ಆಗಾಗ ಸದ್ದು ಮಾಡೋದೇಕೆ ನೈಸ್ ವಿವಾದ ?: ಮೋದಿ ತನಕ ಹೋಗುತ್ತಾ NICE ಗಲಾಟೆ..?

ಆಗಾಗ ಸದ್ದು ಮಾಡೋದೇಕೆ ನೈಸ್ ವಿವಾದ ?: ಮೋದಿ ತನಕ ಹೋಗುತ್ತಾ NICE ಗಲಾಟೆ..?

Published : Aug 07, 2023, 02:45 PM IST

ಮೋದಿ ಬಳಿ ಹೋಗುತ್ತಾ ಅಣ್ತಮ್ಮನ ಗಲಾಟೆ..?
ಸರ್ಕಾರಕ್ಕೆ ತಲೆನೋವಾದ್ರಾ ಕುಮಾರಸ್ವಾಮಿ..?
ಸರ್ಕಾರದ ಮೇಲೆ ಕುಮಾರಣ್ಣನ ನಿರಂತರ ದಾಳಿ

ಮಾಜಿ ಸಿಎಂ ಹೆಚ್‌.ಡಿ. ಕುಮಾರಸ್ವಾಮಿ (HD Kumaraswamy) ಫ್ಯಾಮಿಲಿ ಜೊತೆ ಕೂಲ್ ಆಗಿ ಫಾರಿನ್ ಟೂರ್ ಮುಗಿಸಿಕೊಂಡು ಬಂದು ಈಗ ರಾಂಗ್ ಆಗಿದ್ದಾರೆ. ಕಾಂಗ್ರೆಸ್(Congress) ಸರ್ಕಾರದ ವಿರುದ್ಧ ಗಟ್ಟಿ ಧ್ವನಿಯಲ್ಲಿ ವಾಗ್ದಾಳಿ ನಡೆಸ್ತಿದ್ದಾರೆ. ವರ್ಗಾವಣೆ ವಿಚಾರದಿಂದ ಹಿಡಿದು ಸರ್ಕಾರದ ಪ್ರತಿಯೊಂದು ನಡೆಗಳ ಬಗ್ಗೆ ಟೀಕೆ ಮಾಡ್ತಾ ಇದ್ದಾರೆ. ಈಗ ನೈಸ್ ಪ್ರಕರಣವನ್ನ ಮೋದಿಯ(Modi) ಬಳಿ ಒಯ್ಯುವ ಬಗ್ಗೆ ಸೂಚನೆ ಕೊಟ್ಟಿದ್ದಾರೆ. ಕುಮಾರಸ್ವಾಮಿ ಹಾಗೂ ಡಿಕೆ ಶಿವಕುಮಾರ್(dk shivakumar) ಅಂದ್ರೆ ಕರ್ನಾಟಕ ರಾಜಕೀಯದ ಎರಡು ಅಪರೂಪದ ಅಧ್ಯಾಯ. ದೋಸ್ತಿ ಮತ್ತು ಕುಸ್ತಿ ಎರಡೂ ಕೂಡ ಈ ಇಬ್ಬರಿಗೆ ಹೊಸತೇನಲ್ಲಾ. ಒಂದು ಕಾಲದಲ್ಲಿ ಅದೇನು ದುಷ್ಮನಿ, ಅದೇನು ದ್ವೇಷ. ಅದು ಕರ್ನಾಟಕವೇ ತಿರುಗಿ ನೋಡುವಂತೆ ಮಾಡಿದ್ದ ರಾಜಕೀಯ ಶತ್ರುತ್ವ. ಇವ್ರಿಬ್ರ ಮಧ್ಯೆ ಇದ್ದದ್ದು ಕೇವಲ ರಾಜಕೀಯ ದ್ವೇಷವಲ್ಲ, ಅದನ್ನೂ ಮೀರಿದ ದುಷ್ಮನಿ. ಆದ್ರೆ ಆಜನ್ಮ ವೈರಿಗಳಂತೆ ಗುದ್ದಾಡ್ತಾ ಇದ್ದವರು ದೋಸ್ತಿಗಳಾಗಿದ್ದು ರಾಜಕಾರಣದ ಮತ್ತೊಂದು ಅಚ್ಚರಿ. ದುಷ್ಮನಿಯಾತ್ತು, ದೋಸ್ತಿಯಾಯ್ತು, ಪೈಲ್ವಾನ್'ಗಳಂತೆ ಕುಸ್ತಿಯಾಡಿದ್ದೂ ಆಯ್ತು. ಈಗ ಡಿಕೆ ಶಿವಕುಮಾರ್ ಮತ್ತು ಎಚ್.ಡಿ ಕುಮಾರಸ್ವಾಮಿ ಮಧ್ಯೆ ಅಣ್ತಮ್ಮ ರಗಳೆ ಶುರುವಾಗಿದೆ. ಅಣ್ಣ ರಾಂಗ್ ಆದ್ರೆ, ರಾಂಗ್ ಆಗಿರೋ ಅಣ್ಣನನ್ನು ತಮ್ಮ ಕಿಚಾಯಿಸ್ತಾ ಇದ್ದಾರೆ. 

