ಮುಂದುವರಿದ ವಿಜಯೇಂದ್ರ ಬಣದ ತೀರ್ಥಯಾತ್ರೆ: ಬಿಜೆಪಿಯೊಳಗೆ ಶುರುವಾಗಿದೆ ಸಂಹಾರ, ಸಮರ!

ಮುಂದುವರಿದ ವಿಜಯೇಂದ್ರ ಬಣದ ತೀರ್ಥಯಾತ್ರೆ: ಬಿಜೆಪಿಯೊಳಗೆ ಶುರುವಾಗಿದೆ ಸಂಹಾರ, ಸಮರ!

Published : Dec 01, 2024, 10:17 AM IST

ಯತ್ನಾಳ್​ ಬಣದ ವಿರುದ್ಧ ಸಿಡಿದೆದ್ದಿರುವ ವಿಜಯೇಂದ್ರ, ಹೈಕಮಾಂಡ್​ಗೆ ದೂರು ಕೊಡಲು ದೆಹಲಿಗೆ ಹೋಗಿದ್ದರು.. ಬಿಜೆಪಿ ಕೇಂದ್ರ ನಾಯಕರು, ಮಹಾರಾಷ್ಟ್ರ ಸರ್ಕಾರ ರಚನೆಯಲ್ಲಿ ಬ್ಯುಸಿಯಾಗಿದ್ದು ಭೇಟಿಯಾಗದೇ ಬರಿಗೈಲಿ ವಾಪಸ್ ಆಗಿದ್ದಾರೆ. 

ಬೆಂಗಳೂರು(ಡಿ.01):  ಕಾಂಗ್ರೆಸ್​ನಲ್ಲಿ ಒಗ್ಗಟ್ಟಿನ ಶಕ್ತಿ ಪ್ರದರ್ಶನಕ್ಕೆ ಹಾಸನದಲ್ಲಿ ಸಮಾವೇಶಕ್ಕೆ ವೇದಿಕೆ ಸಿದ್ಧವಾಗ್ತಿದೆ. ಈಗ ಸರ್ಕಾರದ ವಿರುದ್ಧ ಒಗ್ಗಟ್ಟಾಗಿ ಹೋರಾಟ ಮಾಡಬೇಕಿದ್ದ ಬಿಜೆಪಿ ಮಾತ್ರ ಮನೆಯೊಂದು ಮೂರು ಬಾಗಿಲಾಗಿದೆ. ಈ ಬಣ ಬಡಿದಾಟದಿಂದಲೇ 3 ಉಪ ಚುನಾವಣೆಯಲ್ಲಿ ಹೀನಾಯವಾಗಿ ಸೋತರೂ ಬುದ್ಧಿ ಕಲಿಯದ ರಾಜ್ಯ ಬಿಜೆಪಿ, ಬಣ ಪ್ರತಿಷ್ಠೆ ಮುಂದುವರಿದಿದ್ದು, ಬಿಜೆಪಿ ನಾಯಕರ ಸಂಹಾರ, ಸಮರ ಮಾತಿನ ವಾಗ್ದಾಣಗಳು ಕಿಚ್ಚೆಬ್ಬಿಸಿದೆ.

ಯತ್ನಾಳ್ ಬಣದ ವಿರುದ್ಧ ಸಮರ ಸಾರಿರುವ ವಿಜಯೇಂದ್ರ ಬಣ ವಕ್ಫ್​ ಯಾತ್ರೆ ವಿರುದ್ಧ ತೀರ್ಥಯಾತ್ರೆ ಕೈಗೊಂಡಿದೆ. ನಿನ್ನೆ ರೇಣುಕಾಚಾರ್ಯ, ಬಿಸಿ ಪಾಟೀಲ್​ ನೇತೃತ್ವದಲ್ಲಿ 30ಕ್ಕೂ ಹೆಚ್ಚು ಮಾಜಿ ಶಾಸಕರು ಕೋಲಾರದ ಕುರುಡುಮಲೆ ವಿನಾಯಕನಿಗೆ ಪೂಜೆ ಸಲ್ಲಿಸಿ ಕಹಳೆ ಮೊಳಗಿಸಿದ್ರು. ಇಂದು ಮೈಸೂರಿನ ಚಾಮುಂಡೇಶ್ವರಿಗೆ ಪೂಜೆ ಸಲ್ಲಿಸಿದ್ರು.. ಬಳಿಕ ಮಾತಾಡಿದ ಬಿಸಿ ಪಾಟೀಲ್​, ರೇಣುಕಾಚಾರ್ಯ, ದುಷ್ಟಶಕ್ತಿಗಳನ್ನ ಚಾಮುಂಡಿ ತಾಯಿಯೇ ಸಂಹಾರ ಮಾಡ್ತಾಳೆ ಅಂದರು.

