Mar 15, 2024, 5:26 PM IST
ಬಿಜೆಪಿಯ ಎರಡನೇ ಪಟ್ಟಿ ಬಿಡುಗಡೆಯ ನಂತರ ಕರ್ನಾಟಕದ(Karnataka) 20 ಕ್ಷೇತ್ರಗಳಿಗೆ ಕೇಸರಿ ಅಭ್ಯರ್ಥಿಗಳು ಯಾರು ಅನ್ನೋ ಪ್ರಶ್ನೆಗೆ ಉತ್ತರ ಸಿಕ್ಕಿದೆ. ಅದರ ಬೆನ್ನಲ್ಲೇ ಕಮಲಪತಿಗಳಿಗೆ ಸ್ವಪಕ್ಷ ಸಂಘರ್ಷದ ಢವಢವ ಶುರುವಾಗಿದೆ. ಹಾಲಿ ಸಂಸದರ ಶೀತಲ ಸಮರ ಏರ್ಪಟ್ರೆ ಹೊಸ ಅಭ್ಯರ್ಥಿಗಳಿಗೆ ಹಿನ್ನಡೆಯಾಗೋ ಭೀತಿ ಇದೆ. ಈ ಮಧ್ಯೆ ಬಿಜೆಪಿ(BJP) ತನ್ನ ಎರಡನೇ ಪಟ್ಟಿಯಲ್ಲಿ ಕರ್ನಾಟಕದ 20 ಕ್ಷೇತ್ರಗಳ ಅಭ್ಯರ್ಥಿ ಹೆಸರನ್ನು ಅಂತಿಮ ಮಾಡಿದೆ. ಹಾಲಿ ಸಂಸದರಲ್ಲಿ ಅನೇಕರಿಗೆ ಶಾಕ್ ನೀಡಿದೆ. ಹೊಸಬರಿಗೆ ಮಣೆ ಹಾಕಿದೆ. ರಾಜಕೀಯದಲ್ಲಿ ಬದಲಾವಣೆ ಅನ್ನೋದು ಆಗ್ತಾ ಇದ್ದ ಹಾಗೆ ಬಂಡಾಯ ಅನ್ನೋದು ಕಾಣೋದು ಅತಿ ಸಾಮಾನ್ಯ. ಈಗ 20 ಕ್ಷೇತ್ರಗಳಲ್ಲಿ ಅನೇಕರ ಅಸಮಾಧಾನದ ಮಧ್ಯೆಯೇ ಚುನಾವಣೆಯನ್ನ ಎದುರಿಸಬೇಕಿದೆ. ಕೆ.ಎಸ್. ಈಶ್ವರಪ್ಪ(KS Eshwarappa) ಅವರ ಪುತ್ರ ಕಾಂತೇಶ್‌ಗೆ ಹಾವೇರಿ (Loksabha) ಟಿಕೆಟ್ (Ticket) ತಪ್ಪಿಹೋಗಿದ್ದ ಕೆಂಡಾಮಂಡಲರಾಗಿದ್ದಾರೆ. ನಿಮಗೆ ಅನ್ಯಾಯವಾಗಿದೆ, ಹೀಗಾಗಿ ಶಿವಮೊಗ್ಗದಿಂದ ಚುನಾವಣೆಯಲ್ಲಿ ಸ್ವತಂತ್ರವಾಗಿ ಸ್ಪರ್ಧಿಸಿ ಎಂದು ಹಲವು ಕಾರ್ಯಕರ್ತರು, ಹಿತೈಷಿಗಳು ಹೇಳುತ್ತಿರುವುದು ನಿಜ. ಆದರೆ, ಈ ವಿಚಾರದಲ್ಲಿ ಅತ್ಯಂತ ಸೂಕ್ಷ್ಮವಾಗಿ ಎಲ್ಲರ ಅಭಿಪ್ರಾಯ ಸಂಗ್ರಹಿಸಿ ಮುಂದಿನ ತೀರ್ಮಾನ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.
ಇದನ್ನೂ ವೀಕ್ಷಿಸಿ: Loksabha Election: ಯಾರಿಗೆ ಯಾರು ಪೈಪೋಟಿ ? ಹೇಗಿದೆ ರಣಕಣ ಪರಿಸ್ಥಿತಿ? ಬಿಜೆಪಿಯ ತಂತ್ರಕ್ಕೆ ಟಕ್ಕರ್ ಕೊಡಲಿದೆಯಾ ಕಾಂಗ್ರೆಸ್ ?