ಫ್ರೀ ಕೊಟ್ಟು ಆರ್ಥಿಕ ಒತ್ತಡಕ್ಕೆ ಬಿತ್ತಾ ಆ ರಾಜ್ಯ?: ಕರ್ನಾಟಕದಲ್ಲಿ ಹೇಗಿದೆ ಗೊತ್ತಾ ಪರಿಸ್ಥಿತಿ..?

Jun 17, 2023, 10:59 AM IST

ರಾಜ್ಯದಲ್ಲೀಗ ಸಿದ್ದರಾಮಯ್ಯ ಸರ್ಕಾರದ್ದೇ ದರ್ಬಾರು. ಕಂಡುಕೇಳರಿಯದ ರೀತಿಯಲ್ಲಿ ವಿಜಯ ಸಾಧಿಸಿರೋ ಹಸ್ತ ಪಾಳಯ, ಕೊಟ್ಟ ಮಾತಂತೆ ನಡೆಕೊಳ್ತಾ ಇದೆ. ತಾನು ನೀಡಿದ್ದ 5 ಗ್ಯಾರಂಟಿಗಳ ಪೈಕಿ, ಆಲ್ರೆಡಿ ಶಕ್ತಿ ಯೋಜನೆಗೆ ಚಾಲನೆ ಕೊಟ್ಟಿದೆ.ಉಳಿದಿರೋ ನಾಲ್ಕೂ ಯೋಜನೆಗಳನ್ನೂ ಆದಷ್ಟು ಬೇಗ ಜಾರಿಗೊಳಿಸೋದಕ್ಕೆ, ಸಕಲ ಸಿದ್ಧತೆ ನಡೆಸ್ತಾ ಇದೆ ಕಾಂಗ್ರೆಸ್. ಆದ್ರೆ, ಪ್ರತಿಯೊಂದು ಯೋಜನೆಗಳ ಎದುರಿಗೂ ಪ್ರಚಂಡ ಸವಾಲುಗಳು ಬಂದು ನಿಂತಿದ್ದಾವೆ. ಅದನ್ನೆಲ್ಲಾ ನಿಭಾಯಿಸಿ, ಕೊಟ್ಟ ಮಾತಂತೆ ನಡೆದುಕೊಳ್ಳೋದಕ್ಕೆ ಕಾಂಗ್ರೆಸ್ ಸಜ್ಜಾಗಿದೆ. ಒಂದು ಕಡೆ, ಕಾಂಗ್ರೆಸ್ ತನ್ನ ಯೋಜನಗಳನ್ನ ಹೇಗೆ ಜಾರಿಗೆ ತರೋದು ಅಂತ ಯೋಚಿಸ್ತಾ ಇದ್ರೆ, ಬಿಜೆಪಿ ಮಾತ್ರ, ಈ ಫ್ರೀ ಯೋಜನೆಗಳನ್ನ ಹೇಗೆ ವಿರೋಧಿಸೋದು ಅನ್ನೋ ಗೊಂದಲದಲ್ಲಿದೆ. ಒಂದ್ ಕಡೆ, ಕೊಟ್ಟ ಮಾತಂತೆ ಜನಕ್ಕೆ ಫ್ರೀ ಗ್ಯಾರಂಟಿ ಕೊಡ್ರಿ ಅಂತ ಪಟ್ಟು ಹಿಡಿಯೋ ಇದೇ ಬಿಜೆಪಿ, ಎಲ್ಲವನ್ನೂ ಫ್ರೀ ಕೊಡೋಕೆ ದುಡ್ಡೆಲ್ಲಿಂದ ತರ್ತೀರಿ ಅಂತ ಕೇಳುತ್ತೆ.. ಒಟ್ಟಾರೆ, ರಾಜ್ಯ ಬಿಜೆಪಿಗೆ ಕಾಂಗ್ರೆಸ್ ಗ್ಯಾರಂಟಿಗಳು ಬಿಸಿತುಪ್ಪ ಆದ ಹಾಗೆ ಕಾಣ್ತಾ ಇದೆ.

ಇದನ್ನೂ ವೀಕ್ಷಿಸಿ: 2028ರ ಕುರುಕ್ಷೇತ್ರಕ್ಕೂ ರೆಡಿಯಾಗ್ತಿದೆ ಡಿಸಿಎಂ ಬ್ಲೂ ಪ್ರಿಂಟ್: ತೊಡೆ ತಟ್ಟಿದವರೇ ಟಾರ್ಗೆಟ್.. ಏನಿದು ಡಿಕೆ ಬೇಟೆ ಸೀಕ್ರೆಟ್..?