ಬೆಂಗಳೂರಿನಲ್ಲಿ ಮೋದಿ ರೋಡ್‌ ಶೋ ಆರಂಭ: ಕೇಸರಿ ಹುರಿಯಾಳುಗಳ ಪರ ಪ್ರಧಾನಿ ಮತಶಿಕಾರಿ

ಬೆಂಗಳೂರಿನಲ್ಲಿ ಮೋದಿ ರೋಡ್‌ ಶೋ ಆರಂಭ: ಕೇಸರಿ ಹುರಿಯಾಳುಗಳ ಪರ ಪ್ರಧಾನಿ ಮತಶಿಕಾರಿ

Published : May 06, 2023, 11:27 AM IST

ಬೆಂಗಳೂರಿನಲ್ಲಿ ಪ್ರಧಾನಿ ಮೋದಿ ರೋಡ್ ಶೋ ಆರಂಭವಾಗಿದ್ದು, ಇಂದು 26 ಕಿ.ಮೀ ರ್ಯಾಲಿ ಸಾಗಲಿದೆ.

ಬೆಂಗಳೂರು: ವಿಧಾನಸಭಾ ಚುನಾವಣೆ ಹಿನ್ನೆಲೆ ರಾಜ್ಯ ರಾಜಧಾನಿಯಲ್ಲಿ ಇಂದು ಪ್ರಧಾನಿ ಮೋದಿ ರೋಡ್‌ ಶೋ ನಡೆಸುತ್ತಿದ್ದಾರೆ.  ಹೀಗಾಗಿ ಇಡೀ ಬೆಂಗಳೂರು ಕೇಸರಿಮಯವಾಗಿದೆ. ಮೊದಲ ದಿನ ಬೆಂಗಳೂರಲ್ಲಿ 26 ಕಿ.ಮೀ ರೋಡ್‌ ಶೋ ನಡೆಯಲಿದೆ. ಜೆಪಿ ನಗರದ ಬ್ರಿಗೇಡ್‌ ಮಿಲೇನಿಯಂನ ಸೋಮೇಶ್ವರ ಸಭಾಭವನದಿಂದ ರೋಡ್‌ ಶೋ ಆರಂಭವಾಗಿದೆ. ತೆರೆದ ವಾಹನದಲ್ಲಿ ಮೋದಿ ರೋಡ್‌ ಶೋ ಆರಂಭಿಸಿದ್ದಾರೆ. ಪ್ರಧಾನಿಗೆ ಬೆಂಗಳೂರು ದಕ್ಷಿಣ ಸಂಸದ ತೇಜಸ್ವಿ ಸೂರ್ಯ ಹಾಗೂ ಬೆಂಗಳೂರು ಕೇಂದ್ರ ಸಂಸದ ಪಿಸಿ ಮೋಹನ್‌ ಸಾಥ್‌ ನೀಡಿದ್ದಾರೆ. ಶನಿವಾರ ಬೆಳಗ್ಗೆ 10.20ಕ್ಕೆ ಮೋದಿ ರೋಡ್‌ ಶೋ ಆರಂಭವಾಗಿದ್ದು, ಜೆಪಿ ನಗರದಿಂದ ಮಲ್ಲೇಶ್ವರದವರೆಗೂ ಸುಮಾರು 26.5 ಕಿಮೀ ರೋಡ್‌ ಶೋ ಸಾಗಲಿದೆ. ಮೋದಿ ಸಾಗುವ ರಸ್ತೆಯುದ್ದಕ್ಕೂ ಬಿಗಿ ಪೊಲೀಸ್‌ ಭದ್ರತೆ ಕಲ್ಪಿಸಲಾಗಿದೆ. ರಸ್ತೆಯದ್ದಕ್ಕೂ ಜನ ಸಾಗರವೇ ನೆರೆದಿದೆ. 