ದೇವೇಗೌಡ ತವರಿನಲ್ಲಿ ಸಿಎಂ ಶಕ್ತಿ ಪ್ರದರ್ಶನಕ್ಕೆ ವೇದಿಕೆ; ಹಾಸನದಲ್ಲಿ ನಡೆಯಲಿದ್ಯಾ ಗರ್ವಭಂಗ?

ಮೈಸೂರಿನಲ್ಲಿ ಚಾಮುಂಡೇಶ್ವರಿಗೆ ಪೂಜೆ ಸಲ್ಲಿಸಿ ವಿಜಯೇಂದ್ರ ಬಣದ ಮಾಜಿ ಶಾಸಕರು ಸಭೆ ನಡೆಸಿ ಸುದ್ದಿಗೋಷ್ಠಿ ನಡೆಸಿದ್ರು. ಈ ಸುದ್ದಿಗೋಷ್ಠಿಯಲ್ಲಿ ದೊಡ್ಡ ಹೈಡ್ರಾಮಾವೇ ನಡೆಯ್ತು. ಈ ವೇಳೆ ಸಭೆಗೆ ಆಗಮಿಸಿದ ಬಿಜೆಪಿ ಕಾರ್ಯಕರ್ತರು, ಯತ್ನಾಳ್​ರನ್ನ ಉಚ್ಛಾಟನೆ ಮಾಡಿ ಎಂದು ಕೂಗಾಟ ನಡೆಸಿದ್ರು. ನೀವು ಮೈಸೂರಲ್ಲಿ ಸುದ್ಧಿಗೋಷ್ಠಿ ಮಾಡ್ತೀರಾ.. ಯತ್ನಾಳ್​ ವಿಜಯಪುರದಲ್ಲಿ ಸುದ್ಧಿಗೋಷ್ಠಿ ಮಾಡ್ತಾರೆ.. ಇದರಿಂದ ಯಾರಿಗೂ ಪ್ರಯೋಜನ ಇಲ್ಲ. ಹೀಗಾಗಿ ಉಚ್ಛಾಟನೆ ಮಾಡಿ ಎಂದು ಆಕ್ರೋಶ ಹೊರ ಹಾಕಿದ್ರು.. ಈ ವೇಳೆ ರೇಣುಕಾಚಾರ್ಯ.. ನಾಗೇಂದ್ರ ಕಾರ್ಯಕರ್ತರನ್ನ ಸಮಾಧಾನಪಡಿಸಿದ್ರು.

ಮೈಸೂರಿನ ಸುದ್ದಿಗೋಷ್ಠಿಯಲ್ಲಿ ಸಿಡಿದೆದ್ದ ವಿಜಯೇಂದ್ರ ಬಣದ ಮಾಜಿ ಶಾಸಕರು, ಯತ್ನಾಳ್ ಯಡಿಯೂರಪ್ಪ ಧೂಳಿಗೂ ಸಮವಲ್ಲ. ವಿಜಯಪುರ ಪ್ರಭಾವಿ ಸಚಿವರೊಂದಿಗೆ ಯತ್ನಾಳ್​ ಫಿಕ್ಸಿಂಗ್​ ಮಾಡಿಕೊಂಡಿದ್ದಾರೆ. ನಾವ್ಯಾರು ಜಗ್ಗಲ್ಲ.. ಬಗ್ಗಲ್ಲ.. ಇನ್ಮುಂದೆ ಮಾತಾಡಿದ್ರೆ ಹುಷಾರ್ ಎಂದು ಎಚ್ಚರಿಕೆ ನೀಡಿದ್ರು. 

