Dec 12, 2023, 11:10 AM IST
ವಿಪಕ್ಷ ನಾಯಕ, ಬಿಜೆಪಿ ಅಧ್ಯಕ್ಷ ಹಾಗೂ ಶಾಸಕರ ನಡುವೆ ತಾಳ ತಪ್ಪಿದ್ದಂತೆ ಕಾಣುತ್ತಿದ್ದು, ಹೊಂದಾಣಿಕೆ ಕೊರತೆ ಬೆನ್ನಲ್ಲೆ ಎಚ್ಚೆತ್ತ ವಿಪಕ್ಷ ನಾಯಕ ಆರ್. ಅಶೋಕ್ ಇಂದು ಬೆಳಗಾವಿಯಲ್ಲಿ(Belagavi) ಸಂಜೆ 7ಕ್ಕೆ ಬಿಜೆಪಿ ಶಾಸಕಾಂಗ ಸಭೆ(bjp legislative party meeting) ನಡೆಸಲಿದ್ದಾರೆ. ಆರ್. ಅಶೋಕ್(R.Ashok) ನೇತೃತ್ವದಲ್ಲಿ ನಡೆಯಲಿರುವ ಮೊದಲ ಶಾಸಕಾಂಗ ಸಭೆ ಇದಾಗಿದೆ. ಶಾಸಕರ ಜತೆಗೆ ಹೊಂದಾಣಿಕೆ ಮೂಡಿಸಲು ವಿಫಲ ಆರೋಪ. ಹೀಗಾಗಿ ಶಾಸಕರನ್ನು ವಿಶ್ವಾಸಕ್ಕೆ ಪಡೆಯಲು ಉಭಯ ನಾಯಕರು ಮುಂದಾಗಿದ್ದಾರೆ. ಆರ್. ಅಶೋಕ್ ಮತ್ತು ವಿಜಯೇಂದ್ರ ನಡುವೆ ಹೊಂದಾಣಿಕೆ ಸರಿಪಡಿಸಲು ಸಭೆ ನಡೆಸಲಾಗುತ್ತಿದೆ ಎನ್ನಲಾಗ್ತಿದೆ. ನಾಯಕರ ವಿರುದ್ಧ ಬಿಜೆಪಿ ಶಾಸಕರಿಂದಲೇ ಬೇಸರ ವ್ಯಕ್ತವಾಗಿದ್ದು, ಆರೋಪಗಳ ನಡುವೆ ಆರ್.ಅಶೋಕ್ ಶಾಸಕಾಂಗ ಸಭೆ ಕರೆದಿದ್ದಾರೆ. ಅಶೋಕ್ ಹೊಂದಾಣಿಕೆ ಪಾಲಿಟಿಕ್ಸ್ ಎಂದು ಸಿಟ್ಟು ಹೊರಹಾಕಿದ್ದ ಎಸ್. ಆರ್. ವಿಶ್ವನಾಥ್. ಮುನಿಸಿಕೊಂಡು ಬೆಂಗಳೂರಿಗೆ ವಾಪಸ್ ಆಗಿದ್ದರು. ಮತ್ತೆ ಅಸಮಾಧಾನ ಹೊರಹಾಕಿದ ಬಸನಗೌಡ ಪಾಟೀಲ್ ಯತ್ನಾಳ್ . ಶಾಸಕಾಂಗ ಪಕ್ಷ ಸಭೆಗೆ ಹೋಗಲ್ಲ ಎಂದ ಬಸನಗೌಡ ಪಾಟೀಲ್ ಯತ್ನಾಳ್ . ಉತ್ತರ ಕರ್ನಾಟಕಕ್ಕೆ ಅಧ್ಯಕ್ಷ, ಪ್ರತಿಪಕ್ಷ ನಾಯಕ ಸ್ಥಾನ ಸಿಕ್ಕಿಲ್ಲ. ಸ್ಥಾನ ಸಿಗುವವರೆಗೂ ಯಾವುದೇ ಸಭೆಗೆ ಹೋಗಲ್ಲ ಎಂದು ಯತ್ನಾಳ್ ಹೇಳಿದ್ದಾರೆ.
ಇದನ್ನೂ ವೀಕ್ಷಿಸಿ: ಮಧ್ಯಪ್ರದೇಶದಲ್ಲಿ ಚೌವ್ಹಾಣ್ ರಾಜ್ಯಭಾರ ಅಂತ್ಯ..! 3 ಬಾರಿ ಶಾಸಕನಿಗೆ ಸಿಎಂ ಪಟ್ಟ ಕಟ್ಟಿದ ಹೈಕಮಾಂಡ್ !