ರಾಮನಗರದಿಂದ ಬೇರ್ಪಡುತ್ತಾ ಕನಕಪುರ..? ಮಾಜಿ ಸಿಎಂನ ಮಾಜಿ ಭದ್ರಕೋಟೆ ಮೇಲೆ ಇಬ್ಭಾಗಾಸ್ತ್ರ..?

Oct 26, 2023, 2:02 PM IST

ರಾಮನಗರ ಈಗ ಕರ್ನಾಟಕ ರಾಜಕೀಯದ ಕೇಂದ್ರ ಬಿಂದುವಾಗಿದೆ. ಮಾಜಿ ಸಿಎಂ ಕುಮಾರಸ್ವಾಮಿಯವರ(Former CM HD Kumaraswamy) ಮಾಜಿ ಭದ್ರಕೋಟೆಯ ಮೇಲೆ ಈಗ ಡಿಸಿಎಂ ಡಿಕೆ ಶಿವಕುಮಾರ್(DK Shivakumar) ಅವರ ಕಣ್ಣು ಬಿದ್ದಿದೆ. ರಾಮನಗರ(Ramanagar) ಜಿಲ್ಲೆಯಿಂದ ತಮ್ಮ ಸಾಮ್ರಾಜ್ಯವಾದ ಕನಕಪುರವನ್ನ(Kanakapura) ಬೇರ್ಪಡಿಸಿ ಬೆಂಗಳೂರಿಗೆ ಸೇರಿಸೋಕೆ ಡಿಕೆ ಶಿವಕುಮಾರ್ ಲೆಕ್ಕಾಚಾರ ಹಾಕ್ತಾ ಇದ್ದಾರೆ. ಇದೊಂದು ಮಾತು ಉಪ ಮುಖ್ಯಮಂತ್ರಿ ಬಾಯಿಂದ ಬಂದಿದ್ದೇ ತಡ, ರಾಜಕೀಯವಾಗಿ ದೊಡ್ಡ ಅಲೆಯೇ ಎದ್ದಿದೆ. ರಾಮನಗರದಲ್ಲಿ ಇಷ್ಟು ವರ್ಷ ಬಿಗಿಯಾದ ಹಿಡಿತ ಹೊಂದಿದ್ದ ಕುಮಾರಸ್ವಾಮಿ ಕಳೆದ ವಿಧಾನಸಭಾ ಚುನಾವಣೆಯಲ್ಲಿ ತಮ್ಮ ಪಕ್ಷವನ್ನ, ತಮ್ಮ ಮಗನನ್ನ ಗೆಲ್ಲಿಸೋಕೆ ಸೋತಿದ್ದರು. ಜೆಡಿಎಸ್ ಭದ್ರಕೋಟೆಯಾಗಿದ್ದ ರಾಮನಗರ ಕಾಂಗ್ರೆಸ್ ಕೈವಶವಾಯ್ತು. ಈಗ ಅದು ಡಿಕೆ ಶಿವಕುಮಾರ್ ಕಂಟ್ರೋಲಿನಲ್ಲಿದೆ ಅಂದ್ರೂ ತಪ್ಪಾಗೋದಿಲ್ಲಾ. ಹೀಗಾಗಿ ಹೊಸದೊಂದು ರಾಜಕೀಯ ದಾಳವನ್ನ ಉರುಳಿಸೋಕೆ ಡಿಕೆ ಶಿವಕುಮಾರ್ ಮುಂದಾಗಿದ್ದಾರೆ. ಅದೇ ರಾಮನಗರ ಜಿಲ್ಲೆಯಿಂದ ತಮ್ಮ ಕ್ಷೇತ್ರವಾದ ಕನಕಪುರವನ್ನ ಬೇರ್ಪಡಿಸಿ ತಮ್ಮ ಕಾರ್ಯಕ್ಷೇತ್ರ ಬೆಂಗಳುರಿಗೆ ಸೇರಿಸೋದು. ಕುಮಾರಸ್ವಾಮಿ ಹಾಗೂ ಡಿಕೆ ಶಿವಕುಮಾರ್ ಅವರ ರಾಜಕೀಯ ಸಂಬಂಧ ಅರ್ಥವೇ ಆಗೋದಿಲ್ಲ. ಕೆಲವೊಮ್ಮೆ ದೋಸ್ತಿ.. ಉಳಿದಾಗಲೆಲ್ಲಾ ಕುಸ್ತಿ ಅನ್ನೋ ಥರ ವಿಲಕ್ಷಣ ವ್ಯಕ್ತಿತ್ವವನ್ನ ಅವರು ತೋರಿಸ್ತಾರೆ. ಕುಮಾರಸ್ವಾಮಿ ಅವರ ಸರ್ಕಾರವನ್ನ ಉಳಿಸಿಕೊಳ್ಳೋಕೆ ಯಾರಾದ್ರೂ ಶಕ್ತಿ ಮೀರಿ ಹೋರಾಡಿದ್ರೆ ಅದು ಡಿಕೆ ಶಿವಕುಮಾರ್. ಇನ್ನು ನಾವಿಬ್ಬರೂ ಜೋಡೆತ್ತುಗಳು ಅಂತ ಕೈ ಹಿಡಿದು ಎದೆಯುಬ್ಬಿಸಿ ಹೇಳಿದ್ರೆ ಅದು ಕುಮಾರಸ್ವಾಮಿ ಮಾತ್ರ.. ಇಂಥ ದೋಸ್ತಿಗಳ ಮಧ್ಯ ದಂಗಲ್ ಶುರುವಾಗಿದೆ.

ಇದನ್ನೂ ವೀಕ್ಷಿಸಿ:  ಒಕ್ಕಲಿಗ ನಾಯಕರ ನಡುವೆ ಕನಕಪುರ ವಾರ್‌: ಇದ್ದಕ್ಕಿದ್ದಂತೆ ಒಂದೇ ದಿನದಲ್ಲಿ ಡಿಕೆಶಿ ಉಲ್ಟಾ ಹೊಡೆದಿದ್ದೇಕೆ..?