News Hour: ಸೋನಿಯಾ ಗಾಂಧಿಗೆ ಬೈದ ನೀವೇ ಇಂದು ಅವರ ಕಾಲ ಕೆಳಗೆ ಕುಳಿತಿಲ್ವಾ, ಸಿದ್ದುಗೆ ಜಿಟಿಡಿ ಟಾಂಗ್‌!

News Hour: ಸೋನಿಯಾ ಗಾಂಧಿಗೆ ಬೈದ ನೀವೇ ಇಂದು ಅವರ ಕಾಲ ಕೆಳಗೆ ಕುಳಿತಿಲ್ವಾ, ಸಿದ್ದುಗೆ ಜಿಟಿಡಿ ಟಾಂಗ್‌!

Published : Sep 01, 2023, 11:43 PM IST


2018ರ ಚಾಮುಂಡೇಶ್ವರಿ ಚುನಾವಣೆಯ ಸೋಲನ್ನು ನೆನಪಿಸಿಕೊಂಡು, ಕೆಲಸಕ್ಕೆ ಬಾರದವರನ್ನು ಆಯ್ಕೆ ಮಾಡಿದ್ದೀರಿ ಎಂದಿದ್ದ ಸಿಎಂ ಸಿದ್ಧರಾಮಯ್ಯ ವಿರುದ್ಧ ಜೆಡಿಎಸ್‌ ಶಾಸಕ ಜಿಟಿ ದೇವೇಗೌಡ ಹರಿಹಾಯ್ದಿದ್ದಾರೆ.

ಬೆಂಗಳೂರು (ಸೆ.1): ಕೆಲಸಕ್ಕೆ ಬಾರದವರನ್ನು ಚಾಮುಂಡೇಶ್ವರಿಯಲ್ಲಿ ಆಯ್ಕೆ ಮಾಡಿದ್ದೀರಿ ಎನ್ನುವ ಸಿಎಂ ಸಿದ್ಧರಾಮಯ್ಯ ಅವರ ಮಾತಿಗೆ ಜೆಡಿಎಸ್‌ ಶಾಸಕ ಜಿಟಿ ದೇವೇಗೌಡ ಕೆಂಡಾಮಂಡಲರಾಗಿದ್ದಾರೆ. ಕಾಂಗ್ರೆಸ್‌ನ ಸೀಮೆ ಎಣ್ಣೆ ಪಾರ್ಟಿ ಎಂದಿದ್ದ ನೀವು ಈಗ ಯಾರ ಕೆಳಗಿದ್ದೀರಿ ಅನ್ನೋದನ್ನ ನೆನಪು ಮಾಡಿಕೊಳ್ಳಿ ಎಂದು ಹೇಳಿದ್ದಾರೆ.

ನಾನು ಐದು ಬಾರಿ ಗೆದ್ದಿದ್ದೇನೆ. ನೀವು ರಾಜಶೇಖರ ಮೂರ್ತಿ ಮತ್ತೆ ನನ್ನ ವಿರುದ್ಧ ಸೋತಿದ್ದೀರಿ. 2013ರಲ್ಲಿ ನನ್ನನ್ನು ಸೋಲಿಸಲು ಬಂದಿದ್ದೀರಿ. ಆಗ ನಿಮಗೆ ಸಾಧ್ಯವಾಯ್ತಾ? ಎಂದು ಪ್ರಶ್ನೆ ಮಾಡಿದ್ದಾರೆ. ಈ ಹಿಂದೆ ನೀವೇ ಕಾಂಗ್ರೆಸ್‌ ನಾಯಕಿ ಸೋನಿಯಾ ಗಾಂಧಿಗೆ ಬೈದಿಲ್ವಾ?  ಆಕೆಗೆ ಭಾರತೀಯ ಪೌರತ್ವ ನೀಡಲೇಬಾರದು ಎಂದಿದ್ದೀರಿ. ಈಗ ನೀವು ಯಾರ ಕಾಲ ಕೆಳಗೆ ಇದ್ದೀರಿ ಅನ್ನೋದನ್ನು ನೋಡಿಕೊಳ್ಳಿ ಎಂದು ಟಾಂಗ್‌ ನೀಡಿದ್ದಾರೆ.