ಇಂದಿನ ವಿಜಯೇಂದ್ರ ಬಣದ ಶಕ್ತಿ ಪ್ರದರ್ಶನಕ್ಕೆ ಮೈಸೂರು ಭಾಗದ ಮೂವರು ಮಾಜಿ ಶಾಸಕರು ಸಾಥ್​ ನೀಡಿದ್ರು. ಹರ್ಷವರ್ಧನ್, ನಿರಂಜನಕುಮಾರ್, ಎಲ್​ ನಾಗೇಂದ್ರ ಸುದ್ದಿಗೋಷ್ಠಿಯಲ್ಲಿ ಭಾಗವಹಿಸಿದ್ರು. ಮೈಸೂರು ಭಾಗದ ನಾಯಕರು ಯತ್ನಾಳ್​ರಿಗೆ ಬೆಂಬಲ ನೀಡಿದ್ದಾರೆ. ಅವರ ಮೇಲೂ ಕ್ರಮ ಆಗುತ್ತದೆ ಎಂದು ಪ್ರತಾಪ್ ಸಿಂಹಗೆ ಮಾಜಿ ಶಾಸಕ ನಾಗೇಂದ್ರ ಟಾಂಗ್ ಕೊಟ್ರು.

ಬರಿಗೈಲಿಯಿಂದ ದೆಹಲಿಯಿಂದ ವಾಪಸ್ಸಾದ ವಿಜಯೇಂದ್ರ

ಯತ್ನಾಳ್​ ಬಣದ ವಿರುದ್ಧ ಸಿಡಿದೆದ್ದಿರುವ ವಿಜಯೇಂದ್ರ, ಹೈಕಮಾಂಡ್​ಗೆ ದೂರು ಕೊಡಲು ದೆಹಲಿಗೆ ಹೋಗಿದ್ದರು.. ಬಿಜೆಪಿ ಕೇಂದ್ರ ನಾಯಕರು, ಮಹಾರಾಷ್ಟ್ರ ಸರ್ಕಾರ ರಚನೆಯಲ್ಲಿ ಬ್ಯುಸಿಯಾಗಿದ್ದು ಭೇಟಿಯಾಗದೇ ಬರಿಗೈಲಿ ವಾಪಸ್ ಆಗಿದ್ದಾರೆ. ಈ ನಡುವೆ ಯತ್ನಾಳ್​ಗೆ ಇದು ಒಳ್ಳೆಯದಲ್ಲ ಎಂದು ಮಾಜಿ ಸಚಿವ ಆರಗ ಜ್ಞಾನೇಂದ್ರ ಬುದ್ಧಿಮಾತು ಹೇಳಿದ್ದಾರೆ.

ನಾಳೆ ಬೆಳಗಾವಿಯಲ್ಲಿ ಯತ್ನಾಳ್​ ಬಣ ಶಕ್ತಿ ಪ್ರದರ್ಶನ!

ವಿಜಯೇಂದ್ರ ವಿರುದ್ಧ ಬಂಡೆದಿದ್ದರುವ ಯತ್ನಾಳ್ ಬಣ, ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಿ ವಕ್ಫ್​ ಮಾಹಿತಿ ಸಂಗ್ರಹ ಮಾಡಿದೆ. ಇಂದು ಬಾಗಲಕೋಟೆ ಜಿಲ್ಲೆಯ ತೇರದಾಳದಲ್ಲಿ ರೈತರ ಭೇಟಿಯಾಗಿ ಅಹವಾಲು ಸ್ವೀಕಾರ ಮಾಡಿದೆ. 
ರಾಜ್ಯ ರಾಜಕೀಯದ ಬಂಡಾಯದ ತವರು ಬೆಳಗಾವಿಯಲ್ಲಿ ನಾಳೆ ಯತ್ನಾಳ್ ಬಣ ಅದ್ಧೂರಿ ಸಮಾವೇಶ ನಡೆಸಲಿದೆ. ಈ ಸಮಾವೇಶದ ಹೊಣೆ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಹೊತ್ತಿಕೊಂಡಿದ್ದಾರೆ. ನಾಳೆ ಸಮಾವೇಶದ ಬಳಿಕ ಡಿಸೆಂಬರ್​ 3ಕ್ಕೆ ದೆಹಲಿಗೆ ಹೋಗುವ ಯತ್ನಾಳ್ ಬಣ, ಜೆಪಿಸಿ ಅಧ್ಯಕ್ಷರ ಭೇಟಿಯಾಗಿ ಮಾಹಿತಿ ನೀಡಲಿದೆ. ಇದೇ ವೇಳೆ ಬಿಜೆಪಿ ಕೇಂದ್ರ ನಾಯಕರ ಭೇಟಿಯಾಗುವ ಸಾಧ್ಯತೆ ಇದೆ. 

