ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ವಿಚಾರ ಪಾರ್ಟಿ ವೇದಿಕೆ, ಹೈಕಮಾಂಡ್‌ನಲ್ಲಿ ಚರ್ಚೆ ಆಗಬೇಕು: ಸತೀಶ್‌ ಜಾರಕಿಹೊಳಿ

ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ವಿಚಾರ ಪಾರ್ಟಿ ವೇದಿಕೆ, ಹೈಕಮಾಂಡ್‌ನಲ್ಲಿ ಚರ್ಚೆ ಆಗಬೇಕು: ಸತೀಶ್‌ ಜಾರಕಿಹೊಳಿ

Published : Jul 01, 2024, 05:52 PM IST

ಸುಮ್ಮನೆ ನಾವು ದಿನ ರಾಜ್ಯದ ತುಂಬಾ ಡಿಸಿಎಂ ಚರ್ಚೆ‌ ಮಾಡುವ ಬದಲು ಪಕ್ಷದ ವೇದಿಕೆಯಲ್ಲಿ ಆಗಬೇಕು.ಮತಗಳನ್ನು ತಂದು ಕೊಡುವವರು ಅಧ್ಯಕ್ಷರಾಗಬೇಕು ಎಂದು ಸತೀಶ್ ಜಾರಕಿಹೊಳಿ ಹೇಳಿದ್ದಾರೆ. 

ಬೆಳಗಾವಿ: ಕೆಪಿಸಿಸಿ ಅಧ್ಯಕ್ಷರು (KPCC President) ಬದಲಾವಣೆ ಆಗ್ತಾರಾ ಎಂಬ ಪ್ರಶ್ನೆಗೆ ಸಚಿವ ಸತೀಶ್‌ ಜಾರಕಿಹೊಳಿ(Satish Jarkiholi) ಪ್ರತಿಕ್ರಿಯಿಸಿದ್ದು, ಪಾರ್ಟಿ ವೇದಿಕೆ, ಹೈಕಮಾಂಡ್‌ನಲ್ಲಿ(high command) ಈ ಬಗ್ಗೆ ಚರ್ಚೆ ಆಗಬೇಕು. ಬಹಳಷ್ಟು ಜನ ಆಕಾಂಕ್ಷಿಗಳಿದ್ದಾರೆ. ಹೈಕಮಾಂಡ್ ನಿರ್ಣಯ ಮಾಡಬೇಕು. ಆದರೆ ಕೆಪಿಸಿಸಿ ಅಧ್ಯಕ್ಷರಾಗುವ ವಿಚಾರ ಸದ್ಯ ನಮ್ಮ ಮುಂದೆ ಇಲ್ಲ ಎಂದು ಸತೀಶ್ ಜಾರಕಿಹೊಳಿ ಹೇಳಿದ್ದಾರೆ. ಕೆಪಿಸಿಸಿ ಅಧ್ಯಕ್ಷ ಸ್ಥಾನ‌ ಕೊಟ್ಟರೆ ನಿಭಾಯಿಸ್ತಿರಾ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಸದ್ಯ ಚುನಾವಣೆ ಇಲ್ಲ ಮತಗಳನ್ನು ತಂದು ಕೊಡುವವರು ಅಧ್ಯಕ್ಷರಾಗಬೇಕು. ಅಂತಹ ಯಾವುದೇ ಚರ್ಚೆ ಆಗಿಲ್ಲ‌. ದೆಹಲಿ ಭೇಟಿ ವಿಚಾರ ‌ಬೇರೆ ಇದೆ. ಬೇರೆ ಬೇರೆ ಕೆಲಸಗಳಿಗೆ ನಾವು ಭೇಟಿ ಆಗಿದ್ದೇವೆ. ಪ್ರಧಾನಿಗೆ ಸಿಎಂ ಅವರು ಭೇಟಿ ಆಗಿದ್ದಾರೆ, ಹೋದಾಗ ರಾಜಕೀಯ ಚರ್ಚೆ ಆಗಿರುತ್ತದೆ. ಒಳಗೆ ಯಾರು ಏನು ಹೇಳಿದರು ಎಂದು ಅವರಿಗೆ ಮಾತ್ರ ಗೊತ್ತಿರುತ್ತೆ. ಪ್ಲಾನಿಂಗ್ ಎನೂ ಇಲ್ಲ ನೆಗೆಟಿವ್ ಇದ್ದಿದ್ದನ್ನು ಪಾಸಿಟಿವ್ ಮಾಡಬೇಕು. ಅದು ಒಂದು ಕಲೆ ಎಂದರು. 

