ಮೋದಿ ನೂತನ ಸಂಸತ್ ಉದ್ಘಾಟನೆ ಮಾಡಬಾರದಂತೆ: ಕೆಂಡ ಕಾರುತ್ತಿರುವುದೇಕೆ 19 ವಿಪಕ್ಷಗಳು..?

May 27, 2023, 1:28 PM IST

ನವ ಸಂಸತ್ ಭವನದ ಉದ್ಘಾಟನೆ ಒಂದು ಮಹತ್ವದ ಸಂದರ್ಭವಾಗಿದೆ. ಆದರೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಸಂಪೂರ್ಣವಾಗಿ ಬದಿಗಿಟ್ಟು ಹೊಸ ಸಂಸತ್ತಿನ ಕಟ್ಟಡವನ್ನು ಸ್ವತಃ ಉದ್ಘಾಟಿಸುವ ಪ್ರಧಾನಿ ಮೋದಿಯವರ ನಿರ್ಧಾರ ಘೋರ ಅವಮಾನ. ನಮ್ಮ ಪ್ರಜಾಪ್ರಭುತ್ವದ ಮೇಲಿನ ನೇರ ದಾಳಿ. ಸಂವಿಧಾನದ 79ನೇ ವಿಧಿಯ ಪ್ರಕಾರ, ರಾಷ್ಟ್ರಪತಿ ದ್ರೌಪದಿ ಮುರ್ಮು ರಾಷ್ಟ್ರದ ಮುಖ್ಯಸ್ಥೆ, ಅಷ್ಟೇ ಅಲ್ಲ ಸಂಸತ್ತಿನ ಅವಿಭಾಜ್ಯ ಅಂಗವೂ ಹೌದು. ಅಧ್ಯಕ್ಷರಿಲ್ಲದೆ ಸಂಸತ್ತು ಕಾರ್ಯನಿರ್ವಹಿಸಲು ಸಾಧ್ಯವಿಲ್ಲ. ಆದರೂ, ಅವರು ಇಲ್ಲದೆ ಹೊಸ ಸಂಸತ್ತಿನ ಕಟ್ಟಡವನ್ನು ಉದ್ಘಾಟಿಸಲು ಪ್ರಧಾನಿಗಳು ನಿರ್ಧರಿಸಿದ್ದಾರೆ. ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಸಂಪೂರ್ಣವಾಗಿ ಬದಿಗಿಟ್ಟಿದ್ದಾರೆ. ಇದು ಘೋರ ಅವಮಾನ ಮಾತ್ರವಲ್ಲದೆ ನಮ್ಮ ಪ್ರಜಾಪ್ರಭುತ್ವದ ಮೇಲೆ ನೇರ ಆಕ್ರಮಣವಾಗಿದೆ ಎಂದು ವಿರೋಧ ಪಕ್ಷಗಳು ಆರೋಪಿಸಿವೆ. 

ಇದನ್ನೂ ವೀಕ್ಷಿಸಿ: IPL Betting: ಸ್ನೇಹಿತನಿಗೆ ನ್ಯಾಯ ಕೊಡಿಸಲು ಹೋಗಿ ಪ್ರಾಣಬಿಟ್ಟ : ಗೆದ್ದ ಹಣ ಕೊಡು ಅಂದಿದ್ದೇ ತಪ್ಪಾಗಿಹೊಯ್ತಾ ?