Oct 30, 2023, 12:43 PM IST
ನಿಗಮ ಮಂಡಳಿ ನೇಮಕಕ್ಕೆ ಹೈಕಮಾಂಡ್ ಗ್ರೀನ್ ಸಿಗ್ನಲ್ ಕೊಟ್ಟಿದೆ. ಆದ್ರೆ ಕೆಲವು ಷರತ್ತುಗಳನ್ನು ಹಾಕಿದೆ ಎಂದು ತಿಳಿದುಬಂದಿದೆ. ಹಾಗಾಗಿ ನಿಗಮ ಮಂಡಳಿ ನೇಮಕ ಪ್ರಕ್ರಿಯೆಗೆ ಸಿಎಂ, ಡಿಸಿಎಂ ಚಾಲನೆ ನೀಡಿದ್ದಾರೆ. ಸಭೆ ಮೇಲೆ ಸಭೆ ಮಾಡುತ್ತಿರುವ ಸಿಎಂ ಸಿದ್ದರಾಮಯ್ಯ(Siddaramaiah) ಹಾಗೂ ಡಿಸಿಎಂ ಡಿಕೆ ಶಿವಕುಮಾರ್(DK shivakumar). ರಹಸ್ಯವಾಗಿ ಇಬ್ಬರೇ ಕುಳಿತು ಪಟ್ಟಿಗೆ ಫೈನಲ್ ಟಚ್ ನೀಡುತ್ತಿದ್ದಾರೆ. ಕಂಡೀಷನ್ ಬಗ್ಗೆ ಸಿಎಂ ಹಾಗೂ ಡಿಸಿಎಂಗೆ ಹೈಕಮಾಂಡ್ ತಿಳಿಸಿದೆ. ಹೈಕಮಾಂಡ್ ಕಂಡಿಷನ್‌ನಿಂದ ನಿಗಮ ಮಂಡಳಿ ಆಕಾಂಕ್ಷಿಗಳು(Appointment Boards & Corporations) ಕೊಂಚ ಖುಷಿಯಾಗಿದ್ದು, ಒಟ್ಟು 50 ರಿಂದ 60 ಮಂದಿ ನಿಗಮ ಮಂಡಳಿಗೆ ನೇಮಿಸುವ ಸಾಧ್ಯತೆ ಇದೆ. 50-50 ಸೂತ್ರ ಅನುಸರಿಸಲು ಹೈಕಮಾಂಡ್ ಸೂಚಿಸಿದೆ. ಶಾಸಕರು ಹಾಗೂ ಕಾರ್ಯಕರ್ತರಿಗೆ ಸಮಾನ ಅವಕಾಶ ನೀಡಲಾಗುವುದು. ಇಬ್ಬರಿಗೂ 50% ಸಮನಾಗಿ ಅವಕಾಶ ಇರುವಂತೆ ಪಟ್ಟಿ ಮಾಡಲು ಸೂಚನೆ ನೀಡಲಾಗಿದೆ. ಈಗ ನಿಗಮ ಮಂಡಳಿಗೆ ನೇಮಕ ಆಗುವ ಶಾಸಕರು ಮುಂದೆ ಸಚಿವ ಸ್ಥಾನ ಕೇಳುವಂತಿಲ್ಲ. ಅಂತವರನ್ನ ಮುಂದೆ ಸಚಿವ ಸಂಪುಟ ಪುನಾರಚನೆ ಆದಾಗ ಪರಿಗಣಿಸುವುದಿಲ್ಲ. ನಿಗಮ ಮಂಡಳಿಗೆ ಆಯ್ಕೆ ಆಗುವ ಕಾರ್ಯಕರ್ತರನ್ನ MLCಗೆ ಪರಿಗಣನೆ ಇಲ್ಲ. ಮುಂದೆ ಕನಿಷ್ಟ 15 ರಿಂದ 20 ಪರಿಷತ್ ಸ್ಥಾನಗಳು ಖಾಲಿ ಆಗಲಿವೆ. ಈಗ ನಿಗಮ ಮಂಡಳಿಗೆ ನೇಮಕವಾಗುವವರಿಗೆ MLC ಆಗುವ ಅವಕಾಶ ಇರುವುದಿಲ್ಲ.
ಇದನ್ನೂ ವೀಕ್ಷಿಸಿ: ಇಸ್ರೇಲ್-ಹಮಾಸ್ ಕದನ : ಯುದ್ಧ 2ನೇ ಹಂತ ತಲುಪಿದೆ ಎಂದ ಇಸ್ರೇಲ್ ಪ್ರಧಾನಿ ನೆತನ್ಯಾಹು