Jul 3, 2023, 3:13 PM IST
ಬೆಂಗಳೂರು: ಸಿಎಂ ಕಚೇರಿಗೆ ಹೋದ್ರೆ 30 ಲಕ್ಷ ರೂಪಾಯಿ ಕೇಳುತ್ತಾರೆ. ಶಾಸಕರ ಲೇಟರ್ ತೆಗೆದುಕೊಂಡು ಹೋದ್ರೂ ಹಣ ಕೇಳುತ್ತಾರೆ ಎಂದು ಸಿಎಂ ಕಚೇರಿ ವಿರುದ್ಧ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಲಂಚದ ಆರೋಪವನ್ನು ಮಾಡಿದ್ದಾರೆ. ಒಂದು ವೇಳೆ ಹಣ ಕೊಡದಿದ್ರೆ, ಕೆಲಸ ಆಗುವುದಿಲ್ಲ. ಪ್ರತಿ ಇಲಾಖೆಯಲ್ಲೂ ಸಿಂಡಿಕೇಟ್‌ಗಳು ಕೆಲಸ ಮಾಡುತ್ತಿದ್ದಾರೆ. ಈ ಸಿಂಡಿಕೇಟ್‌ಗಳು ಯಾರು ವರ್ಗಾವಣೆ ಆಗಬೇಕು ಅಂತಾ ಲಿಸ್ಟ್ ಕೊಡ್ತಾರೆ. ಅದರಂತೆ ವರ್ಗಾವಣೆ ನಡೆಯುತ್ತದೆ ಎಂದು ಹೆಚ್‌ಡಿಕೆ ಹೊಸ ಆರೋಪ ಮಾಡಿದ್ದಾರೆ. ಬೀದಿ ಬೀದಿಯಲ್ಲಿ ಕಾಂಗ್ರೆಸ್‌ನವರು ಎರಡು ವರ್ಷ ಜಾಗಟೆ ಬಾರಿಸಿದ್ರಿ. 40% ಅಂದ್ರಿ ಅದಕ್ಕೆ ಡಾಕ್ಯುಮೆಂಟ್ ಇಟ್ಡಿದ್ದೀರಾ ?ಪೇ ಸಿಎಂ ಅಂತ ಮಾಡಿದ್ರಿ ಅದಕ್ಕೆ ದಾಖಲೆ ಇಟ್ರಾ? ಎಂದು ಪ್ರಶ್ನಿಸಿದ್ದಾರೆ.
ಇದನ್ನೂ ವೀಕ್ಷಿಸಿ: ಸಿನಿಮಾ ಡೈಲಾಗ್‌ಗಳಿಂದ ರಾಜಕೀಯ ಹೆಚ್ಚು ದಿನ ನಡೆಯಲ್ಲ: ಡಾ.ಸುಧಾಕರ್