Mar 11, 2024, 5:56 PM IST
ಪ್ರಧಾನಿ ನರೇಂದ್ರ ಮೋದಿ ಅವರು ಗುಜರಾತ್ ಮುಖ್ಯಮಂತ್ರಿಯಿಂದ ರಾಷ್ಟ್ರದ ಪ್ರಧಾನಿಯಾಗೋದಕ್ಕೆ, ಬಿಜೆಪಿ (BJP) ಆಯ್ಕೆ ಮಾಡಿತ್ತಲ್ಲ. ಆಗ ಮೊದಲ ಬಾರಿಗೆ ಲೋಕಸಭಾ(Loksabha) ಕ್ಷೇತ್ರ ಪ್ರತಿನಿಧಿಸೋದಕ್ಕೆ ಮೋದಿ(Narendra Modi) ಆರಿಸಿಕೊಂಡಿದ್ದು ಇದೇ ಕಾಶಿ ಕ್ಷೇತ್ರವನ್ನ. ಹಾಗಂತ ಅವತ್ತು ಮೋದಿ ಸುಮ್ಮನೆ ಕಾಶಿಗೆ (Kashi) ಬರಲಿಲ್ಲ. ಇಲ್ಲಿ ಲೋಕಸಭೆಗೆ ನಾಮಪತ್ರ ಸಲ್ಲಿಸೋಕೆ ಬಂದಿದ್ದಾಗ ಒಂದು ಮಾತು ಹೇಳಿದ್ರು. ಬಿಜೆಪಿ ಮುಂದಿನ ಪ್ರಧಾನಿ ಅಭ್ಯರ್ಥಿ ಅಂತ ಮೋದಿಯನ್ನು ಘೋಷಿಸಿತ್ತು. ದೇಶದ ಮೂಲೆಮೂಲೆಯನ್ನೂ ಸಂಚಿರಿಸಿ ಪಕ್ಷವನ್ನು ಗೆಲ್ಲಿಸಿಕೊಳ್ಳಬೇಕಾದ ದೊಡ್ದ ಹೊಣೆ ಮೋದಿ ಅವರ ಮೇಲಿತ್ತು. ದೇಶದ ನಾನಾ ಭಾಗಗಳಲ್ಲಿರೋ ಅಭ್ಯರ್ಥಿಗಳನ್ನ ಗೆಲ್ಲಿಸಿಕೊಂಡುಬರಬಲ್ಲ ಶಕ್ತಿ ಇದ್ದ ಮೋದಿ, ಸ್ವತಃ ಅವರೇ ಯಾವ ಕ್ಷೇತ್ರ ಆಯ್ಕೆ ಮಾಡ್ಕೊಳ್ತಾರೆ ಅನ್ನೋ ದೊಡ್ಡ ಕುತೂಹಲವೂ ಜನರನ್ನ ಕಾಡ್ತಾ ಇತ್ತು. ಆ ಪ್ರಶ್ನೆಗೆ ಉತ್ತರ ಸಿಗೋಕೆ ಹೆಚ್ಚು ಕಾಲ ಬೇಕಾಗಲಿಲ್ಲ. ಪ್ರಧಾನಿ ಅಭ್ಯರ್ಥಿಯಾಗಿದ್ದ ಮೋದಿ ಅವರು 2 ಕ್ಷೇತ್ರಗಳನ್ನ ಆಯ್ಕೆ ಮಾಡ್ಕೊಂಡು ಅಗ್ನಿ ಪರೀಕ್ಷೆಗೆ ಧುಮುಕಿದ್ರು.. ಆ ಪೈಕಿ ಒಂದು, ಗುಜರಾತಿನ ವಡೋದರಾ. ಮತ್ತೊಂದು ಪುರಾತನ ನಗರಿ, ಕಾಶಿ.
ಇದನ್ನೂ ವೀಕ್ಷಿಸಿ: Lalu Prasad Yadav on Modi: "ಮೋದಿ ಕಾ ಪರಿವಾರ್"ನಲ್ಲಿದ್ದಾರೆ 6 ಮಂದಿ ..! ಎಲ್ಲಿದ್ದಾರೆ, ಏನ್ಮಾಡ್ತಿದ್ದಾರೆ ಒಡಹುಟ್ಟಿದವರು ?