Rajya Sabha: 3 ರಾಜ್ಯಸಭಾ ಸ್ಥಾನಗಳನ್ನ 3 ಪಾಲು ಮಾಡಿದ್ದ ಕೆಪಿಸಿಸಿ: ಟಿಕೆಟ್ ಕೊಡಿಸುವಲ್ಲಿ ಮೇಲುಗೈ ಸಾಧಿಸಿದ್ರಾ ಡಿಕೆಶಿ ?

Feb 15, 2024, 12:46 PM IST

ಕಾಂಗ್ರೆಸ್ ಹೈಕಮಾಂಡ್ ಕರ್ನಾಟಕದಿಂದ ರಾಜ್ಯಸಭೆಗೆ(Rajyasabha) ಅಭ್ಯರ್ಥಿಗಳನ್ನ ಫೈನಲ್ ಮಾಡಿದೆ. ಚಂದ್ರಶೇಖರ್(GC Chandrashekhar), ಹುಸೇನ್‌ಗೆ ಮತ್ತೆ ಚಾನ್ಸ್ ಸಿಕ್ಕಿದ್ದು, ದೆಹಲಿ ಕಾಂಗ್ರೆಸ್(Congress) ವಕ್ತಾರ  ಅಜಯ್ ಮಾಕೇನ್‌ಗೂ ಟಿಕೆಟ್ ಸಿಕ್ಕಿದೆ. ಈ ಮೂಲಕ ಸಿಎಂ ಸಿದ್ದರಾಮಯ್ಯಗಿಂತ(Siddaramaiah) ಡಿಕೆ ಶಿವಕುಮಾರ್(Dk shivakumar) ಕೈ ಮೇಲಾಗಿದೆ. ಮೂರು ಸ್ಥಾನಗಳ ಪೈಕಿ ಒಂದು ಅಲ್ಪಸಂಖ್ಯಾತರ ಕೋಟಾಕ್ಕೆ ನೀಡಲಾಗಿದೆ. ಒಂದು ಕೆಪಿಸಿಸಿ ಕೋಟಾ, ಒಂದು ಹೈಕಮಾಂಡ್ ಕೋಟಾವಾಗಿದೆ. ಅಲ್ಪಸಂಖ್ಯಾತ ಕೋಟಾದಡಿ ನಾಸೀರ್ ಹುಸೇನ್‌ಗೆ ಟಿಕೆಟ್ ನೀಡಲಾಗಿದೆ. ಹೈಕಮಾಂಡ್ ಕೋಟಾದಡಿ ಅಜಯ್ ಮಾಕೇನ್‌ಗೆ ಟಿಕೆಟ್ ಸಿಕ್ಕಿದ್ದು, ಕೆಪಿಸಿಸಿ ಕೋಟಾದಡಿ ಜಿ.ಸಿ ಚಂದ್ರಶೇಖರ್ ಟಿಕೆಟ್ ಗಿಟ್ಟಿಸಿಕೊಂಡಿದ್ದಾರೆ. ಬಣಗಳ ಬಡಿದಾಟದಲ್ಲಿ ಡಿ.ಕೆ ಶಿವಕುಮಾರ್ ಗೆಲುವು ಸಾಧಿಸಿದ್ದಾರೆ. ಒಂದು ಟಿಕೆಟ್ ಒಕ್ಕಲಿಗರಿಗೆ ಕೊಡಬೇಕು ಎಂದು ಡಿಸಿಎಂ ಪಟ್ಟು ಹಿಡಿದಿದ್ದರು. ಕೊನೆಗೂ ಒಕ್ಕಲಿಗರಿಗೆ ಟಿಕೆಟ್ ಕೊಡಿಸುವಲ್ಲಿ ಡಿಕೆಶಿ ಯಶಸ್ವಿಯಾದಂತೆ ಕಾಣುತ್ತಿದೆ. ಆದ್ರೆ ಸಿಎಂ ಸಿದ್ದರಾಮಯ್ಯ ಗೋವಿಂದರಾಜುಗೆ ಟಿಕೆಟ್ ಕೊಡಿಸಲು ಪ್ರಯತ್ನಿಸಿದ್ದರು.

ಇದನ್ನೂ ವೀಕ್ಷಿಸಿ:  Today Horoscope: ಇಂದು ಕುಮಾರ ಷಷ್ಠಿ ಇದ್ದು..ಸುಬ್ರಹ್ಮಣ್ಯ ಸ್ವಾಮಿಗೆ ಈ ರೀತಿಯಾಗಿ ಪೂಜೆ ಮಾಡಿ..