Lok Sabha elections 2024: ಮತ ಚಲಾಯಿಸದೆ ಇರೋದು ಮೂರ್ಖತನ: ನಾಗತಿಹಳ್ಳಿ ಚಂದ್ರಶೇಖರ್

Lok Sabha elections 2024: ಮತ ಚಲಾಯಿಸದೆ ಇರೋದು ಮೂರ್ಖತನ: ನಾಗತಿಹಳ್ಳಿ ಚಂದ್ರಶೇಖರ್

Published : Apr 25, 2024, 05:35 PM ISTUpdated : Apr 25, 2024, 05:40 PM IST

ನಗರಪ್ರದೇಶದಲ್ಲಿ ಮತದಾನದ ಬಗ್ಗೆ ಅಸಡ್ಡೆ ಇದೆ, ಮತದಾನ ಅನ್ನೋದು ಸಹ ತಪ್ಪು. ಮತ ಚಲಾಯಿಸುವುದು ಪ್ರಜಾಪ್ರಭುತ್ವದ ಹಕ್ಕು. ಸರಿಯಾದ ಸಮಯಕ್ಕೆ ತೆರಳಿ ಮತದಾನ ಮಾಡಬೇಕು ಎಂದು ಚುನಾವಣಾ ರಾಯಭಾರಿ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ಹೇಳಿದ್ದಾರೆ.


ಲೋಕಸಭಾ ಚುನಾವಣೆ (Lok Sabha elections 2024) ಹಿನ್ನೆಲೆ ಮತದಾನ ಮಾಡಿ ಅಂತಾ ಜನರಲ್ಲಿ ಜಾಗೃತಿ ಮೂಡಿಸುವ ಕೆಲಸ ನೀಡಿರೋದು ನನಗೆ ಖುಷಿ ತಂದಿದೆ ಎಂದು ಚುನಾವಣಾ ರಾಯಭಾರಿ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ (Director Nagathihalli Chandrashekar) ಅವರು ಏಷ್ಯಾನೆಟ್ ಸುವರ್ಣ ‌ನ್ಯೂಸ್‌ಗೆ ಪ್ರತಿಕ್ರಿಯಿಸಿದ್ದಾರೆ. ಸಾಮಾನ್ಯವಾಗಿ ನಗರ ಪ್ರದೇಶದಲ್ಲಿ ಮತದಾನದ ಬಗ್ಗೆ ಅಸಡ್ಡೆ ಇದೆ, ಮತಯಾಚನೆ, ಮತದಾನ ಅನ್ನೋದು ಸಹ ತಪ್ಪು. ಮತ ಚಲಾಯಿಸುವುದು ಪ್ರಜಾಪ್ರಭುತ್ವದ ಹಕ್ಕು ಎಂದ ಅವರು, ಸರಿಯಾದ ಸಮಯಕ್ಕೆ ತೆರಳಿ ಮತದಾನ ಮಾಡಬೇಕು. ಅಲ್ಲದೆ ವೈಯಕ್ತಿಕ ನೋವಿಗಾಗಿ ಮತಚಲಾಯಿಸದೆ ಇರೋದು ತಪ್ಪು, ಮತದಾನ  ಅನ್ನೋದು ಹೊಣೆಗಾರಿಕೆ, ವ್ಯವಸ್ಥೆಗೆ ಋಣಿಯಾಗಿರ್ಬೇಕು. ಪರಿಣಾಮ ಮತದಾನ ಮಾಡಬೇಕು ಎಂದು ಹೇಳಿದ್ದಾರೆ. 

ಹಾಗೆಯೇ ಹಳ್ಳಿಗಳಲ್ಲಿ ಕಾರ್ಯಕ್ರಮ‌ ಮಾಡಿ ಮತದಾನದ ಬಗ್ಗೆ ಅರಿವು ಮೂಡಿಸ್ತಿದ್ದೇನೆ. ನೀವು ಮತ ಹಾಕುವ ವ್ಯಕ್ತಿ ಸೋಲ್ತಾನೆ ಅಂದ್ರು ಕೂಡ ಮತದಾನ ಮುಖ್ಯ. ರಜೆ ಇದೆ ಮೋಜು ಮಸ್ತಿ ಮಾಡಲು ಹೋಗುವ ವ್ಯಕ್ತಿ ಮೂರ್ಖ, ಮತ ಚಲಾಯಿಸದೆ ಮಸ್ತಿಗಾಗಿ ಟ್ರಿಪ್ ಮಾಡುವ ವ್ಯಕ್ತಿ ಎಲ್ಲಾ ಸವಲತ್ತು ಪಡೆದಿರುತ್ತಾನೆ. ಆದ್ರೆ, ಮತ ಚಲಾಯಿಸದೆ ಇರೋದು ಮೂರ್ಖತನ. ಹೆಚ್ಚು ಮತದಾನಕ್ಕಾಗಿ ಚುನಾವಣಾ ಆಯೋಗ ಸಹ ಮತದಾನದ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದೆ. ಹಲವು ಒತ್ತಡದ ಮಧ್ಯೆಯೂ ನಾನು ಚುನಾವಣೆಯಲ್ಲಿ ಮತದಾನ ಮಾಡಲು ಜಾಗೃತಿ ಮೂಡಿಸ್ತಿದ್ದೇನೆ. ಚುನಾವಣೆ ಹಿನ್ನಲೆ ಎಲ್ಲಾ ಶೂಟಿಂಗ್ ಮುಗಿಸಿಕೊಳ್ಳಲಾಗುತ್ತಿದೆ. ಅಲ್ಲದೆ. ನಾಳೆ ಶೂಟಿಂಗ್ ರಜೆ ಮಾಡಲಾಗಿದೆ. ಈ ಮೂಲಕ ಪ್ರತಿಯೊಬ್ಬರು ಮತ ಮತ ಚಲಾಯಿಸಲು ಅವಕಾಶ ಮಾಡಿಕೊಡಲಾಗುತ್ತಿದೆ. ಈ ನಡುವೆ ಗ್ರಾಮೀಣ ಪ್ರದೇಶದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮತದಾನ ಆಗುವ ನಿರೀಕ್ಷೆ ಇದೆ ಎಂದು ವಿಶ್ವಾಸ ಹೊಹಾಕಿದರು.