ನನ್ನನ್ನು ಬಿಟ್ಟು ಕೆಲಸಕ್ಕೆ ಬಾರದವರನ್ನ ಚಾಮುಂಡೇಶ್ವರಿಯಲ್ಲಿ ಗೆಲ್ಲಿಸಿದವರು ನೀವು: ಸಿಎಂ ಸಿದ್ಧರಾಮಯ್ಯ

1983ರಲ್ಲಿ ನಿಮ್ಮನ್ನು ಗೆಲ್ಲಿಸಿದ ಸಮುದಾಯ ಯಾವುದು ಅನ್ನೋದನ್ನು ನೆನಪು ಮಾಡಿಕೊಳ್ಳಿ. ಆದರೆ, ಅಂದು ನೀವು ಗೆಲ್ಲಿಸಿದವರ ಹೆಸರನ್ನೂ ಹೇಳಲಿಲ್ಲ. ನೆನಪೂ ಮಾಡಿಕೊಳ್ಳಲಿಲ್ಲ.ಈಗ ಸಿಎಂ ಆಗಿದ್ದೀರಿ. ಯಾರಿಗೂ ಅಗೌರವ ತೋರಬೇಡಿ. ನಾನು ನಾಯಕನೇ ಸುಮ್ಮನೆ ಏಕವಚನದಲ್ಲಿ ಮಾತನಾಡುವ ಅಭ್ಯಾಸ ಮಾಡಿಕೊಳ್ಳಬೇಡಿ ಎಂದು ಟೀಕಿಸಿದ್ದಾರೆ.

20:50ಸಿಂಹಾಸನ ಸಂಗ್ರಾಮದಲ್ಲಿ ಡಿಕೆ ಶಿವಕುಮಾರ್ 'ಸ್ನೇಹವ್ಯೂಹ': ಸಿದ್ದು ಸಿಪಾಯಿಗಳನ್ನೇ ಸೆಳೆಯುವ ಬಂಡೆಯ ಹೊಸ ದಾಳ!
19:44Suvarna Special: ಸಂನ್ಯಾಸಿ ಸಿಂಹಾಸನ.. ಸಂಘ ಸಪ್ತಕೋಟಿ..! ಯೋಗಿ ಪಟ್ಟಕ್ಕೆ ಏಳು ಸುತ್ತಿನ ಕೋಟೆ ಕಟ್ಟುತ್ತಿದೆ RSS..!
19:26ನಾಟಿ ಕೋಳಿ ಊಟ ಹೊಟ್ಟೆಗೆ ಬೀಳ್ತಿದ್ದಂತೆ, ರಾಜಕೀಯ ಶಾಶ್ವತವಲ್ಲ ಎಂದ ಸಿದ್ದಣ್ಣ; ಆದ್ರೆ ಅಸಲಿಯತ್ತೇ ಬೇರೆ?
20:42ಕುರ್ಚಿ ಆಟದಲ್ಲಿ ಆಟಗಾರರೇ ಅಂಪೈರ್​ಗಳು; ಸಿದ್ದು ಆಟ, ಡಿಕೆ ಹಠ; ಹೈಕಮಾಂಡ್‌ಗೆ ಸಿಂಹಾಸನ ಸಂಕಟ!
23:14ಡಿ.ಕೆ.ಶಿವಕುಮಾರ್‌ಗೆ ಇದ್ಯಾ ರಾಜಯೋಗ? ನೇರಾನೇರ ಕುರ್ಚಿ ಕಾಳಗಕ್ಕೆ ಇಳಿದದ್ದು ಅದೇ ಕಾರಣಕ್ಕಾ?
23:56ಮಾತಿನ ಮೇಲಾಣೆ..! ವರ್ಡ್​​​ ಪವರ್​​ ಇಸ್​​​ ವರ್ಲ್ಡ್​​​ ಪವರ್​​​ ಎಂದ ಡಿಕೆಶಿ, ತಿರುಗೇಟು ಕೊಟ್ಟ ಸಿದ್ದು!
21:10ಮಹಾಕ್ರಾಂತಿ ಮಹಾ ಮುಹೂರ್ತ ಫಿಕ್ಸ್: ಪದತ್ಯಾಗನಾ? ಪಟ್ಟಾಭಿಷೇಕನಾ? ದೆಹಲಿಯಲ್ಲಿ ಕ್ಲೈಮ್ಯಾಕ್ಸ್..!
21:28ಹೊಸ ಆಟ ಆರಂಭಿಸಿದ್ರಾ ಡಿಕೆ ಬ್ರದರ್ಸ್? ಸಿಎಂ ಸಿಂಹಾಸನಕ್ಕಾಗಿ ರಾಜಕೀಯ ರಣರಂಗ!
22:40ಕುರ್ಚಿ ಕಿತ್ತಾಟ: 'ಜೋಡೆತ್ತು'ಗಳ ಜಲ್ಲಿಕಟ್ಟು, ಡಿಕೆಶಿ-ಸತೀಶ್ ಜಾರಕಿಹೊಳಿ ಮಧ್ಯರಾತ್ರಿ ರಹಸ್ಯ ರಿವೀಲ್!
21:17ಸಿಎಂ ಸಿಂಹಾಸನ ಸಮರ: 'ಕೊಟ್ಟ ಮಾತು ಉಳಿಸಿಕೊಳ್ಳಿ'! ಅಧ್ಯಕ್ಷ ಖರ್ಗೆಗೆ ಡಿಕೆಶಿ 'ಆತ್ಮಸಾಕ್ಷಿ' ಅಸ್ತ್ರ!
Read more