‘100 ಸಿ.ಡಿ ಬಂದರೂ ಹೆದರಲ್ಲ’ ಎಂದ ಜಾರಕಿಹೊಳಿ

ಗೋಕಾಕ್​ನ ಕಾರ್ಯಕ್ರಮವೊಂದರಲ್ಲಿ ಬಿಜೆಪಿ ವಿರುದ್ಧ ಅಸಮಾಧಾನ ಹೊರ ಹಾಕಿದ ರಮೇಶ್ ಜಾರಕಿಹೊಳಿ, ನಾನು ಬಿಜೆಪಿಗೆ ಅನಿವಾರ್ಯವಾಗಿ ಹೋಗಿದ್ದೇನೆ. ಬಿಜೆಪಿಯಲ್ಲೂ ಷಡ್ಯಂತ್ರ ಮಾಡಿದ್ರು, ನಾನು ‌ಹೆದರಲಿಲ್ಲ.. 100 ಸಿ.ಡಿ ಬಂದರೂ ನಾನು ಅಂಜಲ್ಲ.. ಈವರೆಗೆ ನಾವು ಮಾಡಿದ ಹೋರಾಟ ಫೇಲ್​ ಆಗಿಲ್ಲ ಎಂದು ಗುಡುಗಿದ್ದಾರೆ.

ಅಜ್ಜಿ ಅಬ್ಬರಿಸಿದ್ದ ಸಂಸತ್‌ಗೆ ಮೊಮ್ಮಗಳ ದೊಡ್ಡ ಹೆಜ್ಜೆ!, ಅದೇ ಚಹರೆ ಅದೇ ಕಿಚ್ಚು ಮತ್ತೆ ಬಂದ್ರಾ ಇಂದಿರಾ?

ಬಿಜೆಪಿಯಲ್ಲಿ ಹುಚ್ಚರ ಜಾತ್ರೆ ನಡೆದಿದೆ ಎಂದ ಖರ್ಗೆ!

ಸರ್ಕಾರದ ವಿರುದ್ಧ ಚಾಟಿ ಬೀಸಬೇಕಿದ್ದ ಬಿಜೆಪಿಗರೇ ಕಿತ್ತಾಟ ಮುಂದುವರಿಸಿದ್ದಾರೆ. ಹೀಗಾಗಿ ಬಿಜೆಪಿ ಬಂಡಾಯಕ್ಕೆ ವ್ಯಂಗ್ಯವಾಡಿದ ಸಚಿವ ಪ್ರಿಯಾಂಕ್ ಖರ್ಗೆ, ಬಿಜೆಪಿಯಲ್ಲಿ ವಿಜಯೇಂದ್ರ ಹಠಾವೋ ಹೋರಾಟ ನಡೆದಿದ್ದು, ಅದೊಂದು ಹುಚ್ಚರ ಜಾತ್ರೆ ಎಂದರು.

ಮುಂದಿನ ತಿಂಗಳು ಬೆಳಗಾವಿಯಲ್ಲಿ ಚಳಿಗಾಲ ಅಧಿವೇಶನ ಆರಂಭವಾಗಲಿದೆ. ಈ ಹೊತ್ತಿನಲ್ಲಿ ಬಿಜೆಪಿಯಲ್ಲಿ ಎದ್ದ ಬಂಡಾಯದ ಬೆಂಕಿಯೇ ಕಾಂಗ್ರೆಸ್ ಅಸ್ತ್ರವಾಗಿದೆ. ಬಂಡಾಯ ಆರಿಸಿ ಕಾಂಗ್ರೆಸ್​​ ವಿರುದ್ಧ ಧ್ವನಿ ಎತ್ತುತ್ತಾರೋ? ಅಥವಾ ಪಕ್ಷದೊಳಗೇ ಕಿತ್ತಾಡ್ತಾರೋ ಅನ್ನೋದನ್ನ ಕಾದುನೋಡಬೇಕು. 

