Nov 7, 2022, 6:33 PM IST
ಬೆಳಗಾವಿ (ನ.7): ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಈ ಬಾರಿ ಬಾದಾಮಿ ವಿಧಾನಸಭಾ ಕ್ಷೇತ್ರವನ್ನು ತೊರೆಯುವುದು ಬಹುತೇಕ ನಿಶ್ಚಿತವಾಗಿದೆ. ಬಾದಾಮಿ ಕ್ಷೇತ್ರವನ್ನು ತೊರೆಯುವ ಸುಳಿವನ್ನು ಅವರು ನೀಡಿದ್ದಾರೆ. ಬಾದಾಮಿಯಲ್ಲೇ ಸ್ಪರ್ಧಿಸಿ ಎಂದು ಹೇಳ್ತಿದ್ದಾರೆ. ಆದರೆ ನನಗೆ ಮನಸ್ಸು ಒಪ್ಪುತ್ತಿಲ್ಲ ಎಂದು ಸಿದ್ಧರಾಮಯ್ಯ ಹೇಳಿದ್ದಾರೆ.
ಬಾದಾಮಿಯಲ್ಲೇ ಸ್ಪರ್ಧೆಗೆ ಒತ್ತಡ ಹೆಚ್ಚಾಗ್ತಾ ಇದೆ. ವಾರಕೊಮ್ಮೆ ಬಾದಾಮಿಗೆ ಹೋಗೋಕೆ ಆಗುತ್ತಿಲ್ಲ. ಕಾರ್ಯಕರ್ತರು, ಜನರ ಭೇಟಿ ಸಾಧ್ಯವಾಗ್ತಿಲ್ಲ. ಜನರ ಕಷ್ಟ ಸುಖಕ್ಕೆ ಸ್ಪಂದಿಸೋಕೆ ಆಗ್ತಾ ಇಲ್ಲ. ಬಾದಾಮಿಗೆ ಭೇಟಿ ಕೊಟ್ಟು ಆಗಾಗಲೇ ಎರಡು ತಿಂಗಳಾಗಿದೆ. ಕೋಲಾರದಲ್ಲೂ ಸ್ಪರ್ಧಿಸಿ ಅಂತಾ ಕೇಳುತ್ತಿದ್ದಾರೆ. ವರುಣಾದಿಂದ ನಿಲ್ಲುವಂತೆ ನಮ್ಮ ಹುಡುಗ ಕೇಳುತ್ತಿದ್ದಾನೆ ಎಂದು ವಿಪಕ್ಷ ನಾಯಕ ಸಿದ್ಧರಾಮಯ್ಯ ಹೇಳಿದ್ದಾರೆ.
News Hour: ಸಿದ್ದು ಬಣದ ವಿರುದ್ಧ ಮತ್ತೆ ಸಿಡಿದ ಕೆಪಿಸಿಸಿ ಅಧ್ಯಕ್ಷ ಡಿಕೆಶಿ!
ಚಾಮರಾಜಪೇಟೆಯಿಂದ ಸ್ಪರ್ಧೆ ಮಾಡಿ ಎಂದು ಜಮೀರ್ ಹೇಳುತ್ತಿದ್ದಾರೆ ಎಂದು ಸಿದ್ಧರಾಮಯ್ಯ ತಿಳಿಸಿದ್ದು, ಅದರೊಂದಿಗೆ ಬಾದಾಮಿಯನ್ನು ತೊರೆಯುವ ಸೂಚನೆಯನ್ನೂ ನೀಡಿದ್ದಾರೆ. ಬಾದಾಮಿಯಲ್ಲಿ ಜನರು ಹಾಗೂ ಕಾರ್ಯಕರ್ತರನ್ನು ಭೇಟಿ ಮಾಡಲು ಸಾಧ್ಯವಾಗುತ್ತಿಲ್ಲ ಎಂದು ಅವರು ಹೇಳಿದ್ದಾರೆ.