಲಿ(Kalaburagi Lok sabha) ಕಾಂಗ್ರೆಸ್ ಗೆಲುವಿಗೆ ಪ್ರಿಯಾಂಕ್ ಖರ್ಗೆ ಪ್ರತಿಕ್ರಿಯೆ ನೀಡಿ, ನಾವು ಜಾತಿ, ದೇವರು, ಧರ್ಮದ ಹೆಸರಿನಲ್ಲಿ ಚುನಾವಣೆ ಮಾಡಿಲ್ಲ. ಅಭಿವೃದ್ಧಿ ಯೋಜನೆಗಳನ್ನು ನೋಡಿ  ಜನ ನಮಗೆ ಆಶೀರ್ವಾದ ಮಾಡಿದ್ದಾರೆ. ಕಲ್ಯಾಣ ಕರ್ನಾಟಕದಲ್ಲಿ ಐದಕ್ಕೆ ಐದು ಸ್ಥಾನ ಗೆದ್ದಿರುವುದು ಸಂತೋಷ ತಂದಿದೆ ಎಂದು ಹೇಳಿದ್ದಾರೆ.

ರಾಜ್ಯದಲ್ಲಿ ಇನ್ನಷ್ಟು ಸ್ಥಾನ ಗೆಲ್ಲುವ ನಿರೀಕ್ಷೆ ಇತ್ತು ಆದರೆ ಆಗಿಲ್ಲ, ಏಕೆಂದು ಸಮಾಲೋಚನೆ ಮಾಡುತ್ತೇವೆ, ಹೋದ ಬಾರಿಯಂತೆ ನಾಲ್ಕು ಲಕ್ಷ, ಮೂರು ಲಕ್ಷ ಅಂತರದಿಂದ ಬಿಜೆಪಿಯವರು(BJP) ಗೆಲ್ಲಲು ಸಾಧ್ಯವಾಗಿಲ್ಲ, ಜೆಡಿಎಸ್ ಬಿಜೆಪಿ ಮೈತ್ರಿಯಿಂದಾಗಿ ನಮಗೆ ಹಿನ್ನಡೆ ಆಗಿರಬಹುದು ಅಂತ ಮೇಲ್ನೋಟಕ್ಕೆ ಅನ್ನಿಸುತ್ತೆ, ಆದರೆ ಜೆಡಿಎಸ್ ನವರು ಒಂದು ಸ್ಥಾನ ಕಳೆದುಕೊಂಡಿದ್ದಾರೆ, ಬಿಜೆಪಿಯವರು ಹಲವಾರು ಸ್ಥಾನ ಕಳೆದುಕೊಂಡಿದ್ದಾರೆ ಎಂದು ವಿವರಿಸಿದರು. 

ಬೆಂಗಳೂರು ಗ್ರಾಮಾಂತರದಲ್ಲಿ ಡಿ ಕೆ ಸುರೇಶ್ (D K Suresh) ಸೋಲು ಅಘಾತ ತಂದಿದೆ, ಕಳೆದ ಬಾರಿ ಮಲ್ಲಿಕಾರ್ಜುನ ಖರ್ಗೆ ಅವರನ್ನು ಟಾರ್ಗೆಟ್ ಮಾಡಿದಂತೆ ಈ ಬಾರಿ ಬಿಜೆಪಿಯವರು ಡಿ ಕೆ ಸುರೇಶ್  ಅವರನ್ನು ಟಾರ್ಗೆಟ್ ಮಾಡಿದ್ರು, ಖರ್ಗೆ ಅವರನ್ನು ಕಳೆದುಕೊಂಡು ಕಲಬುರಗಿ ಅಭಿವೃದ್ಧಿ ಕಾಣದಂತೆ ಆಯಿತು. ಅದೇ ರೀತಿ ಬೆಂಗಳೂರು ಗ್ರಾಮಾಂತರ ಜನರೂ ಅನುಭವಿಸ್ತಾರೆ ಎಂದು ಬೇಸರ ಹೊರಹಾಕಿದರು. 

