Apr 15, 2024, 11:02 AM IST
ಲೋಕಸಭಾ ಚುನಾವಣೆ ಹಿನ್ನೆಲೆ ಮೈಸೂರು, ಮಂಗಳೂರಲ್ಲಿ ಪ್ರಧಾನಿ ಮೋದಿ ಪ್ರಚಾರದ (Modi campaign) ಅಬ್ಬರ ಜೋರಾಗಿದ್ದು, ಮೋದಿ ಆಗಮನದಿಂದ ಎರಡೂ ಕಡೆ ವಾತಾವರಣ ಬದಲಾದಂತೆ ಕಾಣುತ್ತಿದೆ. ಅದರಲ್ಲೂ ಮೈಸೂರು(Mysore) ಭಾಗದಲ್ಲಿ ದೋಸ್ತಿಗೆ ಮೈತ್ರಿ ಬಲ ಹೆಚ್ಚಾಗಲಿದೆ ಎನ್ನಲಾಗಿದೆ. ಈ ನಡುವೆ ಮೋದಿ(Narendra Modi) ಹಾಗೂ ಮಾಜಿ ಪ್ರಧಾನಿ ದೇವೇಗೌಡರ(Devegowda) ಸಮಾವೇಶಕ್ಕೆ ಭರ್ಜರಿ ಪ್ರತಿಕ್ರಿಯೆ ವ್ಯಕ್ತವಾಗಿದೆ. ಈ ದೋಸ್ತಿ ಸಮಾವೇಶಕ್ಕೆ ಭಾರೀ ಜನಸಾಗರವೇ ಹರಿದುಬಂದಿದ್ದು, ಜಾತಿ ಲೆಕ್ಕಾಚಾರದ ಕ್ಷೇತ್ರದಲ್ಲಿ ಇದೀಗ ಹಿಂದುತ್ವದ ಅಲೆ ಹೆಚ್ಚಾಗಿದೆ. ಹಾಗೂ ಜಾತಿ ಹೆಸರಲ್ಲಿ ಛಿದ್ರವಾಗಿದ್ದ ಮತಗಳು ಹಿಂದುತ್ವದ ಹೆಸರಲ್ಲಿ ಒಗ್ಗಟ್ಟಾಗಲಿವೆ ಎಂದು ಲೆಕ್ಕಾಚಾರ ಹಾಕಲಾತ್ತಿದೆ. ಇದರ ನಡುವೆ ಜಾತಿ-ಮತ ಬಿಟ್ಟು ದೇಶಕ್ಕಾಗಿ ಹಾಗೂ ಮೋದಿಗೆ ಮತ ನೀಡಿ ಎಂಬ ಸಂದೇಶವನ್ನು ಈ ಮೂಲಕ ನೀಡಲಾಗಿದೆ. ಅಲ್ಲದೆ ಮಾಜಿ ಪ್ರಧಾನಿ ದೇವೇಗೌಡರು ಪ್ರಧಾನಿ ಮೋದಿ ಅವರನ್ನು ಗುಣಗಾನ ಮಾಡಿದ್ದಾರೆ. ಇದಕ್ಕೆ ತಮ್ಮದೇ ಆದ ರೀತಿಯಲ್ಲಿ ಮೋದಿ ಅವರ ಮಣ್ಣಿನ ಮಗನ ಸಾಧನೆ ಶ್ಲಾಘಿಸಿದರು. ಈ ವೇಳೆ ಇಬ್ಬರೂ ಸೇರಿ ಕಾಂಗ್ರೆಸ್ ಸರ್ಕಾರದ ಬಗ್ಗೆ ಕಿಡಿಕಾರಿದರು.
ಇದನ್ನೂ ವೀಕ್ಷಿಸಿ: Rahul Gandhi: ಏ. 17ರಂದು ರಾಜ್ಯಕ್ಕೆ ರಾಹುಲ್ ಗಾಂಧಿ: ಕೋಲಾರದಲ್ಲಿ ಬೃಹತ್ ಸಮಾವೇಶ, ಒಗ್ಗಟ್ಟು ಪ್ರದರ್ಶನಕ್ಕೆ ತಯಾರಿ