Mar 28, 2024, 5:17 PM IST
ಎರಡು ಬಣಗಳ ಭಿನ್ನತೆ ವಿಧಾನ ಸೌಧದವರೆಗೂ ಬಂದು ನಿಂತಿದೆ. ಹೇಗಾದ್ರು ಮಾಡಿ ಮುನಿಯಪ್ಪನವರ ಕುಟುಂಬಕ್ಕೆ ಟಿಕೆಟ್ ಕೊಡಿಸಬಾರದೆಂಬ ಜಿದ್ದಿಗೆ ರಮೇಶ್ ಕುಮಾರ್ ಅವರ ಬಣ ಬಿದ್ದಂತಿದೆ. ಹೀಗಾಗಿ ರಮೇಶ್ ಕುಮಾರ್(Ramesh Kumar) ಬೆಂಬಲಿಗರೆಲ್ಲ ಒಟ್ಟುಗೂಡಿ, ತಮ್ಮ ತಮ್ಮ ಸ್ಥಾನಗಳಿಗೆ ರಾಜೀನಾಮೆ ಕೊಡುತ್ತೇವೆಂದು ಹೇಳಿ ವಿಧಾನಸೌಧಕ್ಕೆ ಬಂದಿದ್ದರು. ಆದ್ರೆ ಅದೊಂದು ರಾಜೀನಾಮೆ ಡ್ರಾಮಾವಾಗಿ ಅಂತ್ಯವಾದಂತಿದೆ. ಆದರೂ ಸಹ ಕೋಲಾರ(Kolar) ಟಿಕೆಟ್ ಹಂಚಿಕೆ ಬಿಕ್ಕಟ್ಟು ಈಗ ಮತ್ತಷ್ಟು ಬಿಗಿಯಾದಂತೆನೇ ಕಾಣುತ್ತಿದೆ. ಮುನಿಯಪ್ಪನವರ(KH Muniyappa) ಅಳಿಯನಿಗೆ ಟಿಕೆಟ್(Ticket) ತಪ್ಪಿಸುವ ಸಲುವಾಗಿ, ಅವರ ವಿರೋಧಿ ಬಣ ಎಡಗೈ-ಬಲಗೈಗಳ ಲೆಕ್ಕಾಚಾರ ಶುರುವಿಟ್ಟುಕೊಂಡಿದೆ. ಇಡೀ ಜಿಲ್ಲೆಯಲ್ಲಿ ಎಡಗೈಗಿಂತ ಬಲಗೈನವರೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಹೀಗಾಗಿ ಎಡಗೈ ಆದ ಮುನಿಯಪ್ಪವರ ಕುಟುಂಬಕ್ಕೆ ಟಿಕೆಟ್ ಕೊಡಕೂಡದೆಂದು ಅವರ ವಿರೋಧಿ ಬಣ ಬೇಡಿಕೆ ಇಟ್ಟಿದೆ. ಒಂದು ವೇಳೆ ಬಲಗೈ ಬಣಕ್ಕೆ ಕೊಡಲು ಸಾಧ್ಯವೇ ಇಲ್ಲ ಅನ್ನೋದಾದ್ರೆ, ತಾವು ಎಡಗೈ ಬಣಕ್ಕೆ ಕೊಟ್ಟರೂ ಸಹ ಮುನಿಯಪ್ಪನವರ ಕುಟುಂಬದ ಹೊರಗಿನವರಿಗೆ ಟಿಕೆಟ್ ಕೊಡಿ ಎಂದು ವಾದವನ್ನು ಮುಂದಿಟ್ಟಾರೆ.
ಇದನ್ನೂ ವೀಕ್ಷಿಸಿ: ರಾಷ್ಟ್ರ ರಾಜಕಾರಣಕ್ಕೆ ತಿರುವು ಕೊಟ್ಟ 1975ರ ತುರ್ತು ಪರಿಸ್ಥಿತಿ..! ಅಮ್ಮ-ಮಗ ಹೆಣೆದ ಬಲೆಯಲ್ಲಿ ವಿಲ ವಿಲ ಒದ್ದಾಡಿತ್ತು ಭಾರತ..!