ದಿಲ್ಲಿ ಅಂಗಳದಲ್ಲಿ ಕರ್ನಾಟಕ ರಾಜಕೀಯ ಚದುರಂಗ: ‘ಲೋಕ’ ತಂತ್ರದ ಜೊತೆ ಸಂಘರ್ಷ ಶಮನದ ಜಪ

Aug 1, 2023, 9:38 AM IST

ಕರ್ನಾಟಕ ಬ್ಯಾಟಲ್  ಆಯ್ತು ಈಗೇನಿದ್ರೂ ಲೋಕಸಭೆ (Loksabha) ಮಹಾ ಸಂಗ್ರಾಮ. ಹೆಚ್ಚು ಕಡಿಮೆ 9 ತಿಂಗಳಿರುವಾಗಲೇ ಲೋಕಸಮರಕ್ಕೆ ರಾಜ್ಯದಲ್ಲಿ ಕೈ-ಕಮಲ ಸಮರ ತಾಲೀಮು ಶುರುವಾಗಿದೆ. ಮಹಾ ಸಂಗ್ರಾಮದ ಜಿದ್ದಿಗೆ ಬಿದ್ದಿರುವ ಬಿಜೆಪಿ, ಕಾಂಗ್ರೆಸ್(Congress) ಪಕ್ಷಗಳು ಅದಕ್ಕೂ ಮೊದಲು ಪಕ್ಷದಲ್ಲಿನ ಆಂತರಿಕ ಸಂಘರ್ಷ, ಪಕ್ಷ ಸಂಘಟನಾ ಚಟುವಟಿಕೆಗಿಳಿದಿವೆ. ಈ ಬೆಳವಣಿಗೆಯಲ್ಲಿನ ಕ್ಲೈಮ್ಯಾಕ್ಸ್ ಗೋಲ್ ಹೈಕಮಾಂಡ್ ಅಂಗಳಕ್ಕೆ ಶಿಫ್ಟ್ ಆಗಿದೆ. ಈ ಸಂಬಂಧ ಕಾಂಗ್ರೆಸ್ ಹೈಕಮಾಂಡ್ ಎರಡೆರಡು ಸಭೆ(Meeting) ನಿಗದಿ ಮಾಡಿದ್ದು ಕುತೂಹಲ ಕೆರಳಿಸಿದೆ. ಸಿದ್ದರಾಮಯ್ಯ(Siddaramaiah) ಸರ್ಕಾರ ಅಧಿಕಾರಕ್ಕೆ ಬಂದು ಎರಡೇ ತಿಂಗಳಲ್ಲಿ ಸಚಿವರು ಮತ್ತು ಶಾಸಕರ ನಡುವೆ ಭಿನ್ನಾಭಿಪ್ರಾಯದ ಅಲೆ ಎದ್ದಿದೆ. 20ಕ್ಕೂ ಹೆಚ್ಚು ಸಚಿವರ ವಿರುದ್ಧ 30 ಶಾಸಕರು ಬರೆದ ಅಸಮಾಧಾನದ ಪತ್ರ ಬಿರುಗಾಳಿ ಎಬ್ಬಿಸಿದೆ. ಈಗಾಗಲೇ ಒಂದು ಹಂತದಲ್ಲಿ ಸಿಎಲ್‌ಪಿ ಸಭೆಯಲ್ಲಿ(CLP Meeting) ಸಂಧಾನ ಸಭೆಯೂ ನಡೆದಿದೆ. ಆದ್ರೆ ಸಭೆ ಬಳಿಕವೂ ನಡೆದ ಸಚಿವ ಪರಮೇಶ್ವರ್ ಮತ್ತು ಶಾಸಕ ಬಿ.ಆರ್. ಪಾಟೀಲ್ ನಡುವಿನ ವಾಕ್ಸಮರ ಕಾಂಗ್ರೆಸ್‌ನಲ್ಲಿನ ಗೊಂದಲ ಜೀವಂತವಿರಿಸಿದೆ.

ಇದನ್ನೂ ವೀಕ್ಷಿಸಿ: ಬೆಂಗಳೂರಲ್ಲಿ ಪೊಲೀಸರ ಬಲೆಗೆ ಬಿದ್ದ ಖತರ್ನಾಕ್ ಕಳ್ಳ: ದುಡ್ಡಿನ ಆಸೆಗೆ ತನ್ನದೇ ಅಂಗಡಿಗೆ ಕನ್ನ ಹಾಕಿದ ಉದ್ಯಮಿ !