ಇದನ್ನೂ ವೀಕ್ಷಿಸಿ:  ಇದು ಕುರ್ಚಿ ಕಾಳಗವಲ್ಲ,ಅವಳಿ ದಂಡನಾಯಕರ ಗೆರಿಲ್ಲಾ ವಾರ್!ಸಕ್ಸಸ್ ಮಂತ್ರವನ್ನೇ ಅಸ್ತ್ರವಾಗಿ ಹಿಡಿದಿದ್ದಾರೆ ಸಿದ್ದು,ಡಿಕೆಶಿ!

24:31ಮಡದಿ.. ಸಹೋದರ ಸಮೇತ ಸಿದ್ದು ಮನೆಗೆ ಡಿಕೆ! ಮೊದಲ ಹೆಜ್ಜೆಗಳಲ್ಲೇ ಮಹಾ ಗುರಿಯ ಸುಳಿವು ಕೊಟ್ಟಾಗಿದೆ ಡಿಕೆ!
24:17ಕಾಸು..ಕರೆಂಟು..ಲಕ್ಷ್ಮೀ..ಜ್ಯೋತಿ..ಡಬಲ್ ಆಪರೇಷನ್! ಎಪಿಕ್ ಕಾರ್ಡ್​ ನಂಬರ್ ಸೀಕ್ರೆಟ್​..ಏನಿದು ಮಾಸ್ಟರ್​ ಸ್ಟ್ರೋಕ್?
21:09ಇದು ದಳಪತಿ ಕೋಟೆ ಕಣೋ! ವಿಜಯ್ ಶಪಥಕ್ಕೆ ನಡುಗಿದ್ದೇಕೆ ದ್ರಾವಿಡ ನೆಲದ ರಾಜಕಾರಣ?
23:39ಕೈ ಕೊಟ್ಟವರ್ಯಾರೋ ಮಂಜುನಾಥ?; ಬಿಜೆಪಿಯಲ್ಲಿ ಅಡ್ಡಮತದಾನದ ಆಂತರಿಕ ಜ್ವಾಲಾಮುಖಿ ಸ್ಫೋಟ!
23:38ಬಿಡದಿ ಟೌನ್‌ಶಿಪ್ ರಣರಂಗದಲ್ಲಿ ಪತ್ರಕ್ಕೆ ಪತ್ರ, ಸವಾಲ್‌ಗೆ ಸವಾಲ್, ಜಿದ್ದಿಗೆ ಜಿದ್ದು!
06:49ಪ್ಯಾನ್ ಇಂಡಿಯಾ ಹೀರೋ ವಿಜಯ್ ಈಗ ಈಗ ಪ್ಯಾನ್ ಇಂಡಿಯಾ ಲೀಡರ್! ಹುಟ್ಟುಹಬ್ಬದ ದಿನ ಸಿಕ್ತು ಸಾಕ್ಷಿ!
24:49Karnataka Congress: ಹರಿಪ್ರಸಾದ್‌ಗೆ ಕೆಪಿಸಿಸಿ ಗದ್ದುಗೆ: ಡಿಕೆ-ಬಿಕೆ ಜೋಡಿಯಿಂದ ಹೊಸ ಮ್ಯಾಜಿಕ್ ಸಾಧ್ಯನಾ?
03:42'ದಳಪತಿ' ಕುರ್ಚಿಗೆ ಕಂಟಕ? ಅಣ್ಣಾ ಮಲೈ-ರಜನಿಕಾಂತ್-ಅಜಿತ್ 'ತ್ರಿಮೂರ್ತಿ'ಗಳ ಆಟ ಶುರುವಾಗ್ತಿದ್ಯಾ?
19:09ಕನಕಾಧಿಪತಿ ಚದುರಂಗ.. BJP ಪಡೆ ಕೋಲಾಹಲ: ಹಸ್ತಕೋಟೆಗೇ ಗೊತ್ತಿರಲಿಲ್ಲ.. ಡಿಕೆ ಹೂಡಿದ ಚಕ್ರವ್ಯೂಹ!
18:09362 ನಂಬರ್‌ಗಾಗಿ ಬಿಜೆಪಿ ಆಟ, ಕಂಪನಕ್ಕೆ ಬಂಗಾಳದಿಂದ ಯುಪಿ ವರೆಗೂ ಉರುಳುತ್ತಿದೆ ವಿಕೆಟ್