ಇದನ್ನೂ ವೀಕ್ಷಿಸಿ: ಕರಾವಳಿಯಲ್ಲಿ ಇಂದು ಯೋಗಿ ಮಿಂಚು: ಕಾರ್ಕಳದಲ್ಲಿ ಸುನೀಲ್‌ ಕುಮಾರ್‌ ಪರ ಮತಶಿಕಾರಿ

21:47ಮೋದಿ ಮೆಚ್ಚಿದ 'ಬಾಸ್' ಈಗ ಕಮಲ ಪಡೆಯ ಹೊಸ ಸಾರಥಿ! ನಿತಿನ್ ನಬೀನ್ ನನಗೂ ಬಾಸ್ ಎಂದಿದ್ದೇಕೆ ನಮೋ?
23:34‘ತಾಳ್ಮೆಗೂ ಕೊನೆಯಿದೆ..’ ಕಡೆಯ ವಾರ್ನಿಂಗ್ ಕೊಟ್ರಾ ಡಿ.ಕೆ ಸುರೇಶ್? ‘ವಚನ’ ಕದನದ ಹಿಂದಿನ ಅಸಲಿ ರಹಸ್ಯವೇನು..?
21:54ಪಶ್ಚಿಮ ಬಂಗಾಳದ ರಣರಂಗ ಆರಂಭ: ಕೇಸರಿ ಕಲಿಗಳ ದಂಡು ದಾಳಿಗೆ ಸಿಂಹಿಣಿಯ ಸವಾಲ್
22:10ಏಷ್ಯಾದ ಶ್ರೀಮಂತ ಪಾಲಿಕೆಗೆ ಬಿಜೆಪಿಯೇ ಬಿಗ್ ಬಾಸ್: ಅಸ್ತಿತ್ವದ ಆಟದಲ್ಲಿ ಅಣ್ತಮ್ಮಾಸ್ ಗೆದ್ದರಾ, ಸೋತರಾ?
20:04ಕುರ್ಚಿ ಕಾಳಗದಲ್ಲಿ ಕನಕಪುರ ಬಂಡೆಗೆ ಸ್ನೇಹಿತರ ಶಕ್ತಿ! ಕನಕಾಧಿಪತಿ ಡಿಕೆಗೆ ಸಂ‘ಕ್ರಾಂತಿ’, ಯುಗಾದಿ ಸಿಹಿ!
20:04ಏನಿದು ಡಿಕೆ ಮಾತಿನ ಮರ್ಮ? ಶಕ್ತಿವಂತರಿಗೆ ಶತ್ರುಗಳು ಜಾಸ್ತಿ: ಬಂಡೆ ಹೇಳಿದ ಶತ್ರು ರಹಸ್ಯ!
23:23ಮಹಾ ದಾಖಲೆಗೆ ಸಿದ್ದು ಅರಸ.. ಮೊಳಗಿತು ರಣಘೋಷ..! ಡಿಕೆ ಮೌನದ ಹಿಂದೆ ಅಡಗಿದ್ಯಾ ಗುಡುಗಿನ ಸದ್ದು..?
22:45ದಳಪತಿ Vs ಗಣಿಧಣಿ, 20 ವರ್ಷಗಳ ರಣ ದುಷ್ಮನಿ! ಗಾಲಿ ರೆಡ್ಡಿ ಪರವಾಗಿ ಅಖಾಡಕ್ಕಿಳಿದ HDK!
24:03Narendra Modi: 2025ರಲ್ಲಿ ಪ್ರಧಾನಿ ನರೇಂದ್ರ ಮೋದಿ ಸಾಧನೆ ಏನು? ಇಲ್ಲಿದೆ ನೋಡಿ ಸಂಪೂರ್ಣ ವರದಿ
20:58ಅಣ್ಣನನ್ನೇ ಓವರ್ ಟೇಕ್ ಮಾಡಿದ್ರಾ ಮುದ್ದಿನ ತಂಗಿ? ಅರ್ಧ ನಿಜವಾಗಿದೆ ಅಂದು ಇಂದಿರಾ ನುಡಿದಿದ್ದ ಭವಿಷ್ಯ!
Read more