May 29, 2024, 12:32 PM IST
ಕಾಂಗ್ರೆಸ್‌ನಲ್ಲಿ(Congress) ವಿಧಾನ ಪರಿಷತ್ ಸ್ಥಾನಕ್ಕಾಗಿ(Legislative Council) ತೀವ್ರ ಪೈಪೋಟಿ ನಡೆಯುತ್ತಿದ್ದು, ಪರಿಷತ್ ಆಕಾಂಕ್ಷಿಗಳ ದಂಡು ದೆಹಲಿ(Delhi) ತಲುಪಿದೆ. ಹೈಕಮಾಂಡ್ ಮೇಲೆ ಒತ್ತಡ ಹಾಕಲು ದೆಹಲಿಗೆ ಸಚಿವರ ದಂಡು ತೆರಳಿಲಿದೆ. 7 ಸ್ಥಾನಕ್ಕಾಗಿ 70ಕ್ಕೂ ಹೆಚ್ಚು ಆಕಾಂಕ್ಷಿಗಳು ಇದ್ದು, ಪರಿಷತ್(Vidhan Parishad) ಸ್ಥಾನಕ್ಕಾಗಿ ಲಾಬಿ, ಒತ್ತಡವನ್ನು ಆಕಾಂಕ್ಷಿಗಳು ಹಾಕುತ್ತಿದ್ದಾರೆ. ಸಮುದಾಯವಾರು ಅವಕಾಶ ಕೊಡಬೇಕು ಎಂದು ಹಲವರು ಪಟ್ಟು ಹಿಡಿದಿದ್ದಾರೆ. ಪ್ರಾದೇಶಿಕವಾರು ಅವಕಾಶ ಕಲ್ಪಿಸಬೇಕು ಎಂದು ಕೆಲವರ ವಾದವಾಗಿದೆ. ಯಾವ ಮಾನದಂಡ ಅನುಸರಿಸುತ್ತೆ ಹೈ ಕಮಾಂಡ್ ಎಂಬುದೇ ಕುತೂಹಲ ಮೂಡಿಸಿದೆ. ಇಂದು ನಡೆಯುವ ಸಭೆಯ ಬಳಿಕ ಅಂತಿಮ ಚಿತ್ರಣ ಹೊರಬೀಳಲಿದೆ. ತಮ್ಮ ನಾಯಕರ ಮೂಲಕ ಹೈಕಮಾಂಡ್ ಮೇಲೆ ಒತ್ತಡ ಹೇರುವ ತಂತ್ರ ರೂಪಿಸಿದ್ದು, ಕೆಲವು ನಾಯಕರಿಂದ ಪುನರಾಯ್ಕೆ ಬಯಸಿ ಒತ್ತಡ ಹೇರಲಾಗುತ್ತಿದೆ. ಇಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಜೊತೆ ಸಭೆ ಬಳಿಕ ತೀರ್ಮಾನವಾಗಲಿದೆ.
ಇದನ್ನೂ ವೀಕ್ಷಿಸಿ: ಅಧಿಕಾರಿ ಚಂದ್ರಶೇಖರನ್‌ಗೆ 50 ಕೋಟಿ ಮೊತ್ತದ ಚೆಕ್‌ಗೆ ಸಹಿ ಮಾಡಿದ್ದೆ ಮುಳುವಾಯ್ತಾ..?