
ಇಂದು ಪ್ರಧಾನಿ ನರೇಂದ್ರ ಮೋದಿ ಬೆಳಗಾವಿಗೆ ಆಗಮಿಸಲಿದ್ದು, ಬೃಹತ್ ಸಮಾವೇಶ ನಡೆಸಲಿದ್ದಾರೆ. ಭದ್ರತೆ ದೃಷ್ಟಿಯಿಂದ ಡ್ರೋನ್ ಹಾರಾಟಕ್ಕೆ ನಿಷೇಧ ಹೇರಲಾಗಿದೆ.
ಇಂದಿನಿಂದ ರಾಜ್ಯದಲ್ಲಿ ಎರಡು ದಿನ ಪ್ರಧಾನಿ ನರೇಂದ್ರ ಮೋದಿ(Narendra Modi) ಪ್ರಚಾರ ಮಾಡಲಿದ್ದಾರೆ. ಇಂದು ಸಂಜೆ ಬೆಳಗಾವಿಗೆ(Belagavi) ಆಗಮಿಸಲಿರುವ ಪ್ರಧಾನಿ ಮೋದಿ, ಬೆಳಗಾವಿಯಲ್ಲೇ ವಾಸ್ತವ್ಯ ಹೂಡಲಿದ್ದಾರೆ. ಮರುದಿನ ಬೆಳಗಾವಿಯಲ್ಲಿ ಬೃಹತ್ ಸಮಾವೇಶ ನಡೆಸಲಿದ್ದು, ಬೆಳಗಾವಿ, ಚಿಕ್ಕೋಡಿ, ಕ್ಷೇತ್ರಗಳನ್ನು ಒಳಗೊಂಡು ಸಮಾವೇಶ ನಡೆಸಲಿದ್ದಾರೆ. ಬೆಳಗಾವಿಯಲ್ಲಿ ಜಗದೀಶ್ ಶೆಟ್ಟರ್(Jagadish Shettar) ಬಿಜೆಪಿ ಅಭ್ಯರ್ಥಿಯಾಗಿದ್ದಾರೆ. ಬೆಳಗಾವಿ 18 ವಿಧಾನಸಭೆ ಕ್ಷೇತ್ರ ಒಳಗೊಂಡಿರುವ ದೊಡ್ಡ ಲೋಕಸಭಾ ಕ್ಷೇತ್ರವಾಗಿದೆ. ಜಗದೀಶ್ ಶೆಟ್ಟರ್ ವಿರುದ್ಧವಾಗಿ ಕಾಂಗ್ರೆಸ್‌ನಿಂದ(Congress) ಲಕ್ಷ್ಮಿ ಹೆಬ್ಬಾಳ್ಕರ್ ಪುತ್ರ ಸ್ಪರ್ಧೆ ಮಾಡಿದ್ದಾರೆ. ಭದ್ರತೆ ದೃಷ್ಟಿಯಿಂದ ಡ್ರೋನ್ ಹಾರಾಟಕ್ಕೆ ನಿಷೇಧ ಹೇರಲಾಗಿದೆ. ಡ್ರೋನ್ ಹಾರಾಟ ನಿಷೇಧಿಸಿ ಜಿಲ್ಲಾಧಿಕಾರಿ ನಿತೇಶ ಪಾಟೀಲ್ ಆದೇಶ ಹೊರಡಿಸಿದ್ದಾರೆ. 27-4-24 ರ ಮುಂಜಾನೆ 6 ಗಂಟೆಯಿಂದ 28-4-24 ರ ಸಂಜೆ 6 ಗಂಟೆಯವರಗೆ ನಿಷೇಧ ಹೇರಲಾಗಿದೆ. ನೋ ಪ್ಲೈ ಜೋನ್ ಎಂದು ಘೋಷಿಸಿ ಡ್ರೋನ್ ಹಾರಾಟಕ್ಕೆ ಜಿಲ್ಲಾಡಳಿತ ನಿಷೇಧ ಹೇರಿದೆ.
ಇದನ್ನೂ ವೀಕ್ಷಿಸಿ: Sandalwood: ಮತ ಚಲಾಯಿಸಿದ ಸ್ಯಾಂಡಲ್‌ವುಡ್ ಸೆಲೆಬ್ರೆಟೀಸ್: ಸದಾಶಿವನಗರದಲ್ಲಿ ಡಾ.ರಾಜ್ ಫ್ಯಾಮಿಲಿಯಿಂದ ಮತದಾನ