‘ಕೈ’ಗೆ ಸಿಗುವ 7 ಸ್ಥಾನಗಳಿಗೆ 60ಕ್ಕೂ ಹೆಚ್ಚು ಆಕಾಂಕ್ಷಿಗಳು: ಅಭ್ಯರ್ಥಿ ಆಯ್ಕೆ ಸಂಬಂಧ ದೆಹಲಿಗೆ ಸಿಎಂ, ಡಿಸಿಎಂ!

May 27, 2024, 2:58 PM IST

ವಿಧಾನಪರಿಷತ್ ಚುನಾವಣೆಗೆ(Legislative Council) ಕಾಂಗ್ರೆಸ್(Congress) ನಾಯಕರ ತಯಾರಿ ನಡೆಸುತ್ತಿದ್ದು, ಅಭ್ಯರ್ಥಿಗಳ(Candidates) ಆಯ್ಕೆ ಕಾಂಗ್ರೆಸ್‌ ಪಕ್ಷಕ್ಕೆ ಕಗ್ಗಂಟಾಗಿದೆ. ಅಭ್ಯರ್ಥಿ ಆಯ್ಕೆ ಕಸರತ್ತು ಹೈಕಮಾಂಡ್ ಅಂಗಳಕ್ಕೆ ಶಿಫ್ಟ್ ಆಗಿದ್ದು, ಈ ಸಂಬಂಧ ಸಿಎಂ(Siddaramaiah), ಡಿಸಿಎಂ(DK Shivakumar) ದೆಹಲಿಗೆ ತೆರಳಲಿದ್ದಾರೆ. ನಾಳೆ ಇಬ್ಬರೂ ನಾಯಕರು ದೆಹಲಿಗೆ ತೆರಳುವ ಸಾಧ್ಯತೆ ಇದೆ. ನಾಳೆ ಮತ್ತು ಬುಧವಾರ ಎರಡೂ ದಿವಸ ದೆಹಲಿಯಲ್ಲೇ ಇದ್ದು ಅಭ್ಯರ್ಥಿ ಆಯ್ಕೆ ಮಾಡಲಿದ್ದಾರೆ. ಹೈಕಮಾಂಡ್ ನಾಯಕರ ಜೊತೆ ಚರ್ಚೆ ನಡೆಸಲಿರುವ ಸಿಎಂ‌, ಡಿಸಿಎಂ. ಹೈಕಮಾಂಡ್ ನಾಯಕರ ಜೊತೆ ಚರ್ಚೆ ಬಳಿಕವೇ ಅಭ್ಯರ್ಥಿ ಆಯ್ಕೆ ಫೈನಲ್ ಆಗಲಿದೆ. ನಾಯಕರ ಮನೆಗೆ ಆಕಾಂಕ್ಷಿಗಳ ದಂಡು ಭೇಟಿ ನೀಡುತ್ತಿದ್ದು, ಸಿಎಂ‌, ಡಿಸಿಎಂ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಭೇಟಿ ಮಾಡಿ ಒತ್ತಡ ಹೇರಲಿದ್ದಾರೆ. ಸಚಿವರು, ಶಾಸಕರೊಂದಿಗೆ ನಾಯಕರ ಭೇಟಿ ಮಾಡುತ್ತಿರುವ ಆಕಾಂಕ್ಷಿಗಳು. ಜಾತಿ, ಪ್ರಾದೇಶಿಕವಾರು ಸ್ಥಾನ ಕೊಡಿ ಎಂದು ನಾಯಕರು ಕೇಳುತ್ತಿದ್ದಾರೆ.

ಇದನ್ನೂ ವೀಕ್ಷಿಸಿ:  ಆರೋಪಿ ಪ್ರಜ್ವಲ್ ರೇವಣ್ಣ ವಿದೇಶದಿಂದ ಬರೋದ್ಯಾವಾಗ..? ಸಂಸದರ ಬಂಧನ ಯಾವಾಗ..?