ಇದನ್ನೂ ವೀಕ್ಷಿಸಿ:  ರೀಲ್ಸ್‌ಗಾಗಿ ಶೋಕಿ ಮಾಡಿದವನಿಗೆ ಜೈಲೂಟ ! ಶೋ ಕೊಡಲು ಹೋಗಿ ಜೈಲು ಸೇರಿದ ರೀಲ್ಸ್ ಸ್ಟಾರ್!

19:47ಅರಸು ಆಳ್ವಿಕೆ ದಾಖಲೆ ಮುರಿಯೋವರೆಗೂ ಸಿದ್ದು ಸಿಎಂ ಕುರ್ಚಿ ಗಡದ್ದು; ಪುತ್ರನ ಹೇಳಿಕೆಯಿಂದ ಮತ್ತೆ ಮಾಡ್ತಿದೆ ಸದ್ದು!
20:50ಸಿಂಹಾಸನ ಸಂಗ್ರಾಮದಲ್ಲಿ ಡಿಕೆ ಶಿವಕುಮಾರ್ 'ಸ್ನೇಹವ್ಯೂಹ': ಸಿದ್ದು ಸಿಪಾಯಿಗಳನ್ನೇ ಸೆಳೆಯುವ ಬಂಡೆಯ ಹೊಸ ದಾಳ!
19:44Suvarna Special: ಸಂನ್ಯಾಸಿ ಸಿಂಹಾಸನ.. ಸಂಘ ಸಪ್ತಕೋಟಿ..! ಯೋಗಿ ಪಟ್ಟಕ್ಕೆ ಏಳು ಸುತ್ತಿನ ಕೋಟೆ ಕಟ್ಟುತ್ತಿದೆ RSS..!
19:26ನಾಟಿ ಕೋಳಿ ಊಟ ಹೊಟ್ಟೆಗೆ ಬೀಳ್ತಿದ್ದಂತೆ, ರಾಜಕೀಯ ಶಾಶ್ವತವಲ್ಲ ಎಂದ ಸಿದ್ದಣ್ಣ; ಆದ್ರೆ ಅಸಲಿಯತ್ತೇ ಬೇರೆ?
20:42ಕುರ್ಚಿ ಆಟದಲ್ಲಿ ಆಟಗಾರರೇ ಅಂಪೈರ್​ಗಳು; ಸಿದ್ದು ಆಟ, ಡಿಕೆ ಹಠ; ಹೈಕಮಾಂಡ್‌ಗೆ ಸಿಂಹಾಸನ ಸಂಕಟ!
23:14ಡಿ.ಕೆ.ಶಿವಕುಮಾರ್‌ಗೆ ಇದ್ಯಾ ರಾಜಯೋಗ? ನೇರಾನೇರ ಕುರ್ಚಿ ಕಾಳಗಕ್ಕೆ ಇಳಿದದ್ದು ಅದೇ ಕಾರಣಕ್ಕಾ?
23:56ಮಾತಿನ ಮೇಲಾಣೆ..! ವರ್ಡ್​​​ ಪವರ್​​ ಇಸ್​​​ ವರ್ಲ್ಡ್​​​ ಪವರ್​​​ ಎಂದ ಡಿಕೆಶಿ, ತಿರುಗೇಟು ಕೊಟ್ಟ ಸಿದ್ದು!
21:10ಮಹಾಕ್ರಾಂತಿ ಮಹಾ ಮುಹೂರ್ತ ಫಿಕ್ಸ್: ಪದತ್ಯಾಗನಾ? ಪಟ್ಟಾಭಿಷೇಕನಾ? ದೆಹಲಿಯಲ್ಲಿ ಕ್ಲೈಮ್ಯಾಕ್ಸ್..!
21:28ಹೊಸ ಆಟ ಆರಂಭಿಸಿದ್ರಾ ಡಿಕೆ ಬ್ರದರ್ಸ್? ಸಿಎಂ ಸಿಂಹಾಸನಕ್ಕಾಗಿ ರಾಜಕೀಯ ರಣರಂಗ!
22:40ಕುರ್ಚಿ ಕಿತ್ತಾಟ: 'ಜೋಡೆತ್ತು'ಗಳ ಜಲ್ಲಿಕಟ್ಟು, ಡಿಕೆಶಿ-ಸತೀಶ್ ಜಾರಕಿಹೊಳಿ ಮಧ್ಯರಾತ್ರಿ ರಹಸ್ಯ ರಿವೀಲ್!
Read more