vuukle one pixel image

ನನ್ನ ವೋಟು ನನ್ನ ಮಾತು : ವರುಣಾದಲ್ಲಿ ಸಿದ್ದು ಗೆದ್ದೇ ಗೆಲ್ತಾರೆ ಎಂದ ಜನ

Apr 23, 2023, 12:51 PM IST

ನನ್ನ ವೋಟು ನನ್ನ ಮಾತು ಎಂಬ ವಿಶೇಷ ಕಾರ್ಯಕ್ರಮದಡಿ, ವರುಣಾ  ಮತದಾರರು ತಮ್ಮ ಅಭಿಪ್ರಾಯವನ್ನು ತಿಳಿಸಿದ್ದಾರೆ. ರಾಜ್ಯದಲ್ಲಿ ವಿಧಾನಸಭೆಯ ಚುನಾವಣೆಯ ಕಾವು ಜೋರಾಗಿದೆ, ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ.  ರಾಜಕಾರಣಿಗಳು ಬಿಝಿಯಾಗಿದ್ದಾರೆ. ಇನ್ನೊಂದು ಕಡೆ ಮತದಾರರು ಕೂಡಾ ಎಲ್ಲವನ್ನು ಕೂತು ಗಮನಿಸುತ್ತಿದ್ದು, ತಮ್ಮ ಅಭಿಪ್ರಾಯವನ್ನು ಹೇಳಿದ್ದಾರೆ. ವರುಣಾದಲ್ಲಿ ಸಿದ್ದರಾಮಯ್ಯ ಗೆಲ್ಲುತ್ತಾರೆ, ಸೋಮಣ್ಣ ಗೆಲ್ಲಲ್ಲ ಎಂದಿದ್ದಾರೆ . ವರುಣಾದಲ್ಲಿ ಸಿದ್ದರಾಮಯ್ಯ ಎಲ್ಲಾ ಅಭಿವೃದ್ದಿಯನ್ನು ಮಾಡಿದ್ದಾರೆ, ಅವರ ಸ್ವಕ್ಷೇತ್ರ,ವರುಣಾ ಇಲ್ಲಿನ ಮತದಾರರು ಅವರ ಕೈ ಬಿಡಲ್ಲಾ ಎಂದು ಅಭಿಪ್ರಯಾ ತಿಳಿಸಿದ್ದಾರೆ.  ಇನ್ನು ವಿಜಯೇಂದ್ರ  ವರುಣಾದಿಂದ ಸ್ಪರ್ಧೆ ಮಾಡಿದ್ದರೆ ತುಂಬಾ ಫೈಟ್‌ ಆಗುತ್ತಿದ್ದು, ಇಲ್ಲಿ ದಲಿತರ ನಿರ್ಧಾರ ಅಂತಿಮವಾಗಿದೆ. ಲಿಂಗಾಯತರಿಂದ 54 ಸಾವಿರ ಮತವಿದೆ.  2008  ರಲ್ಲಿ ವರುಣಾ  ಕ್ಷೇತ್ರ  ಸ್ಥಾಪನೆಯಾಗಿದ್ದು , ಸಿದ್ದರಾಮಯ್ಯಗೆ ಈ ಬಾರಿ ಕ್ಷೇತ್ರ ಕಗ್ಗಂಟಾಗಿದ್ದರಿಂದ ವರುಣಾಕ್ಕೆ ಮತ್ತೆ ಬಂದಿದ್ದಾರೆ. ಇವರ ವಿರುದ್ದ ವಿ ಸೋಮಣ್ಣ ಸ್ಪರ್ಧೆ ಮಾಡುತ್ತಿದ್ದಾರೆ .