Apr 23, 2024, 12:37 PM IST
ಲೋಕಸಭಾ ಚುನಾವಣೆ (Lok Sabha elections 2024)ಹಿನ್ನೆಲೆ 12 ಕ್ಷೇತ್ರಗಳಲ್ಲಿ 2 ದಿನಗಳ ಕಾಲ ಮೋದಿ ಮತಬೇಟೆ ನಡೆಸಲಿದ್ದಾರೆ. ಕಿತ್ತೂರು ಕರ್ನಾಟಕ, ಮಧ್ಯ ಕರ್ನಾಟಕ, ಕಲ್ಯಾಣ ಕರ್ನಾಟಕದಲ್ಲಿ ಪ್ರಚಾರ ಮಾಡಲಿದ್ದಾರೆ. ಹಾಗೆಯೇ ದಾವಣಗೆರೆಯಿಂದ(Davanagere) ಪ್ರಚಾರ ಮಾಡಲಿರುವ ಮೋದಿ ಅವರು ಕಲಬುರ್ಗಿಯಲ್ಲಿ(Kalaburagi) ಅಂತ್ಯಮಾಡಲಿದ್ದಾರೆ. ಇದರ ಜೊತೆಗೆ 2 ಲೋಕಸಭೆ ಕ್ಷೇತ್ರಕ್ಕೆ ಒಂದರಂತೆ 6 ಬೃಹತ್ ಸಮಾವೇಶ ನಡೆಸಲಾಗುತ್ತದೆ. ಈ ನಡುವೆ ಕಿತ್ತೂರು ಕರ್ನಾಟಕದ 6 ಕ್ಷೇತ್ರವನ್ನು ಗೆಲ್ಲಲು ಮೋದಿ(Narendra Modi) ಪ್ಲ್ಯಾನ್ ಮಾಡಿಕೊಂಡಿದ್ದಾರೆ. ಈ ಮೂಲಕ ಕಲ್ಯಾಣ ಕರ್ನಾಟಕ, ಮಧ್ಯ ಕರ್ನಾಟಕದಲ್ಲೂ ಪ್ರಾಬಲ್ಯ ಮೆರೆಯಲು ತಂತ್ರ ರೂಪಿಸಲಾಗಿದೆ. ಇನ್ನು ವಿವರವಾಗಿ ಹೇಳುವುದಾದರೆ ಏ. 28 , 29 ರಂದು ಆರು ಕಡೆಗಳಲ್ಲಿ ಮೋದಿ ಕ್ಯಾಂಪೇನ್, ಏ. 28 ರಂದು ದಾವಣಗೆರೆ, ಕಾರವಾರ, ಬೆಳಗಾವಿಯಲ್ಲಿ ಸಮಾವೇಶ, ಏ. 28 ರಂದು ಬೆಳಗಾವಿಯಲ್ಲೇ ವಾಸ್ತವ್ಯ ಹೂಡಲಿರುವ ಮೋದಿ, ಏ. 29 ರಂದು ವಿಜಯಪುರ, ಕೊಪ್ಪಳ, ಕಲಬುರಗಿಯಲ್ಲಿ ಸಮಾವೇಶ ನಡೆಸಲಿದ್ದಾರೆ. ಮೇ 7 ಕ್ಕೆ ರಾಜ್ಯದಲ್ಲಿ ಎರಡನೇ ಹಂತದ ಮತದಾನ ನಡೆಯಲಿದೆ.
ಇದನ್ನೂ ವೀಕ್ಷಿಸಿ: 'ಧರ್ಮಭೀರು ನಾಡಪ್ರಭು ಕೆಂಪೇಗೌಡ' ಸಿನಿಮಾಗೆ ಕಂಟಕ.! ಕೆಂಪೇಗೌಡರ ಬಗ್ಗೆ ಸಿನಿಮಾ ಮಾಡಂಗಿಲ್ಲ ಎಂದ ನಾಗಾಭರಣ!