ದೇಶದಲ್ಲಿ 295 ಸ್ಥಾನ ಗೆಲ್ಲುವ ನಿರೀಕ್ಷೆ ಹುಸಿಯಾಗಿರುವ ಬಗ್ಗೆ ಖರ್ಗೆ ಪ್ರತಿಕ್ರಿಯೆ ನೀಡಿ,ಜನ ನಮ್ಮ ನಿರೀಕ್ಷೆಯಂತೆ ಕೈ ಹಿಡಿಲಿಕ್ಕಿಲ್ಲ. ಆದ್ರೆ, ಬಿಜೆಪಿಯವರಿಗೂ ಜನ ಕೈ ಹಿಡಿದಿಲ್ಲ, ಅವರು ಚಾರಸೋ ಪಾರ್ ಅಂತಿದ್ರು, ಕೇಂದ್ರದಲ್ಲಿ ಅಧಿಕಾರ ಹಿಡಿಯಲು ನಾವು ಖಂಡಿತ ಪ್ರಯತ್ನ ಮಾಡ್ತಿವಿ, ನಾವು ಚುನಾವಣೆ ನಡೆಸುವುದೇ ಅಧಿಕಾರಕ್ಕೆ ಬರುವುದಕ್ಕೋಸ್ಕರ, ಅಧಿಕಾರ ಪಡೆಯುವುದು ಜ‌ನ ಸೇವೆ ಮಾಡಲು ಸಂವಿಧಾನ ಉಳಿಸಲು.ನಮ್ಮ ಹಳೆಯ ಸ್ನೇಹಿತರ ಭೇಟಿ ಮಾಡ್ತಿವಿ, ಅವರೂ ನಮ್ಮ ಜೊತೆ ಬರಬಹುದು ಬಿಜೆಪಿಯವರೂ ನಮ್ಮ ಜೊತೆ ಬರಬಹುದುಕಾದು ನೋಡೋಣ ಏನಾಗುತ್ತದೆ ಎಂದು ಕೇಂದ್ರದಲ್ಲಿ ಅಧಿಕಾರಕ್ಕೆ ಬರುವ ಬಗ್ಗೆ ಮಾತನಾಡಿದ್ದಾರೆ.

ಇದನ್ನೂ ವೀಕ್ಷಿಸಿ:  ಶ್ರೀರಾಮುಲು ನಾವು ಜೊತೆಗಿದ್ದೆವು ಅವರ ಸೋಲಿಗೆ ಅನುಕಂಪವಿದೆ: ಸಚಿವ ನಾಗೇಂದ್ರ

20:04ಏನಿದು ಡಿಕೆ ಮಾತಿನ ಮರ್ಮ? ಶಕ್ತಿವಂತರಿಗೆ ಶತ್ರುಗಳು ಜಾಸ್ತಿ: ಬಂಡೆ ಹೇಳಿದ ಶತ್ರು ರಹಸ್ಯ!
23:23ಮಹಾ ದಾಖಲೆಗೆ ಸಿದ್ದು ಅರಸ.. ಮೊಳಗಿತು ರಣಘೋಷ..! ಡಿಕೆ ಮೌನದ ಹಿಂದೆ ಅಡಗಿದ್ಯಾ ಗುಡುಗಿನ ಸದ್ದು..?
22:45ದಳಪತಿ Vs ಗಣಿಧಣಿ, 20 ವರ್ಷಗಳ ರಣ ದುಷ್ಮನಿ! ಗಾಲಿ ರೆಡ್ಡಿ ಪರವಾಗಿ ಅಖಾಡಕ್ಕಿಳಿದ HDK!
24:03Narendra Modi: 2025ರಲ್ಲಿ ಪ್ರಧಾನಿ ನರೇಂದ್ರ ಮೋದಿ ಸಾಧನೆ ಏನು? ಇಲ್ಲಿದೆ ನೋಡಿ ಸಂಪೂರ್ಣ ವರದಿ
20:58ಅಣ್ಣನನ್ನೇ ಓವರ್ ಟೇಕ್ ಮಾಡಿದ್ರಾ ಮುದ್ದಿನ ತಂಗಿ? ಅರ್ಧ ನಿಜವಾಗಿದೆ ಅಂದು ಇಂದಿರಾ ನುಡಿದಿದ್ದ ಭವಿಷ್ಯ!
20:43ಸಿಎಂ ಪಟ್ಟದ ಪಗಡೆಯಾಟದಲ್ಲಿ ಡಿಕೆಶಿ ವೈರಾಗ್ಯದ ನುಡಿ: ಸಿದ್ದು ಅಹಿಂದ ಬ್ರಹ್ಮಾಸ್ತ್ರಕ್ಕೆ ಸಿಂಹಾಸನ ದಿಗ್ಬಂಧನ?
22:34ರಾಹುಕಾಲ ರಹಸ್ಯ..! ಸಿದ್ದು ಆಪ್ತನ ಪತ್ರವ್ಯೂಹ.. ರಾಹುಲ್ ಕೈಯಲ್ಲಿ ಡಿ.ಕೆ.ಶಿವಕುಮಾರ್ ಪಟ್ಟ ಭವಿಷ್ಯ!
25:15ಜೂನಿಯರ್ ಇಂದಿರೆ, ಪ್ರಚಂಡ ಪ್ರಿಯಾಂಕಾ; ಬದ್ಧವೈರಿಗಳ ಬಾಯಲ್ಲೇ ಗುಣಗಾನ
23:33ಒಂದೇ ಕಲ್ಲಿನಲ್ಲಿ ಎರಡು ಹಕ್ಕಿ ಹೊಡೆದಿದ್ದು ಹೇಗೆ ರಣಬೇಟೆಗಾರ ಸಿಎಂ ಸಿದ್ದರಾಮಯ್ಯ?
05:37ಡೆವಿಲ್ ಸಿನಿಮಾದಲ್ಲಿ ದರ್ಶನ್ ಸಿಎಂ..! ಕಿಚ್ಚ ಸುದೀಪ್ ಹೇಳಿದ ಪಾಲಿಟಿಕ್ಸ್ ಸೀಕ್ರೆಟ್ ಏನು?