Bidar: ಬೀದರ್‌ನಲ್ಲಿ ಬಿಜೆಪಿಗೆ ಮರಾಠ ಬಂಡಾಯದ ಬಿಸಿ! ಭಗವಂತ ಖುಬಾಗೆ ಟೆನ್ಷನ್‌..ಕಮಲಕ್ಕೆ ಭಾರಿ ಹೊಡೆತ ?

Apr 28, 2024, 12:06 PM IST

ಲೋಕಸಭಾ ಚುನಾವಣೆ ಹಿನ್ನೆಲೆ (Lok Sabha Elections 2024) ಕರ್ನಾಟಕದಲ್ಲಿ ಬಿಜೆಪಿ (BJP) ಟಿಕೆಟ್‌ ಹಂಚಿಕೆಗೆ ಸಂಬಂಧಿಸಿದಂತೆ ಸಾಕಷ್ಟು ಭಿನ್ನಾಭಿಪ್ರಾಯಗಳಿಗೆ. ಈ ನಡುವೆ ದೊಡ್ಡ ಮಟ್ಟದ ಲೀಡರ್‌ಗಳೇ ಬಿಜೆಪಿಗೆ ಈಗ ಮಗ್ಗುಲು ಮುಳ್ಳಾಗಿದ್ದಾರೆ. ಅದರಂತೆ  ಬೀದರ್‌ನಲ್ಲಿ(Bidar) ಲೋಕಸಭಾ ರಣ ಕಣ ರಂಗೇರಿದ್ದು, ಈ ನಡುವೆ ಇಲ್ಲಿ ಮರಾಠ ಬಂಡಾಯದ (Maratha leaders) ಬಿಸಿ ಬೆಜೆಪಿಗೆ ತಟ್ಟಲಿದೆ. ಭಗವಂತ್ ಖುಬಾಗೆ  (Bhagwant Khuba) ಮರಾಠ ಸಮುದಾಯದಿಂದ ಟಕ್ಕರ್ ನೀಡಲಾಗಿದ್ದು, ಬಿಜೆಪಿ ಬಂಡಾಯ ಅಭ್ಯರ್ಥಿಯಾಗಿ ದಿನಕರ್ ಮೋರೆ (Dinkar More) ಕಣಕ್ಕೆ ಇಳಿದಿದ್ದಾರೆ. ಅಲ್ಲದೆ ಬಿಜೆಪಿಯಿಂದ ಉಚ್ಛಾಟನೆಯಾಗಿದ್ದ ಆರು ಜನ ಮರಾಠ ಮುಖಂಡರು ಬಂಡಾಯ ಅಭ್ಯರ್ಥಿಗೆ ಶಕ್ತಿ ತುಂಬಲಿದ್ದಾರೆ. ಇನ್ನು ದಿನಕರ್ ಮೋರೆ ಅವರು ಬೀದರ್ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದರು. ಆದರೆ, ಟಿಕೆಟ್ ಕೈ ತಪ್ಪಿದ್ದಕ್ಕೆ ಬಿಜೆಪಿಯಿಂದ ದೂರ ಉಳಿದಿದ್ದ ಇವರು ಇದೀಗ ತಮ್ಮ ಸಾಮರ್ಥ್ಯ ಏನು ಅನ್ನೋದನ್ನು ತೋರಿಸಲು ಮುಂದಾಗಿದ್ದಾರೆ. ಈ ನಡುವೆ  ಬೀದರ್ ಕ್ಷೇತ್ರದಲ್ಲಿ 2 ಲಕ್ಷ ಮರಾಠ ಮತಗಳೇ ನಿರ್ಣಾಯಕವಾಗಿದ್ದು, ಮೋರೆಗೆ ಮರಾಠರ ಬೆಂಬಲ ಸಿಕ್ರೆ ಕೂಬಾಗೆ ಸೋಲು ಕಟ್ಟಿಟ್ಟ ಬುತ್ತಿ ಎಂದು ಹೇಳಲಾಗುತ್ತಿದೆ. ಇದರಿಂದಾಗಿ ಕ್ಷೇತ್ರದಲ್ಲಿ ಬಿಜೆಪಿಗೆ ಭಾರಿ ಹೊಡೆತ ಬೀಳುವ ಸಾಧ್ಯತೆ ಇದೆ. ಜೊತೆಗೆ ದಿನಕರ್ ಮೋರೆ ಸ್ಫರ್ಧೆ ಬಿಜೆಪಿಗೆ ದೊಡ್ಡ ತಲೆನೋವಿನ ವಿಚಾರವಾಗಿದೆ.

ಇದನ್ನೂ ವೀಕ್ಷಿಸಿ:  Prajwal Revanna Sex Scandal: ಹಾಸನದಲ್ಲಿ ಅಶ್ಲೀಲ ವಿಡಿಯೋ ವೈರಲ್ ವಿಚಾರ: ವಿದೇಶಕ್ಕೆ ತೆರಳಿದ್ರಾ ಪ್ರಜ್ವಲ್ ರೇವಣ್ಣ?