ದಾಖಲೆ ಕೇಳಿದವರಿಗೆ ಪೆನ್‌ಡ್ರೈವ್‌ ತೋರಿಸಿದ ಹೆಚ್‌ಡಿಕೆ: "ಆ" ಸಾಕ್ಷಿ ಬಯಲಾದ್ರೆ ಯಾರಿಗೆ ಕುತ್ತು?

ದಾಖಲೆ ಕೇಳಿದವರಿಗೆ ಪೆನ್‌ಡ್ರೈವ್‌ ತೋರಿಸಿದ ಹೆಚ್‌ಡಿಕೆ: "ಆ" ಸಾಕ್ಷಿ ಬಯಲಾದ್ರೆ ಯಾರಿಗೆ ಕುತ್ತು?

Published : Jul 06, 2023, 11:27 AM IST

ಮೊನ್ನೆ 30 ಲಕ್ಷ.. ಇವತ್ತು 10 ಕೋಟಿ ಡೀಲ್ ಬಾಂಬ್..!
"ಟ್ರಾನ್ಸ್‌ಫರ್‌ಗೆ 10 ಕೋಟಿ.. ದಿನದ ಆದಾಯ 50 ಲಕ್ಷ"
"ಇಂಧನ" ಇಲಾಖೆಯತ್ತ ಬೆರಳು ತೋರಿಸಿದ ಹೆಚ್‌ಡಿಕೆ..!

ಕುಮಾರಸ್ವಾಮಿಯವರ ಕೈಯಲ್ಲಿರೋದು ಒಂದು ಪೆನ್'ಡ್ರೈವ್. ಹೆಚ್‌ಡಿಕೆ  ಪ್ರಕಾರ ಇದು ಸಾಮಾನ್ಯ ಪೆನ್'ಡ್ರೈವ್ ಅಲ್ಲ. ಸರ್ಕಾರದಲ್ಲಿ ನಡೀತಾ ಇರೋ ವರ್ಗಾವಣೆ ದಂಧೆಯ ಸ್ಫೋಟಕ ಸಾಕ್ಷಿಯನ್ನು ತನ್ನ ಒಡಲಲ್ಲಿ ಇಟ್ಕೊಂಡಿರೋ ಪೆನ್'ಡ್ರೈವ್. ಬುಧವಾರ ವಿಧಾನಸಭಾ ಅಧಿವೇಶನಕ್ಕೆ ಬಂದವರೇ ಮಾಧ್ಯಮಗಳ ಮುಂದೆ ಬಂದ ಕುಮಾರಸ್ವಾಮಿ, ಈ ಪೆನ್'ಡ್ರೈವ್ ರಹಸ್ಯ ಸ್ಫೋಟಿಸಿದ್ರು. ಎಲ್ಲಾ ರೆಡಿ ಮಾಡಿ ಇಟ್ಕೊಂಡಿದ್ದೀನಿ ಬ್ರದರ್ ಅಂತ ಶರ್ಟ್ ಜೇಬಿನಲ್ಲಿದ್ದ ಪೆನ್'ಡ್ರೈವನ್ನು ತೆಗೆದು ತೋರಿಸಿದ್ರು. ಮಾಜಿ ಸಿಎಂ ಕುಮಾರಸ್ವಾಮಿ ತೋರಿಸ್ತಾ ಇರೋ ಈ ಪೆನ್’ಡ್ರೈವ್’ನಲ್ಲಿ ಮುಖ್ಯಮಂತ್ರಿ ಕಚೇರಿಯಲ್ಲಿ ನಡೀತಾ ಇರೋ ವರ್ಗಾವಣೆ ದಂಧೆಗೆ ಸಂಬಂಧಿಸಿದ ಸಾಕ್ಷಿ ಇದ್ಯಂತೆ. ಆಡಿಯೋ ಸಾಕ್ಷಿ ಎಚ್ಡಿಕೆ ಕೈ ಸೇರಿದ್ಯಂತೆ. ನನ್ನ ಆರೋಪಗಳಿಗೆ ದಾಖಲೆ ಕೇಳ್ತಿದ್ರಲ್ಲಾ. ನೋಡಿ ಇದೇ ದಾಖಲೆ ಅಂತ ಪೆನ್'ಡ್ರೈವನ್ನು ಎಚ್ಡಿಕೆ ಪ್ರದರ್ಶಿಸಿದ್ದಾರೆ. ವರ್ಗಾವಣೆ ದಂಧೆಯ ಸಾಕ್ಷಿ ಪೆನ್'ಡ್ರೈವ್'ನಲ್ಲಿದ್ರೆ ಅದನ್ನು ಜಗಜ್ಜಾಹೀರು ಮಾಡೋದು ಎಷ್ಟು ಹೊತ್ತಿನ ಕೆಲ್ಸ..? ಆದ್ರೆ ಪೆನ್'ಡ್ರೈವ್ ತೋರಿಸಿದ ಎಚ್ಡಿಕೆ ಸಮಯ ಬಂದಾಗ ಬಹಿರಂಗ ಮಾಡೋದಾಗಿ ಹೇಳಿದ್ದಾರೆ.

