Lok Sabha elections 2024: ಬಿಜೆಪಿಗೆ ಎಷ್ಟು ಸ್ಥಾನ..INDIAಗೆ ಎಷ್ಟು ಸ್ಥಾನ..? ಮತಕಟ್ಟೆ ಲೆಕ್ಕಾಚಾರ..!

Jun 2, 2024, 3:32 PM IST

2024ರ ಲೋಕಸಭಾ ಚುನಾವಣೆಗೆ ತೆರೆ ಬಿದ್ದಿದೆ. ಜೂನ್ 4ರ ಮಧ್ಯಾಹ್ನದ ಹೊತ್ತಿಗೆ ಯಾರದಾಗುತ್ತೆ ಸರ್ಕಾರ ಅನ್ನೋ ಪ್ರಶ್ನೆಗೆ ಒಂದು ಹಂತದ ಉತ್ತರವಂತೂ ಸಿಗೋ ಸಾಧ್ಯತೆ ಇದೆ. ಆದ್ರೆ ಅದಕ್ಕೂ ಮುನ್ನ ಅಂದ್ರೆ 7 ಹಂತದ ಮತದಾನ ಮುಗಿದಿದ್ದೇ ತಡ, ಈ ಕಡೆ ಎಕ್ಸಿಟ್‌ ಪೋಲ್‌ ಸಮೀಕ್ಷೆಗಳ(Lok Poll exit poll) ಭರಾಟೆ ಶುರುವಾಗಿದೆ. ಲೋಕಸಭಾ ಚುನಾವಣೆ(Lok Sabha elections 2024) ಹಲವು ಕಾರಣಗಳಿಂದ ಭಾರಿ ಕುತೂಹಲವನ್ನ ಕೆರಳಿಸಿದೆ. ದೇಶದಿಂದಲೇ ಕಳೆದ ಒಂದು ತಿಂಗಳಿಂದ ನಡೆದಂತಹ ಚುನಾವಣಾ ಸಂಗ್ರಾಮಕ್ಕೆ ತೆರೆ ಬಿದ್ದಿದೆ. ಕಳೆದ ಮೂರು ನಾಲ್ಕು ತಿಂಗಳಿಂದ ಭರ್ಜರಿ ಪ್ರಚಾರಕ್ಕೆ ತೊಡಗಿದ್ದ ರಾಜಕೀಯ ಪಕ್ಷಗಳು ಫಲಿತಾಂಶಕ್ಕಾಗಿ ಎದುರು ನೋಡ್ತಾ ಇವೆ. ದೇಶದ ಮತದಾರರು ಸಹ ಜೂನ್ 4ರ ಫಲಿತಾಂಶಕ್ಕಾಗಿ ಕುತೂಹಲದಿಂದ ಕಾಯ್ತಾ ಇದ್ದಾರೆ. ಇದರ ಮಧ್ಯ ಚುನಾವಣೋತ್ತರ ಸಮೀಕ್ಷೆ ವರದಿಗಳು ಕುತೂಹಲವನ್ನು ಮತ್ತಷ್ಟು ಹೆಚ್ಚಿಸಿದೆ. ಇನ್ನು ಪಕ್ಷಗಳ ವಿಚಾರಕ್ಕೆ ಬಂದ್ರೆ ನರೇಂದ್ರ ಮೋದಿ(Narendra modi) ಈ ಬಾರಿ ಹ್ಯಾಟ್ರಿಕ್ ಬಾರಿಸಿ ಇತಿಹಾಸವನ್ನು ನಿರ್ಮಿಸುವುದಕ್ಕೆ ಸಜ್ಜಾಗಿದ್ರೆ , ಮತ್ತೊಂದು ಕಡೆ ಕಾಂಗ್ರೆಸ್(Congress) ಮೈತ್ರಿಕೂಟ ಈ ಬಾರಿ ಮೋದಿಯನ್ನು ಸೋಲಿಸದೆ ಇದ್ದರೆ, ಮತ್ತೆಂದು ಅದು ಸಾಧ್ಯವಿಲ್ಲ ಅಂತ ಜಿದ್ದಿಗೆ ಬಿದ್ದು, ಚುನಾವಣೆ ಎದುರಿಸಿ ಶತಾಯಗತಾಯ ಈ ಬಾರಿ ಗೆಲ್ಲಲೇ ಬೇಕು ಅಂತ ಪಣತೊಟ್ಟಿದೆ.

ಇದನ್ನೂ ವೀಕ್ಷಿಸಿ:  ಎಕ್ಸಿಟ್ ಪೋಲ್‌ನಲ್ಲಿ ಕೈಗೆ ಬಿಗ್ ಶಾಕ್, ಮೈತ್ರಿ ರಾಕ್..! ಧೂಳೆಬ್ಬಿಸಲಿದ್ಯಂತೆ ಕಮಲದಳ ಮೈತ್ರಿಕೂಟ..ಕಾಂಗ್ರೆಸ್‌ಗೆ ಲೋಕಾಘಾತ..?