ದಾವಣಗೆರೆ ಕಾಂಗ್ರೆಸ್‌ನಲ್ಲಿ ಲೋಕಸಭೆ ಟಿಕೆಟ್ ಫೈಟ್: ಶಾಸಕರು, ಸಚಿವರ ಮಧ್ಯೆ ಕಾವೇರಿದ ಟಾಕ್‌ವಾರ್

ದಾವಣಗೆರೆ ಕಾಂಗ್ರೆಸ್‌ನಲ್ಲಿ ಲೋಕಸಭೆ ಟಿಕೆಟ್ ಫೈಟ್: ಶಾಸಕರು, ಸಚಿವರ ಮಧ್ಯೆ ಕಾವೇರಿದ ಟಾಕ್‌ವಾರ್

Published : Oct 10, 2023, 10:43 AM IST

ಲೋಕಸಭೆ ಎಲೆಕ್ಷನ್‌ ಘೋಷಣೆಗೂ ಮುನ್ನವೇ ದಾವಣಗೆರೆಯಲ್ಲಿ ಕಾವು ಹೆಚ್ಚಾಗಿದೆ. ಒಂದೇ ಕ್ಷೇತ್ರಕ್ಕೆ ಕಾಂಗ್ರೆಸ್‌ನ ಸಚಿವರು,ಶಾಸಕರ ಮಧ್ಯೆ ಟಾಕ್‌ವಾರ್ ಜೋರಾಗಿದೆ. ನನಗೆ ಟಿಕೆಟ್ ಸಿಗುತ್ತೆ ಅಂತಾ ಕ್ಷೇತ್ರದಲ್ಲಿ ಆಕಾಂಕ್ಷಿಗಳು ಓಡಾಟನೂ ಶುರುಮಾಡಿದ್ದಾರೆ. ಆದ್ರೆ ಚನ್ನಗಿರಿ ಶಾಸಕ ಹೇಳಿದ ಒಂದು ಮಾತು ಸಚಿವ ಶಾಮನೂರು ಫ್ಯಾಮಿಲಿಗೆ ಆಕ್ರೋಶ ತಂತಿದೆ.

ದಾವಣಗೆರೆ ಲೋಕಸಭೆ ಎಲೆಕ್ಷನ್ ಕಾವು ದಿನದಿನಕ್ಕೂ ಜೋರಾಗ್ತಿದೆ. ಒಂದೇ ಟಿಕೆಟ್‌ಗೆ ಒಂದೇ ಪಕ್ಷದ ಇಬ್ಬರ ಮಧ್ಯೆ ಮಾತಿನ ಕಾಳಗ ಜೋರಾಗಿದೆ. ಕಾಂಗ್ರೆಸ್‌ನಿಂದ ಸಚಿವ ಎಸ್‌.ಎಸ್ ಮಲ್ಲಿಕಾರ್ಜುನ್ ಪತ್ನಿ ಪ್ರಭಾ ಮಲ್ಲಿಕಾರ್ಜುನ್ ಸ್ಪರ್ಧಿಸ್ತಾರೆ ಎಂಬ ಚರ್ಚೆ ಶುರುವಾಗಿದೆ. ಅವರು ಕೂಡ ಕ್ಷೇತ್ರದಲ್ಲಿ ಬಿರುಸಿನ ಓಡಾಟ ಶುರುಮಾಡಿದ್ದು ನಾನೇ ಅಭ್ಯರ್ಥಿ ಆಗ್ತೀನಿ ಅನ್ನೋ ಮಾತುಗಳನ್ನಾಡಿದ್ರು..ಆದ್ರೆ ಈಗ ಚನ್ನಗಿರಿ ಶಾಸಕ ಶಿವಗಾಂಗ ಬಸವರಾಜ್ ಹೇಳಿದ ಮಾತು ನಾಯಕರ ಮಧ್ಯೆ ವಾಕ್ಸಮರಕ್ಕೆ ಕಾರಣವಾಗಿದೆ. ಎಸ್‌.ಎಸ್‌ ಮಲ್ಲಿಕಾರ್ಜುನ್ (S.S. Mallikarjun) ಪತ್ನಿ ಸ್ಪರ್ಧಿಸೋದು ಅನುಮಾನ ಎಂದ ಶಾಸಕ ಶಿವಗಂಗಾ ಬಸವರಾಜ್ ದಾವಣಗೆರೆಯಲ್ಲಿ(Davanagere) ಹೊಸಬರಿಗೆ ಟಿಕೆಟ್ ಕೊಟ್ರೆ ಒಳ್ಳೇಯದು ಅಂದ್ರು..ಅಲ್ದೆ ಇನ್‌ಸೈಟ್ ಆಕಾಡೆಮಿ ವಿನಯ್ ಕುಮಾರ್ ಸ್ಪರ್ಧಿಸಿದ್ರೆ ನನ್ನ ಬೆಂಬಲ ಇದೆ ಅಂತಾ ಹೇಳಿದ್ರು..ಈ ಮಾತಿಗೆ ಕೆರಳಿದ ಸಚಿವ ಮಲ್ಲಿಕಾರ್ಜುನ್ ಕಾಂಗ್ರೆಸ್ ಪಕ್ಷ ಕಾರ್ಯಕರ್ತರಿಗೆ ಮಣೆ ಹಾಕುತ್ತೆ ಅಂದ್ರು.ಅಷ್ಟೇ ಅಲ್ಲ ಕಾಳಪ್ಪ ಯಾರು ಬೋಳಪ್ಪ ಯಾರು ಅಂತ ಗುರುತಿಸಬೇಕು. ಎಲ್ಲಿಂದಲೋ ಬಂದು ಯಾರಿಗೋ ಟಿಕೆಟ್(Ticket) ಕೊಟ್ರೆ ಆಗೋಲ್ಲ ಅಂತಾ ಪರೋಕ್ಷವಾಗಿ ಶಾಸಕರ ಮಾತಿಗೆ ಸಚಿವರು ಆಕ್ರೋಶ ಹೊರಹಾಕಿದ್ರು. ಬಿಜೆಪಿಯಲ್ಲಿ(BJP) ನಾನು ಟಿಕೆಟ್ ಆಕಾಂಕ್ಷಿ ಎಂದು ರೇಣುಕಾಚಾರ್ಯ ಓಡಾಡ್ತಿದ್ದಾರೆ. ಇತ್ತ ಕಾಂಗ್ರೆಸ್ನಲ್ಲಿ ಶಾಮನೂರು ಸೊಸೆ ನನಗೆ ಟಿಕೆಟ್ ಸಿಗುತ್ತೆ ಅಂತಾ ಕ್ಷೇತ್ರದಲ್ಲಿ ಎಲೆಕ್ಷನ್ ಘೋಷಣೆಗೂ ಮುನ್ನವೇ ಕ್ಯಾಂಪೇನ್ ಶುರುಮಾಡಿದ್ದಾರೆ. ಕಾಂಗ್ರೆಸ್  ಟಿಕೆಟ್ ವಿಚಾರದಲ್ಲಿ ಶಾಸಕರು-ಸಚಿವರ ಮಧ್ಯೆ ಟಾಕ್ವಾರ್ ಬೇರೆ ಶುರುವಾಗಿದ್ದು, ದಾವಣೆಗೆರೆ ಲೋಕಸಭೆ ರಣಕಣ ಕಿಕ್ಕೇರಿಸಿದೆ.

