ಕಾಂಗ್ರೆಸ್ ಪಕ್ಷದಲ್ಲಿ ಹೆಂಡ್ತಿ ಮಕ್ಕಳಿಗಾಗಿ ಟಿಕೆಟ್ ಸರ್ಕಸ್: ಜೆಡಿಎಸ್‌ನಲ್ಲಿ ಈ ಬಾರಿ ಯಾರಿಗೆ..ಯಾವ ಕ್ಷೇತ್ರದ ಟಿಕೆಟ್..?

ಕಾಂಗ್ರೆಸ್ ಪಕ್ಷದಲ್ಲಿ ಹೆಂಡ್ತಿ ಮಕ್ಕಳಿಗಾಗಿ ಟಿಕೆಟ್ ಸರ್ಕಸ್: ಜೆಡಿಎಸ್‌ನಲ್ಲಿ ಈ ಬಾರಿ ಯಾರಿಗೆ..ಯಾವ ಕ್ಷೇತ್ರದ ಟಿಕೆಟ್..?

Published : Dec 11, 2023, 09:40 AM IST

ರಾಜ್ಯದಲ್ಲಿ ಶುರುವಾಗಿದೆ ಲೋಕಸಭೆ ಟಿಕೆಟ್‌ಗಾಗಿ ಕಸರತ್ತು
ಮಕ್ಕಳಿಗೆ ಟಿಕೆಟ್ ಕೊಡಿಸುವ ಪ್ರಯತ್ನದಲ್ಲಿ  ನಾಯಕರು
ಈಗಲೇ ಹೈ ಕಮಾಂಡ್ ಬಾಗಿಲು ಬಡಿದಿರೋ ನಾಯಕರು

ಲೋಕಸಭೆ ಚುನಾವಣೆ ಹತ್ತಿರವಾಗುತ್ತಿದೆ. ಹತ್ತಿರವಾಗುತ್ತಿರೋ 2024ರ ಲೋಕಸಭಾ ಚುನಾವಣೆಗೆ(Loksabha) ರಾಜ್ಯದಲ್ಲಿ ಈಗಲೇ ತಯಾರಿ ನಡೆಯುತ್ತಿದೆ. ಎಲ್ಲ ಪಕ್ಷಗಳು ಕೇಂದ್ರ ಚುನಾವಣೆಯಲ್ಲಿ ಗೆಲುವಿನ ಸೂತ್ರಗಳನ್ನು ಹೆಣೆಯಲಾರಂಭಿಸಿವೆ. 2024ರ ಈ ಚುನಾವಣೆಗೆ, ಮೂರೂ ಪಕ್ಷದ ನಾಯಕರು ತಮ್ಮ ಮಕ್ಕಳು ಹೆಂಡ್ತಿಯರಿಗೆ ಟಿಕೆಟ್(Ticket) ಬೇಡಿಕೆ ಇಡುತ್ತಿದ್ದಾರೆ. ಈ ಬಾರಿ ಮೂರು ಪಕ್ಷಗಳಲ್ಲಿ ಕುಟುಂಬ ರಾಜಕಾರಣ(Family politics) ಜೋರಾಗಿ ನಡೆಯುತ್ತಿರುವಂತೆ ಕಾಣುತ್ತಿದೆ. 2024ರ ಏಪ್ರಿಲ್ ಅಥವಾ ಮೇ ತಿಂಗಳಿನಲ್ಲಿ ಲೋಕಸಭಾ ಚುನಾವಣೆ ನಡೆಯುವ ಸಾಧ್ಯತೆ ಇದೆ. ಬರಲಿರೋ ಈ ಚುನಾವಣೆ ಎಲ್ಲರಿಗೂ ತುಂಬಾ ಮಹತ್ವದ ಚುನಾವಣೆ ಆಗಲಿದೆ. ಮೋದಿ (Narendra Modi)ನಾಯಕತ್ವದ ಬಿಜೆಪಿ ಪಕ್ಷಕ್ಕೆ, ಮೂರನೇ ಬಾರಿ ಗದ್ದುಗೆ ಹಿಡಿಯುವ ಆಸೆ. ಹತ್ತು ವರ್ಷಗಳಿಂದ ಅಧಿಕಾರ ವಂಚಿತವಾಗಿರುವ ಕಾಂಗ್ರೆಸ್‌ಗೆ(Congress), ಈ ಬಾರಿ ಹೇಗಾದ್ರು ಮಾಡಿ ಲೋಕಸಭೆಯಲ್ಲಿ ಗೆಲ್ಲಲೇಬೇಕಂಬ ಹಠ. ಹಾಗೆನೇ ಉಳಿದ ಪ್ರಾದೇಶಿಕ ಪಕ್ಷಗಳಿಗೂ ಸಹ, ಹೇಗಾದ್ರು ಮಾಡಿ ಮೋದಿಯನ್ನು ಅಧಿಕಾರದಿಂದ ಕೆಳಗಿಳಿಸಬೇಕೆಂಬ ಮೊಂಡತನ ಹುಟ್ಟಿಕೊಂಡಿದೆ. ಹೀಗಾಗಿ 2024ರ ಲೋಕಸಭಾ ಚುನಾವಣೆ ನ್ಯಾಷನಲ್ ಪಾರ್ಟಿಗಳು ಸೇರಿಂದಂತೆ ಎಲ್ಲ ಪಕ್ಷಗಳು ಸಹ ಈ ಚುನಾವಣೆಯನ್ನು ಅತ್ಯಂತ ಪ್ರತಿಷ್ಠೆಯಾಗಿ ತೆಗೆದುಕೊಳ್ಳಲಿವೆ. ಹೀಗಾಗಿ ಎಲ್ಲ ರಾಜ್ಯಗಳಲ್ಲಿ ಈಗಿನಿಂದಲೇ ಲೋಕಸಭಾ ಚುನಾವಣೆ ತಯಾರಿ ಸೈಲೆಂಟಾಗಿನೇ ನಡೆಯುತ್ತಿವೆ. ನಮ್ಮ ರಾಜ್ಯದಲ್ಲೂ ಎಲ್ಲ ಪಕ್ಷಗಳಿಂದ ಲೋಕಸಭಾ ತಯಾರಿ ಜೋರಾಗಿದೆ. ರಾಜ್ಯದಲ್ಲಿ ಲೋಕಸಭಾ ತಯಾರಿಯಲ್ಲಿರುವ ಎಲ್ಲ ಪಕ್ಷದ ನಾಯಕರು, ತಮ್ಮ ಮಕ್ಕಳು, ಹೆಂಡ್ತಿಯರಿಗೆ ಟಿಕೆಟ್ ಬೇಡಿಕೆ ಇಡುತ್ತಿದ್ದಾರೆ ಎಂಬ ಮಾತುಗಳು ಕೇಳಿ ಬರ್ತಿವೆ.