ಇದನ್ನೂ ವೀಕ್ಷಿಸಿ:  ಅತ್ತಿಗೆ ಮಲಗಿದವರು ಎದ್ದಿಲ್ಲ, ಲೋ ಬಿಪಿ ಅಂದುಕೊಂಡಿದ್ವಿ: ನಟ ಶ್ರೀಮುರುಳಿ

20:04ಏನಿದು ಡಿಕೆ ಮಾತಿನ ಮರ್ಮ? ಶಕ್ತಿವಂತರಿಗೆ ಶತ್ರುಗಳು ಜಾಸ್ತಿ: ಬಂಡೆ ಹೇಳಿದ ಶತ್ರು ರಹಸ್ಯ!
23:23ಮಹಾ ದಾಖಲೆಗೆ ಸಿದ್ದು ಅರಸ.. ಮೊಳಗಿತು ರಣಘೋಷ..! ಡಿಕೆ ಮೌನದ ಹಿಂದೆ ಅಡಗಿದ್ಯಾ ಗುಡುಗಿನ ಸದ್ದು..?
22:45ದಳಪತಿ Vs ಗಣಿಧಣಿ, 20 ವರ್ಷಗಳ ರಣ ದುಷ್ಮನಿ! ಗಾಲಿ ರೆಡ್ಡಿ ಪರವಾಗಿ ಅಖಾಡಕ್ಕಿಳಿದ HDK!
24:03Narendra Modi: 2025ರಲ್ಲಿ ಪ್ರಧಾನಿ ನರೇಂದ್ರ ಮೋದಿ ಸಾಧನೆ ಏನು? ಇಲ್ಲಿದೆ ನೋಡಿ ಸಂಪೂರ್ಣ ವರದಿ
20:58ಅಣ್ಣನನ್ನೇ ಓವರ್ ಟೇಕ್ ಮಾಡಿದ್ರಾ ಮುದ್ದಿನ ತಂಗಿ? ಅರ್ಧ ನಿಜವಾಗಿದೆ ಅಂದು ಇಂದಿರಾ ನುಡಿದಿದ್ದ ಭವಿಷ್ಯ!
20:43ಸಿಎಂ ಪಟ್ಟದ ಪಗಡೆಯಾಟದಲ್ಲಿ ಡಿಕೆಶಿ ವೈರಾಗ್ಯದ ನುಡಿ: ಸಿದ್ದು ಅಹಿಂದ ಬ್ರಹ್ಮಾಸ್ತ್ರಕ್ಕೆ ಸಿಂಹಾಸನ ದಿಗ್ಬಂಧನ?
22:34ರಾಹುಕಾಲ ರಹಸ್ಯ..! ಸಿದ್ದು ಆಪ್ತನ ಪತ್ರವ್ಯೂಹ.. ರಾಹುಲ್ ಕೈಯಲ್ಲಿ ಡಿ.ಕೆ.ಶಿವಕುಮಾರ್ ಪಟ್ಟ ಭವಿಷ್ಯ!
25:15ಜೂನಿಯರ್ ಇಂದಿರೆ, ಪ್ರಚಂಡ ಪ್ರಿಯಾಂಕಾ; ಬದ್ಧವೈರಿಗಳ ಬಾಯಲ್ಲೇ ಗುಣಗಾನ
23:33ಒಂದೇ ಕಲ್ಲಿನಲ್ಲಿ ಎರಡು ಹಕ್ಕಿ ಹೊಡೆದಿದ್ದು ಹೇಗೆ ರಣಬೇಟೆಗಾರ ಸಿಎಂ ಸಿದ್ದರಾಮಯ್ಯ?
05:37ಡೆವಿಲ್ ಸಿನಿಮಾದಲ್ಲಿ ದರ್ಶನ್ ಸಿಎಂ..! ಕಿಚ್ಚ ಸುದೀಪ್ ಹೇಳಿದ ಪಾಲಿಟಿಕ್ಸ್ ಸೀಕ್ರೆಟ್ ಏನು?
Read more