Apr 25, 2024, 12:24 PM IST
ಲೋಕಸಭಾ ಚುನಾವಣೆ ತೀವ್ರ ರಂಗೇರುತ್ತಿದೆ. ಅದರಲ್ಲೂ ಹಾಸನದಲ್ಲಿ(Hassan) ಕಾಂಗ್ರೆಸ್(Congress) ಹಾಗೂ ಜೆಡಿಎಸ್(JDS)ನಡುವೆ ನೇರ ಹಣಾಹಣಿ ಏರ್ಪಟ್ಟಿದ್ದು, ಶತಾಯ ಗತಾಯ ಗೆಲ್ಲಲೇ ಬೇಕು ಎಂದು ಹೆಚ್ ಡಿ ದೇವೇಗೌಡರು ಎಲ್ಲಾ ರೀತಿಯ ಪ್ರಯತ್ನ ಮಾಡುತ್ತಿದ್ದಾರೆ. ಈ ನಡುವೆ ಜೆಡಿಎಸ್ ಭದ್ರಕೋಟೆಗೆ ಕಾಂಗ್ರೆಸ್ ನುಗ್ಗಲು ಸಜ್ಜಾಗಿದೆ. ಈ ಮೂಲಕ ಜೆಡಿಎಸ್‌ಗೆ ಕಾಂಗ್ರೆಸ್ ಭಾರೀ ಪೈಪೋಟಿ ನೀಡುತ್ತಿದೆ. ಇನ್ನು ಮೈತ್ರಿ ಅಭ್ಯರ್ಥಿಯಾಗಿ ಪ್ರಜ್ವಲ್ ರೇವಣ್ಣ(Prajwal Revanna) ಕಣಕ್ಕಿಳಿದಿದ್ದು, ಕಾಂಗ್ರೆಸ್‌ನಿಂದ ಶ್ರೇಯಸ್ ಪಟೇಲ್(Shreyas M. Patel) ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ. ಆದರೆ, ಹಾಸನ ಮತದಾರ ಯಾರ ಕೈ ಹಿಡಿತಾರೆ ಅನ್ನೋದನ್ನು ಕಾದು ನೋಡಬೇಕಿದೆ.
ಇದನ್ನೂ ವೀಕ್ಷಿಸಿ: ಉಡುಪಿ-ಚಿಕ್ಕಮಗಳೂರಿನಲ್ಲಿ ಯಾರಿಗೆ ಒಲಿಯುತ್ತೆ ಗೆಲುವಿನ ಹಾರ? ಸಜ್ಜನ ರಾಜಕಾರಣಿಗಳ ಹೋರಾಟಕ್ಕೆ ಸಾಕ್ಷಿ ಈ ಕ್ಷೇತ್ರ!