'ಜಯ ವಾಹಿನಿ ರೋಡ್‌ ಶೋ'ಗೆ ಜನರ ಅಭೂತಪೂರ್ವ ಬೆಂಬಲ ಸಿಕ್ಕಿದೆ: ಸಿಎಂ

Apr 24, 2023, 12:55 PM IST

ದಾವಣಗೆರೆ: ರಾಜ್ಯದಲ್ಲಿ ವಿಧಾನಸಭಾ ಚುನಾವಣೆ ಇರುವ ಹಿನ್ನೆಲೆ ಸಿಎಂ ಬಸವರಾಜ ಬೊಮ್ಮಾಯಿ ಇಂದು ಜನ ವಾಹಿನಿ ಹೆಸರಿನಲ್ಲಿ ಎರಡನೇ ದಿನದ ರೋಡ್‌ ಶೋ ನಡೆಸುತ್ತಿದ್ದಾರೆ. ಹರಿಹರದಿಂದ ಸಿಎಂ ರೋಡ್‌ ಶೋ ಆರಂಭವಾಗಿದೆ. ಸಿಎಂ ರೋಡ್‌ ಶೋ ದಾವಣಗೆರೆ, ರಾಣೇಬೆನ್ನೂರು, ಬಂಕಾಪುರ, ಸವಣೂರು, ಶಿಗ್ಗಾವಿ, ಕುಂದಗೋಳದಲ್ಲಿ ನಡೆಯಲಿದೆ. ಈ ಬಗ್ಗೆ ಮಾತನಾಡಿದ ಸಿಎಂ ಬೊಮ್ಮಾಯಿ, ಇವತ್ತು ಎರಡನೇ ದಿನದ ರೋಡ್‌ ಶೋ ನಡೆಯುತ್ತಿದೆ.  ಜನರಿಂದ ಉತ್ತಮ ಬೆಂಬಲ ದೊರೆತಿದೆ. ನಾಳೆ ನಾಡಿದ್ದು ಬೆಳಗಾವಿಗೆ, ನಂತರ ಕಲ್ಯಾಣ ಕರ್ನಾಟಕದಲ್ಲಿ ರೋಡ್‌ ಶೋ ನಡೆಸಲು ಯೋಜನೆ ರೂಪಿಸಲಾಗಿದೆ. ಈ ಬಾರಿ ಜನ ಬಹಳಷ್ಟು ವಿಚಾರ ಮಾಡಿ ಒಂದು ತೀರ್ಮಾನಕ್ಕೆ ಬರುತ್ತಾರೆ ಎಂದು ನನಗೆ ಅನಿಸುತ್ತದೆ ಎಂದು ಅವರು ಹೇಳಿದ್ದಾರೆ.

ಇದನ್ನೂ ವೀಕ್ಷಿಸಿ: ಚುನಾವಣಾ ಅಖಾಡಕ್ಕೆ 'ನಮೋ' ಎಂಟ್ರಿ: ಒಂದೇ ದಿನ ಮೂರು ಕಡೆ ಸಮಾವೇಶ