ಬಿಜೆಪಿ-ಕಾಂಗ್ರೆಸ್ ಮಧ್ಯೆ ಗದ್ದುಗೆ ಗುದ್ದಾಟ: ಸಿಎಂ ಅಭ್ಯರ್ಥಿ ಹೆಸರು ಘೋಷಣೆಯೇ ಕೇಸರಿ ಪಡೆಗೆ ದೊಡ್ಡ ಸವಾಲ್‌

Jul 31, 2023, 11:27 AM IST

ರಾಜಸ್ಥಾನ: ಇಲ್ಲಿ ಬಿಜೆಪಿ-ಕಾಂಗ್ರೆಸ್ ಮಧ್ಯೆ ಗದ್ದುಗೆ ಗುದ್ದಾಟ ಶುರುವಾಗಿದೆ. ವರ್ಷಾಂತ್ಯಕ್ಕೆ ನಡೆಯುವ ಚುನಾವಣೆಗೆ ಈಗಲೇ ಅಖಾಡ ರಂಗೇರಿದೆ.ಕಾಂಗ್ರೆಸ್ ಬಂಡಾಯದ ಮಧ್ಯೆ ಬಿಜೆಪಿ(BJP) ಹೈಕಮಾಂಡ್‌ಗೆ ಗೊಂದಲ ಶುರುವಾಗಿದೆ. ಕರ್ನಾಟಕದಲ್ಲಿನ ಬೆಳವಣಿಗೆಯಿಂದ ಬಿಜೆಪಿ ಹೈಕಮಾಂಡ್ ಕಂಗಾಲಾಗಿದ್ದು, ಈ ಹಿನ್ನೆಲೆ ರಾಜಸ್ಥಾನದಲ್ಲೂ(Rajasthan) ಪ್ರಬಾವಿ ವಸುಂಧರಾ ರಾಜೆ(Vasundhara Raje) ವಿಚಾರದಲ್ಲಿ ಗೊಂದಲ ಉಂಟಾಗಿದೆ. ಇಲ್ಲಿ ಬಿಜೆಪಿಗೆ ಸಿಎಂ ಅಭ್ಯರ್ಥಿ ಹೆಸರು ಘೋಷಣೆಯೇ ದೊಡ್ಡ ಸವಾಲಾಗಿದೆ. ಇನ್ನೂ ಎಬಿಪಿಸಿ ವೋಟರ್ ಸಮೀಕ್ಷೆಯಲ್ಲಿ ವಸುಂಧರಾ ರಾಜೆ ಪರ ಜನಾಭಿಪ್ರಾಯ ಇದೆ. ಸಿಎಂ ಅಭ್ಯರ್ಥಿ ಯಾರಾಗಬೆಕು ಅನ್ನೋದಕ್ಕೆ ವಸುಂಧರಾ ರಾಜೆ ಪರ ಒಲವೂ ಸಹ ಇದೆ. ವಸುಂಧರಾ ರಾಜೆ ಹೆಸರು ಘೋಷಣೆಗೆ ಪಕ್ಷದಲ್ಲೇ ಹಲವರ ಅಪಸ್ವರವಿದ್ದು, ಅವರ ಹಾಗೂ ಕೇಂದ್ರ ಸಚಿವ ಗಜೇಂದ್ರ ಸಿಂಗ್ ಶೇಖಾವತ್(Gajendra Singh Shekhawat) ನಡುವೆ ಫೈಟ್ ಇದೆ. ವಸುಂಧರಾ ಪರ ಹೈಕಮಾಂಡ್ ಒಲವಿದ್ದರೂ, ಇದಕ್ಕೆ ಹಲವರ ವಿರೋಧದ ಆತಂಕ ಎದುರಾಗಿದೆ.

ಇದನ್ನೂ ವೀಕ್ಷಿಸಿ:  ಮೋದಿ ಭವಿಷ್ಯ ನಿಜವಾಗುತ್ತಾ..?: ಇಂಡಿಯಾ ಟುಡೆ-ಸಿಎನ್ಎಕ್ಸ್ ಸಮೀಕ್ಷೆ ಏನ್‌ ಹೇಳುತ್ತೆ?