Mar 31, 2024, 11:32 AM IST
ಬಿಜೆಪಿಯ 25 ಮತ್ತು ಜೆಡಿಎಸ್‌ನ 3 ಹಾಗೂ ಕಾಂಗ್ರೆಸ್‌ನ ಎಲ್ಲ 28 ಕ್ಷೇತ್ರಗಳಿಗೆ ಟಿಕೆಟ್(Ticket) ಡಿಕ್ಲೇರ್ ಆಗಿದೆ. ಕಟ್ಟಕಡೆಯದಾಗಿ ಹೊರಬಿದ್ದಿರೋದು ಕೋಲಾರ ಕಾಂಗ್ರೆಸ್ ಟಿಕೆಟ್. ಕಾಂಗ್ರೆಸ್(Congress) ಟಿಕೆಟ್ ಗೆದ್ದಿರೋದು ಕೆ.ವಿ.ಗೌತಮ್(KV Gautam). ಟಿಕೆಟ್ ಫೈಟ್‌ನ 3ನೇ ಕ್ಲೈಮಾಕ್ಸ್ ಅನ್ನೋದಕ್ಕೆ ಕಾರಣ ಇದೆ. ಇಬ್ಬರ ಜಗಳದಲ್ಲಿ ಮೂರನೇಯವರಿಗೆ ಲಾಭವಾಗಿದೆ. ಸಚಿವ ಮುನಿಯಪ್ಪ(Muniyappa) ಅವರ ಅಳಿಯ ಚಿಕ್ಕ ಪೆದ್ದಣ್ಣ ಅವರಿಗೂ ಸಿಕ್ಕಿಲ್ಲ. ಎಲ್. ಹನುಮಂತಯ್ಯ ಅವರಿಗೂ ಕೊಟ್ಟಿಲ್ಲ. ಎರಡೂ ಬಣಕ್ಕೆ ಸೇರದ ಮೂರನೇ ವ್ಯಕ್ತಿಗೆ ಟಿಕೆಟ್ ಸಿಗಲಿದೆ ಎಂಬ ನಿರೀಕ್ಷೆ ನಿಜವಾಗಿದೆ.ಈ ಬಣ ಬಡಿದಾಟ ಇವತ್ತಿನದ್ದಲ್ಲ. ಇತ್ತೀಚೆಗೆ ವಿಧಾನಸೌಧದಲ್ಲಿ ನಡೆದ ಶಾಸಕರು ರಾಜೀನಾಮೆ ಕೊಡೋ ಡ್ರಾಮಾ. ಜಸ್ಟ್ ಸ್ಯಾಂಪಲ್ ಅಷ್ಟೆ. ಮೊನ್ನೆ ಮೊನ್ನೆ ನಡೆದ ಆ ರೇಂಜಿನ ಬಂಡಾಯವನ್ನ ಸಿಎಂ ಸಿದ್ದರಾಮಯ್ಯ ಅವರಾಗ್ಲೀ. ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರಾಗ್ಲೀ ನಿರೀಕ್ಷೆಯನ್ನೂ ಮಾಡಿರಲಿಲ್ಲ. ಆದರೆ ಯಾವಾಗ ಸಚಿವ ಎಂಸಿ ಸುಧಾಕರ್, ಶಾಸಕರಾದ ಕೊತ್ತನೂರು ಮಂಜುನಾಥ್, ಕೆವೈ ನಂಜೇಗೌಡ ಹಾಗು ಪರಿಷತ್ ಸಂಸದರಾದ ಅನಿಲ್ ಕುಮಾರ್, ನಜೀರ್ ಅಹ್ಮದ್ ಅವರೆಲ್ಲ ಒಟ್ಟಾಗಿ ರಾಜೀನಾಮೆ ಕೊಡೋಕೆ ಬಂದ್ರೋ.. ಆಗ ಕೋಲಾರ ಟಿಕೆಟ್ ಫೈಟ್ ಇಡೀ ದೇಶಕ್ಕೇ ಗೊತ್ತಾಯ್ತು. ಯಾಕಂದ್ರೆ ಅವರು ಕೇಂದ್ರದಲ್ಲಿಯೂ ಸಚಿವರಾಗಿದ್ದ, ಹಾಲಿ ಸಚಿವ ಕೆ.ಹೆಚ್.ಮುನಿಯಪ್ಪ ವಿರುದ್ಧ ಸಿಡಿದೆದ್ದು ನಿಂತಿದ್ದರು.
ಇದನ್ನೂ ವೀಕ್ಷಿಸಿ: ರೌಡಿ ರಾಜಕಾರಣಿಗೆ ಜೈಲಲ್ಲೇ ನಿಂತ ಹಾರ್ಟ್, ವಿಷ ಹಾಕಿ ಕೊಲ್ಲಿಸಿದರಾ ಉತ್ತರ ಪ್ರದೇಶ ಪೊಲೀಸರು..?