ಎನ್.ಡಿ.ಎ. ಮೈತ್ರಿಕೂಟ ಸೇರಿದ ಜೆಡಿಎಸ್.. ರಾಜ್ಯದಲ್ಲಿ ಹೊಸ ಆಟ ಶುರು..!

ಎನ್.ಡಿ.ಎ. ಮೈತ್ರಿಕೂಟ ಸೇರಿದ ಜೆಡಿಎಸ್.. ರಾಜ್ಯದಲ್ಲಿ ಹೊಸ ಆಟ ಶುರು..!

Published : Sep 23, 2023, 12:31 PM IST

ಲೋಕಯುದ್ಧಕ್ಕೆ ಮಹಾ ಮೈತ್ರಿ ಫಿಕ್ಸ್..ಹೊಸ ಆಟವೂ ಫಿಕ್ಸ್..!
ಕಮಲ ಮುಡಿದ ತೆನೆ ಹೊತ್ತ ಮಹಿಳೆ..!ಯಾರಿಗೆಷ್ಟು ಸೀಟು..?
40 ನಿಮಿಷಗಳ ಸೀಕ್ರೆಟ್ ಸಭೆಯಲ್ಲಿ ಚರ್ಚೆಯಾಗಿದ್ದೇನು..?
 

20ರ ಟಾರ್ಗೆಟ್ ಫಿಕ್ಸ್ ಮಾಡಿ ಮುನ್ನುಗ್ತಾ ಇರೋ ಕಾಂಗ್ರೆಸ್‌ನ(Congress) ಅಶ್ವಮೇಧದ ಕುದುರೆಯನ್ನು ಕಟ್ಟಿ ಹಾಕಲು ಫಿಕ್ಸ್ ಆಗಿದೆ ಬಿಜೆಪಿ-ಜೆಡಿಎಸ್ (JDS) ಮೈತ್ರಿ. ಇದು ಶತ್ರುವಿನ ಶತ್ರು ಮಿತ್ರ ಅನ್ನೋ ಸೂತ್ರದಡಿ ಹೆಣೆಯಲಾಗಿರೋ ರೋಚಕ ಮೈತ್ರಿ ರಣವ್ಯೂಹ. 2006ರ ನಂತರ ಮತ್ತೆ ಬಿಜೆಪಿ(BJP) ಜೊತೆ ದೋಸ್ತಿ ಮಾಡ್ಕೊಂಡಿರೋ ದಳಪತಿಗಳು ಲೋಕಸಭಾ ಚುನಾವಣೆಯನ್ನು(Lokdabha) ಮೈತ್ರಿಕೂಟದೊಂದಿಗೆ ಎದುರಿಸಲು ರೆಡಿಯಾಗಿದ್ದಾರೆ. ದೆಹಲಿಯಲ್ಲಿ ಜೆಡಿಎಸ್-ಬಿಜೆಪಿ ಮೈತ್ರಿ ಮಾತುಕತೆ ನಡೆದಿದ್ದು, ದಳಪತಿಗಳು ಅಧಿಕೃತವಾಗಿ ಎನ್.ಡಿ.ಎ ಮೈತ್ರಿಕೂಟ ಸೇರಿದ್ದಾರೆ. ಲೋಕಸಭಾ ಚುನಾವಣೆಯನ್ನು ಬಿಜೆಪಿ ಮತ್ತು ಜೆಡಿಎಸ್ ಒಂದಾಗಿ ಎದುರಿಸಲಿವೆ ಅನ್ನೋ ಸುದ್ದಿಯನ್ನು ಎಲ್ಲರಿಗಿಂತ ಮೊದ್ಲು ಬ್ರೇಕ್ ಮಾಡಿದ್ದು ರಾಜ್ಯದ ಪೊಲಿಟಿಕಲ್ ಹೆಡ್ ಕ್ವಾರ್ಟರ್ ಖ್ಯಾತಿಯ ನಿಮ್ಮ ನೆಚ್ಚಿನ ಏಷ್ಯಾನೆಟ್ ಸುವರ್ಣ ನ್ಯೂಸ್. ಆ ಸುದ್ದಿ ಈಗ ನಿಜವಾಗಿದೆ. ಮೈತ್ರಿ ಮಾತುಕತೆಯಾಗಿ ಎರಡು ದಿನಗಳಿಂದ ದೆಹಲಿಯಲ್ಲಿ ಬೀಡು ಬಿಟ್ಟಿದ್ದ ದಳಪತಿ ಕುಮಾರಸ್ವಾಮಿ, ಶುಕ್ರವಾರ ಅಮಿತ್ ಶಾ ಅವರನ್ನು ಭೇಟಿಯಾಗಿದ್ದಾರೆ. ಇನ್ನು ಬಿಜೆಪಿ-ಜೆಡಿಎಸ್ ಮಹಾಮೈತ್ರಿಯ(Alliance) ಬಗ್ಗೆ ಟ್ವೀಟ್ ಮಾಡಿರೋ ಬಿಜೆಪಿ ರಾಷ್ಟ್ರಾಧ್ಯಕ್ಷ ಜೆ.ಪಿ ನಡ್ಡಾ, ಜೆಡಿಎಸ್ಸನ್ನು ಎನ್.ಡಿ.ಎ ಮೈತ್ರಿಕೂಟಕ್ಕೆ ಸ್ವಾಗತಿಸಿದ್ದಾರೆ.

