Jun 15, 2023, 10:21 AM IST
ಮುಖ್ಯಮಂತ್ರಿ ಸಿದ್ದರಾಮಯ್ಯ ಕಾಂಗ್ರೆಸ್‌ನ ಐದು ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದಿದ್ದಾರೆ.ನಾಳೆಯಿಂದ ಗೃಹಲಕ್ಷ್ಮೀ ಯೋಜನೆಯ ನೋಂದಣಿ ಆರಂಭವಾಗಲಿದೆ. ಬೆಂಗಳೂರು ಒನ್, ಗ್ರಾಮ್ ಒನ್‌ನಲ್ಲಿ ನೋಂದಣಿಗೆ ಅವಕಾಶ ಇರಲಿದೆ. ಸೇವಾಸಿಂಧು ಪೋರ್ಟಲ್‌ನಲ್ಲಿಯೂ ನೋಂದಣಿಗೆ ಅವಕಾಶವಿದೆ. ಇದಕ್ಕೆ ಬ್ಯಾಂಕ್, ಆಧಾರ್,ಪತಿ ಅಥವಾ ಮಗ ತೆರಿಗೆದಾರರು ಅಲ್ಲ ಎಂದು ತೋರಿಸುವಒಂದು ಪ್ರತಿಯನ್ನು ಲಗತ್ತಿಸಬೇಕಾಗಿದೆ. ಗೃಹಲಕ್ಷ್ಮಿ ಯೋಜನೆಯ ಮೂಲಕ ಮುಂದಿನ ಐದು ವರ್ಷಗಳ ಕಾಲ ಮನೆ ಒಡತಿಯ ಬ್ಯಾಂಕ್ ಖಾತೆಗೆ ಪ್ರತಿ ತಿಂಗಳು 2,000 ರೂ. ಜಮೆ ಮಾಡಲಾಗುತ್ತದೆ.ಮುಂದಿನ ಆಗಸ್ಟ್ 15ರಿಂದ ಪ್ರತಿ ತಿಂಗಳು ರಾಜ್ಯದಲ್ಲಿರುವ ಬಿಪಿಎಲ್ ಹಾಗೂ ಎಪಿಎಲ್ ಕುಟುಂಬಗಳ ಮನೆ ಒಡತಿಯ ಖಾತೆಗೆ 2000 ರೂಪಾಯಿ ಹಣ ವರ್ಗಾವಣೆಯಾಗಲಿದೆ.
ಇದನ್ನೂ ವೀಕ್ಷಿಸಿ: ಕರಾವಳಿಯಂತೆ ಬಳ್ಳಾರಿಯಲ್ಲೂ ಪಿಎಫ್‌ಐ ಆ್ಯಕ್ಟಿವ್: ಶಸ್ತ್ರಾಸ್ತ್ರ ತರಬೇತುದಾರನನ್ನು ಬಂಧಿಸಿದ ಎನ್‌ಐಎ