18:13ಸಿದ್ದು ಸೇನೆಯಲ್ಲಿ ಬಿರುಕು: ಅಹಿಂದ ಅರಸೊತ್ತಿಗೆ, ಸಾಹುಕಾರ್​ಗೆ ಸಿಗುತ್ತಾ ಪ್ರಚಂಡ ಪವರ್?
19:47ಅರಸು ಆಳ್ವಿಕೆ ದಾಖಲೆ ಮುರಿಯೋವರೆಗೂ ಸಿದ್ದು ಸಿಎಂ ಕುರ್ಚಿ ಗಡದ್ದು; ಪುತ್ರನ ಹೇಳಿಕೆಯಿಂದ ಮತ್ತೆ ಮಾಡ್ತಿದೆ ಸದ್ದು!
20:50ಸಿಂಹಾಸನ ಸಂಗ್ರಾಮದಲ್ಲಿ ಡಿಕೆ ಶಿವಕುಮಾರ್ 'ಸ್ನೇಹವ್ಯೂಹ': ಸಿದ್ದು ಸಿಪಾಯಿಗಳನ್ನೇ ಸೆಳೆಯುವ ಬಂಡೆಯ ಹೊಸ ದಾಳ!
19:44Suvarna Special: ಸಂನ್ಯಾಸಿ ಸಿಂಹಾಸನ.. ಸಂಘ ಸಪ್ತಕೋಟಿ..! ಯೋಗಿ ಪಟ್ಟಕ್ಕೆ ಏಳು ಸುತ್ತಿನ ಕೋಟೆ ಕಟ್ಟುತ್ತಿದೆ RSS..!
19:26ನಾಟಿ ಕೋಳಿ ಊಟ ಹೊಟ್ಟೆಗೆ ಬೀಳ್ತಿದ್ದಂತೆ, ರಾಜಕೀಯ ಶಾಶ್ವತವಲ್ಲ ಎಂದ ಸಿದ್ದಣ್ಣ; ಆದ್ರೆ ಅಸಲಿಯತ್ತೇ ಬೇರೆ?
20:42ಕುರ್ಚಿ ಆಟದಲ್ಲಿ ಆಟಗಾರರೇ ಅಂಪೈರ್​ಗಳು; ಸಿದ್ದು ಆಟ, ಡಿಕೆ ಹಠ; ಹೈಕಮಾಂಡ್‌ಗೆ ಸಿಂಹಾಸನ ಸಂಕಟ!
23:14ಡಿ.ಕೆ.ಶಿವಕುಮಾರ್‌ಗೆ ಇದ್ಯಾ ರಾಜಯೋಗ? ನೇರಾನೇರ ಕುರ್ಚಿ ಕಾಳಗಕ್ಕೆ ಇಳಿದದ್ದು ಅದೇ ಕಾರಣಕ್ಕಾ?
23:56ಮಾತಿನ ಮೇಲಾಣೆ..! ವರ್ಡ್​​​ ಪವರ್​​ ಇಸ್​​​ ವರ್ಲ್ಡ್​​​ ಪವರ್​​​ ಎಂದ ಡಿಕೆಶಿ, ತಿರುಗೇಟು ಕೊಟ್ಟ ಸಿದ್ದು!
21:10ಮಹಾಕ್ರಾಂತಿ ಮಹಾ ಮುಹೂರ್ತ ಫಿಕ್ಸ್: ಪದತ್ಯಾಗನಾ? ಪಟ್ಟಾಭಿಷೇಕನಾ? ದೆಹಲಿಯಲ್ಲಿ ಕ್ಲೈಮ್ಯಾಕ್ಸ್..!
21:28ಹೊಸ ಆಟ ಆರಂಭಿಸಿದ್ರಾ ಡಿಕೆ ಬ್ರದರ್ಸ್? ಸಿಎಂ ಸಿಂಹಾಸನಕ್ಕಾಗಿ ರಾಜಕೀಯ ರಣರಂಗ!
Read more