ಇದನ್ನೂ ವೀಕ್ಷಿಸಿ:  ಉಂಡ ಮನೆಗೆ ಕನ್ನ ಬಗೆದ ಕಿರಾತಕರು..! 30 ಸಾವಿರ ಹಣಕ್ಕಾಗಿ ಧಣಿಯನ್ನೇ ಕೊಂದ ಪಾಪಿಗಳು !

18:13ಸಿದ್ದು ಸೇನೆಯಲ್ಲಿ ಬಿರುಕು: ಅಹಿಂದ ಅರಸೊತ್ತಿಗೆ, ಸಾಹುಕಾರ್​ಗೆ ಸಿಗುತ್ತಾ ಪ್ರಚಂಡ ಪವರ್?
19:47ಅರಸು ಆಳ್ವಿಕೆ ದಾಖಲೆ ಮುರಿಯೋವರೆಗೂ ಸಿದ್ದು ಸಿಎಂ ಕುರ್ಚಿ ಗಡದ್ದು; ಪುತ್ರನ ಹೇಳಿಕೆಯಿಂದ ಮತ್ತೆ ಮಾಡ್ತಿದೆ ಸದ್ದು!
20:50ಸಿಂಹಾಸನ ಸಂಗ್ರಾಮದಲ್ಲಿ ಡಿಕೆ ಶಿವಕುಮಾರ್ 'ಸ್ನೇಹವ್ಯೂಹ': ಸಿದ್ದು ಸಿಪಾಯಿಗಳನ್ನೇ ಸೆಳೆಯುವ ಬಂಡೆಯ ಹೊಸ ದಾಳ!
19:44Suvarna Special: ಸಂನ್ಯಾಸಿ ಸಿಂಹಾಸನ.. ಸಂಘ ಸಪ್ತಕೋಟಿ..! ಯೋಗಿ ಪಟ್ಟಕ್ಕೆ ಏಳು ಸುತ್ತಿನ ಕೋಟೆ ಕಟ್ಟುತ್ತಿದೆ RSS..!
19:26ನಾಟಿ ಕೋಳಿ ಊಟ ಹೊಟ್ಟೆಗೆ ಬೀಳ್ತಿದ್ದಂತೆ, ರಾಜಕೀಯ ಶಾಶ್ವತವಲ್ಲ ಎಂದ ಸಿದ್ದಣ್ಣ; ಆದ್ರೆ ಅಸಲಿಯತ್ತೇ ಬೇರೆ?
20:42ಕುರ್ಚಿ ಆಟದಲ್ಲಿ ಆಟಗಾರರೇ ಅಂಪೈರ್​ಗಳು; ಸಿದ್ದು ಆಟ, ಡಿಕೆ ಹಠ; ಹೈಕಮಾಂಡ್‌ಗೆ ಸಿಂಹಾಸನ ಸಂಕಟ!
23:14ಡಿ.ಕೆ.ಶಿವಕುಮಾರ್‌ಗೆ ಇದ್ಯಾ ರಾಜಯೋಗ? ನೇರಾನೇರ ಕುರ್ಚಿ ಕಾಳಗಕ್ಕೆ ಇಳಿದದ್ದು ಅದೇ ಕಾರಣಕ್ಕಾ?
23:56ಮಾತಿನ ಮೇಲಾಣೆ..! ವರ್ಡ್​​​ ಪವರ್​​ ಇಸ್​​​ ವರ್ಲ್ಡ್​​​ ಪವರ್​​​ ಎಂದ ಡಿಕೆಶಿ, ತಿರುಗೇಟು ಕೊಟ್ಟ ಸಿದ್ದು!
21:10ಮಹಾಕ್ರಾಂತಿ ಮಹಾ ಮುಹೂರ್ತ ಫಿಕ್ಸ್: ಪದತ್ಯಾಗನಾ? ಪಟ್ಟಾಭಿಷೇಕನಾ? ದೆಹಲಿಯಲ್ಲಿ ಕ್ಲೈಮ್ಯಾಕ್ಸ್..!
21:28ಹೊಸ ಆಟ ಆರಂಭಿಸಿದ್ರಾ ಡಿಕೆ ಬ್ರದರ್ಸ್? ಸಿಎಂ ಸಿಂಹಾಸನಕ್ಕಾಗಿ ರಾಜಕೀಯ ರಣರಂಗ!
Read more