Apr 15, 2024, 12:39 PM IST
ಮಾಜಿ ಸಚಿವ ಮಾಲೀಕಯ್ಯ ಗುತ್ತೇದಾರ್ ಕಾಂಗ್ರೆಸ್(Congress) ಸೇರುವ ಸಾಧ್ಯತೆ ಇದ್ದು, ಸಹೋದರ ನಿತಿನ್ ಗುತ್ತೇದಾರ್(Nitin Guttedar) ಬಿಜೆಪಿಗೆ ಸೇರ್ಪಡೆಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕಳೆದ ಬಾರಿ ಅಣ್ಣನ ವಿರುದ್ಧ ಸ್ವತಂತ್ರ ಅಭ್ಯರ್ಥಿಯಾಗಿ ನಿತಿನ್ ಸ್ಪರ್ಧಿಸಿದ್ದರು. 50 ಸಾವಿರಲಕ್ಕೂ ಹೆಚ್ಚು ಮತ ಪಡೆದು ನಿತಿನ್ ಗುತ್ತೇದಾರ್ ಗಮನ ಸೆಳೆದಿದ್ದರು. ತನ್ನ ಸೋಲಿಗೆ ಕಾರಣನಾದ ತಮ್ಮ ನಿತಿನ್ ವಿರುದ್ಧ ಅಣ್ಣನ ಸಿಟ್ಟನ್ನು ಹೊರಹಾಕಿದ್ದರು. ನಿತಿನ್ ಬಿಜೆಪಿ ಸೇರ್ಪಡೆಗೆ ಮಾಲೀಕಯ್ಯ ಗುತ್ತೇದಾರ್(Malikayya Guttedar) ವಿರೋಧ ವ್ಯಕ್ತಪಡಿಸಿದ್ದಾರೆ. ಬಿಜೆಪಿಗೆ ಪಾಠ ಕಲಿಸಲು ಮುಂದಾಗಿರುವ ಮಾಲೀಕಯ್ಯ ಗುತ್ತೇದಾರ, ಬಿಜೆಪಿಗೆ(BJP) ಪಾಠ ಕಲಿಸುವ ಉದ್ದೇಶದಿಂದ ಡಿಕೆಶಿ ಭೇಟಿಯಾಗಿದ್ದಾರೆ. ಮಾಲೀಕಯ್ಯ ಗುತ್ತೇದಾರ ಕಾಂಗ್ರೆಸ್ ಸೇರ್ಪಡೆಗೆ ಖರ್ಗೆ ಕುಟುಂಬ ಒಪ್ಪಿಗೆ ನೀಡಿದೆ. ಇನ್ನೊಂದೆಡೆ ಯಡಿಯೂರಪ್ಪ ಕರೆ ಮಾಡಿ ಮನವೊಲಿಸಲು ಯತ್ನ ಮಾಡಿದ್ದಾರೆ. ನಾಳೆ ಕಲಬುರಗಿಯಲ್ಲಿ ಬೆಂಬಲಿಗರ ಸಭೆ ಕರೆದಿರುವ ಮಾಲೀಕಯ್ಯ ಗುತ್ತೇದಾರ, ಮುಂದಿನ ರಾಜಕೀಯ ನಡೆ ಕುರಿತು ಚರ್ಚಿಸಿ ನಿರ್ಣಯ ಕೈಗೊಳ್ಳುವ ಸಾಧ್ಯತೆ ಇದೆ. ಬಹುತೇಕ ಬಿಜೆಪಿಯಿಂದ ಒಂದು ಕಾಲು ಹೊರಗಿಟ್ಟಿರುವ ಮಾಲೀಕಯ್ಯ ಗುತ್ತೇದಾರ್, ಕಾಂಗ್ರೆಸ್ ಸೇರ್ತಾರಾ ಎನ್ನುವುದೇ ಸದ್ಯದ ಸಸ್ಪೆನ್ಸ್ ಆಗಿದೆ.
ಇದನ್ನೂ ವೀಕ್ಷಿಸಿ: 2019ರ ಸೋಲಿನ ಸೇಡು ತೀರಿಸಿಕೊಳ್ಳಲು ಎಚ್‌ಡಿಡಿ ಅಖಾಡಕ್ಕೆ! ಸೋಮಣ್ಣ ಪರ ಭರ್ಜರಿ ಪ್ರಚಾರಕ್ಕೆ ಇಳಿದ ದೊಡ್ಡ ಗೌಡರು