ಇದನ್ನೂ ವೀಕ್ಷಿಸಿ:  ಪುಣ್ಯಕ್ಷೇತ್ರದ ಪಕ್ಕದ ಕಗ್ಗೆರೆಯಲ್ಲಿ ಇದೇನಿದು ಪವಾಡ.. ವಿಸ್ಮಯ..!? ಎಡೆಯೂರು ಸಿದ್ಧಲಿಂಗೇಶ್ವರ ಮಹಾತ್ಮೆ..!

21:25DK Shivakumar: ಸಿದ್ದು ಸಂಪ್ರದಾಯ ಮುರಿದ ಡಿಕೆಶಿ: ಗಾಂಧಿಗಿರಿ ಹಿಂದಿನ ರಣತಂತ್ರವೇನು?
21:34ಡಿಫರೆಂಟ್ ಡಿಕೆ: ವಿದುರ ನೀತಿ.. ಚಾಣಕ್ಯ ತಂತ್ರ.. ರಾಜ್ಯ ರಾಜಕಾರಣದಲ್ಲಿ 'ಬಂಡೆ'ಯ ಹೊಸ ಚದುರಂಗದಾಟ!
23:34ಮೂಕಾಂಬಿಕೆ ದರ್ಶನಕ್ಕೆ ದಳಪತಿ ವಿಜಯ್: ಎಂಜಿಆರ್‌ ಸಂಪ್ರದಾಯ ಮುಂದುವರಿಸಿದ ತಮಿಳು ನಾಯಕ
19:53ಡಿಕೆ ಹೆಸರು ಕೇಳಿದ ಕೂಡಲೇ ಕೈ ಮುಗಿದದ್ದೇಕೆ ದಳಪತಿ! ಗುರುವಿನ ಹಾದಿಯಲ್ಲಿ ಶಿಷ್ಯ, ಮರುಕಳಿಸುತ್ತಾ 1999ರ ಇತಿಹಾಸ?
27:29ಡಿಕೆ ಸರ್ಕಾರ.. ಹೊಸ ಅವತಾರ: ಮೀನಹೆಜ್ಜೆ.. ಜಾಣಮೌನ.. ಮಿಂಚಿನ ಬಾಣ: ಹೇಗಿದೆ ಬಂಡೆ ಆಡಳಿತ?
21:28ದೇಶದ ನಂಬರ್​​ 1 ಶ್ರೀಮಂತ ಸಿಎಂ ಡಿಕೆಶಿ ! ಆಸ್ತಿ ಡಬಲ್​​​​ ಆಗಿದ್ದು ಹೇಗೆ ಗೊತ್ತಾ ?
23:53ಡಿಕೆ ಸರ್ಕಾರ ವಾಸ್ತು ಪ್ರಕಾರ ; ಡಿಕೆಶಿ ಸರ್ಕಾರದಲ್ಲಿ ಎಲ್ಲವೂ ಬದಲು.. ಪಕ್ಕಾ ವಾಸ್ತು ಪ್ರಕಾರ..!
23:00‘ರಾಮ’ರಣವ್ಯೂಹ ಛಿದ್ರಗೊಳಿಸಿದ ‘ಶಿವ’ ನಿಗೂಢತೆಯಲ್ಲಿಯೇ ಅಂತ್ಯಗೊಂಡ ಪ್ರಹಸನ; ಟ್ರಬಲ್ ಹಂಟಿಂ
23:25ಟ್ರಬಲ್ ಶೂಟರ್‌​ಗೆ ಟ್ರಬಲ್! ಎರಡೇ ದಿನಕ್ಕೆ ಮೊದಲ ವಿಕೆಟ್..! ಆಸ್ಫೋಟದ ಹಿಂದಿನ ಅಸಲಿ ಗುಟ್ಟು ಏನು?
21:41ಕಮಲ ಬಿಟ್ಟು ಅಖಾಡಕ್ಕಿಳಿದ 'ಸಿಂಗಂ' ! 'ವಿ ದಿ ಲೀಡರ್ಸ್' ಹೊಸ ಆಂದೋಲನ ಘೋಷಿಸಿದ ಅಣ್ಣಾಮಲೈ!
Read more