ಇದನ್ನೂ ವೀಕ್ಷಿಸಿ:  ಹಮಾಸ್ ಉಗ್ರರ ದಾಳಿಗೆ ರಕ್ತಸಿಕ್ತವಾಯ್ತು ಇಸ್ರೇಲ್: 2005ರಿಂದಲೂ ಧಗಧಗಿಸುತ್ತಲೇ ಇದೆ ದ್ವೇಷದ ಜ್ವಾಲೆ..!

21:09ಇದು ದಳಪತಿ ಕೋಟೆ ಕಣೋ! ವಿಜಯ್ ಶಪಥಕ್ಕೆ ನಡುಗಿದ್ದೇಕೆ ದ್ರಾವಿಡ ನೆಲದ ರಾಜಕಾರಣ?
23:39ಕೈ ಕೊಟ್ಟವರ್ಯಾರೋ ಮಂಜುನಾಥ?; ಬಿಜೆಪಿಯಲ್ಲಿ ಅಡ್ಡಮತದಾನದ ಆಂತರಿಕ ಜ್ವಾಲಾಮುಖಿ ಸ್ಫೋಟ!
23:38ಬಿಡದಿ ಟೌನ್‌ಶಿಪ್ ರಣರಂಗದಲ್ಲಿ ಪತ್ರಕ್ಕೆ ಪತ್ರ, ಸವಾಲ್‌ಗೆ ಸವಾಲ್, ಜಿದ್ದಿಗೆ ಜಿದ್ದು!
06:49ಪ್ಯಾನ್ ಇಂಡಿಯಾ ಹೀರೋ ವಿಜಯ್ ಈಗ ಈಗ ಪ್ಯಾನ್ ಇಂಡಿಯಾ ಲೀಡರ್! ಹುಟ್ಟುಹಬ್ಬದ ದಿನ ಸಿಕ್ತು ಸಾಕ್ಷಿ!
24:49Karnataka Congress: ಹರಿಪ್ರಸಾದ್‌ಗೆ ಕೆಪಿಸಿಸಿ ಗದ್ದುಗೆ: ಡಿಕೆ-ಬಿಕೆ ಜೋಡಿಯಿಂದ ಹೊಸ ಮ್ಯಾಜಿಕ್ ಸಾಧ್ಯನಾ?
03:42'ದಳಪತಿ' ಕುರ್ಚಿಗೆ ಕಂಟಕ? ಅಣ್ಣಾ ಮಲೈ-ರಜನಿಕಾಂತ್-ಅಜಿತ್ 'ತ್ರಿಮೂರ್ತಿ'ಗಳ ಆಟ ಶುರುವಾಗ್ತಿದ್ಯಾ?
19:09ಕನಕಾಧಿಪತಿ ಚದುರಂಗ.. BJP ಪಡೆ ಕೋಲಾಹಲ: ಹಸ್ತಕೋಟೆಗೇ ಗೊತ್ತಿರಲಿಲ್ಲ.. ಡಿಕೆ ಹೂಡಿದ ಚಕ್ರವ್ಯೂಹ!
18:09362 ನಂಬರ್‌ಗಾಗಿ ಬಿಜೆಪಿ ಆಟ, ಕಂಪನಕ್ಕೆ ಬಂಗಾಳದಿಂದ ಯುಪಿ ವರೆಗೂ ಉರುಳುತ್ತಿದೆ ವಿಕೆಟ್
20:37ಆಪರೇಷನ್ ಗೃಹಲಕ್ಷ್ಮೀ: ಸತ್ತವರ ಖಾತೆಗೆ ಹಣ! 4 ಲಕ್ಷ ಅನರ್ಹರ ಮೇಲೆ ಸರ್ಕಾರದ ಬಿಗ್ ಆ್ಯಕ್ಷನ್
21:25DK Shivakumar: ಸಿದ್ದು ಸಂಪ್ರದಾಯ ಮುರಿದ ಡಿಕೆಶಿ: ಗಾಂಧಿಗಿರಿ ಹಿಂದಿನ ರಣತಂತ್ರವೇನು?
Read more