ಅತಂತ್ರ ಫಲಿತಾಂಶ ನೀಡಿದ ಚುನಾವಣೋತ್ತರ ಸಮೀಕ್ಷೆ
ಕರ್ನಾಟಕದ 224 ಕ್ಷೇತ್ರಗಳಲ್ಲಿ ನಡೆದ ಎಕ್ಸಿಟ್ ಪೋಲ್
ಹಲವು ಸಮೀಕ್ಷೆಗಳಲ್ಲಿ ಕಾಂಗ್ರೆಸ್ ಅತೀ ದೊಡ್ಡ ಪಕ್ಷ ..!
ಮತದಾನ ಮುಗಿಯುತ್ತಿದ್ದಂತೆ ಈಗ ಎಲ್ಲರ ಕಣ್ಣು ಚುನಾವಣೋತ್ತರ ಸಮೀಕ್ಷೆಯ ಮೇಲಿದೆ. ಯಾವ ಪಕ್ಷ ಅಧಿಕಾರಕ್ಕೆ ಸಿಗಲಿದೆ. ಒಂದೇ ಪಕ್ಷ ಪೂರ್ಣ ಬಹುಮತದೊಂದಿಗೆ ಬರುತ್ತಾ? ಅಥವಾ ಮತ್ತೆ ಅತಂತ್ರ ಸರ್ಕಾರ ನಿರ್ಮಾಣವಾಗಲಿದೆಯಾ? ಎನ್ನುವ ಪ್ರಶ್ನೆ ಈಗ ಜನರಲ್ಲಿ ಮೂಡಿದೆ. ಸದ್ಯ ರಾಜ್ಯದ 224 ಕ್ಷೇತ್ರಗಳಲ್ಲಿ ಎಕ್ಸಿಟ್ ಪೋಲ್ ನಡೆಸಲಾಗಿದ್ದು, ಚುನಾವಣೋತ್ತರ ಸಮೀಕ್ಷೆ ಅತಂತ್ರ ಫಲಿತಾಂಶವನ್ನು ನೀಡಿದೆ. ಹಲವು ಸಮೀಕ್ಷೆಗಳಲ್ಲಿ ಕಾಂಗ್ರೆಸ್ ಅತೀ ದೊಡ್ಡ ಪಕ್ಷವಾಗಿ ಹೊರಹೊಮ್ಮಿದ್ದು, ಕೆಲವೇ ಸಮೀಕ್ಷೆಗಳಲ್ಲಿ ಬಿಜೆಪಿಗೆ ಮುನ್ನಡೆ ದೊರೆತಿದೆ. ಮತಗಟ್ಟೆ ಸಮೀಕ್ಷೆಯಲ್ಲಿ ಕಾಂಗ್ರೆಸ್ ಪಕ್ಷವೇ ಕರುನಾಡ ಕಿಂಗ್ ಆಗಿದೆ. ಈ ಬಾರಿ ದಾಖಲೆಯ ಮತದಾನವಾಗಿದ್ದು, ಶೇ.73 ರಷ್ಟು ಮತಚಲಾವಣೆಯಾಗಿದೆ.
ಇದನ್ನೂ ವೀಕ್ಷಿಸಿ: ದಿಗ್ಗಜರ ಎಲೆಕ್ಷನ್: ಕರ್ನಾಟಕದಲ್ಲಿ ಪ್ರಚಾರ ಮಾಡಿದ ಘಟಾನುಘಟಿಗಳು ಯಾರು ?