Mar 23, 2024, 3:29 PM IST
ತುಮಕೂರು: ಕಾಂಗ್ರೆಸ್‌ಗೆ ಹೆಚ್ಚು ಸ್ಥಾನ ಬರದಿದ್ರೆ ಸಿಎಂ ಸ್ಥಾನಕ್ಕೆ ರಾಜೀನಾಮೆ ಕೊಡಬೇಕಾಗುತ್ತದೆ ಎಂದು ಪ್ರಚಾರ ಸಭೆಯಲ್ಲಿ ಗುಬ್ಬಿ ಶಾಸಕ ಎಸ್.ಆರ್ ಶ್ರೀನಿವಾಸ್(MLA S.R. Srinivas) ಸ್ಫೋಟಕ ಹೇಳಿಕೆ ನೀಡಿದ್ದಾರೆ. ಮುದ್ದಹನುಮೇಗೌಡ ಪರ ಪ್ರಚಾರ ಮಾಡುವಾಗ ಸಭೆಯಲ್ಲಿ ಶ್ರೀನಿವಾಸ್ ಈ ಹೇಳಿಕೆ ನೀಡಿದ್ದಾರೆ. ಲೋಕಸಭೆಯಲ್ಲಿ(Loksabha) ಕಾಂಗ್ರೆಸ್(Congress) ಹೆಚ್ಚಿನ ಸೀಟ್ ಗೆಲ್ಲಲಿಲ್ಲ ಅಂದ್ರೆ. ನೈತಿಕ ಹೊಣೆ ಹೊತ್ತು ಸಿದ್ದರಾಮಯ್ಯ (Siddaramaiah) ರಾಜೀನಾಮೆ ಕೊಡಬೇಕಾಗುತ್ತೆ. ಬಡವರ ಪರ ಕೆಲಸ ಮಾಡುವ ಸಿದ್ದರಾಮಯ್ಯರನ್ನು ಉಳಿಸಬೇಕು. ಎಲ್ಲರೂ ಸಿದ್ದರಾಮಯ್ಯರನ್ನು ಉಳಿಸಿಕೊಳ್ಳುವ ಪ್ರಯತ್ನ ಮಾಡಬೇಕು ಎಂದು ಪ್ರಚಾರ ಸಭೆಯಲ್ಲಿ ಗುಬ್ಬಿ ಶಾಸಕ ಶ್ರೀನಿವಾಸ್ ಸ್ಫೋಟಕ ಹೇಳಿಕೆ ನೀಡಿದ್ದಾರೆ.
ಇದನ್ನೂ ವೀಕ್ಷಿಸಿ: Thalapathy Vijay: ದಳಪತಿ ವಿಜಯ್ ಕೊನೆ ಸಿನಿಮಾ ಸಂಭಾವನೆ ಎಷ್ಟು ಗೊತ್ತಾ ? ರಜನಿಯನ್ನೇ ಹಿಂದಿಕ್ಕಿದ ದಳಪತಿ!