ಇದನ್ನೂ ವೀಕ್ಷಿಸಿ:  ಬಿಜೆಪಿ-ಶಿರೋಮಣಿ ಅಕಾಲಿದಳ ಮೈತ್ರಿ ..? : ಕೇಸರಿ ಹೈಕಮಾಂಡ್‌ ಜೊತೆ ಎಸ್‌ಎಡಿ ಮುಖ್ಯಸ್ಥ ಮಾತು..?

24:17ಕಾಸು..ಕರೆಂಟು..ಲಕ್ಷ್ಮೀ..ಜ್ಯೋತಿ..ಡಬಲ್ ಆಪರೇಷನ್! ಎಪಿಕ್ ಕಾರ್ಡ್​ ನಂಬರ್ ಸೀಕ್ರೆಟ್​..ಏನಿದು ಮಾಸ್ಟರ್​ ಸ್ಟ್ರೋಕ್?
21:09ಇದು ದಳಪತಿ ಕೋಟೆ ಕಣೋ! ವಿಜಯ್ ಶಪಥಕ್ಕೆ ನಡುಗಿದ್ದೇಕೆ ದ್ರಾವಿಡ ನೆಲದ ರಾಜಕಾರಣ?
23:39ಕೈ ಕೊಟ್ಟವರ್ಯಾರೋ ಮಂಜುನಾಥ?; ಬಿಜೆಪಿಯಲ್ಲಿ ಅಡ್ಡಮತದಾನದ ಆಂತರಿಕ ಜ್ವಾಲಾಮುಖಿ ಸ್ಫೋಟ!
23:38ಬಿಡದಿ ಟೌನ್‌ಶಿಪ್ ರಣರಂಗದಲ್ಲಿ ಪತ್ರಕ್ಕೆ ಪತ್ರ, ಸವಾಲ್‌ಗೆ ಸವಾಲ್, ಜಿದ್ದಿಗೆ ಜಿದ್ದು!
06:49ಪ್ಯಾನ್ ಇಂಡಿಯಾ ಹೀರೋ ವಿಜಯ್ ಈಗ ಈಗ ಪ್ಯಾನ್ ಇಂಡಿಯಾ ಲೀಡರ್! ಹುಟ್ಟುಹಬ್ಬದ ದಿನ ಸಿಕ್ತು ಸಾಕ್ಷಿ!
24:49Karnataka Congress: ಹರಿಪ್ರಸಾದ್‌ಗೆ ಕೆಪಿಸಿಸಿ ಗದ್ದುಗೆ: ಡಿಕೆ-ಬಿಕೆ ಜೋಡಿಯಿಂದ ಹೊಸ ಮ್ಯಾಜಿಕ್ ಸಾಧ್ಯನಾ?
03:42'ದಳಪತಿ' ಕುರ್ಚಿಗೆ ಕಂಟಕ? ಅಣ್ಣಾ ಮಲೈ-ರಜನಿಕಾಂತ್-ಅಜಿತ್ 'ತ್ರಿಮೂರ್ತಿ'ಗಳ ಆಟ ಶುರುವಾಗ್ತಿದ್ಯಾ?
19:09ಕನಕಾಧಿಪತಿ ಚದುರಂಗ.. BJP ಪಡೆ ಕೋಲಾಹಲ: ಹಸ್ತಕೋಟೆಗೇ ಗೊತ್ತಿರಲಿಲ್ಲ.. ಡಿಕೆ ಹೂಡಿದ ಚಕ್ರವ್ಯೂಹ!
18:09362 ನಂಬರ್‌ಗಾಗಿ ಬಿಜೆಪಿ ಆಟ, ಕಂಪನಕ್ಕೆ ಬಂಗಾಳದಿಂದ ಯುಪಿ ವರೆಗೂ ಉರುಳುತ್ತಿದೆ ವಿಕೆಟ್
20:37ಆಪರೇಷನ್ ಗೃಹಲಕ್ಷ್ಮೀ: ಸತ್ತವರ ಖಾತೆಗೆ ಹಣ! 4 ಲಕ್ಷ ಅನರ್ಹರ ಮೇಲೆ ಸರ್ಕಾರದ ಬಿಗ್ ಆ್ಯಕ್ಷನ್
Read more