ಕಾಂಗ್ರೆಸ್‌ ಕೊಟ್ಟ 5 ಗ್ಯಾರಂಟಿಗಳು ಈಡೇರುತ್ತಾ ?: ಈ ಬಗ್ಗೆ ಆರ್ಥಿಕ ತಜ್ಞರು ಹೇಳೋದೇನು ?, ಬೇಕಿರುವ ಹಣವೆಷ್ಟು ?

May 21, 2023, 10:59 AM IST

ಎಲೆಕ್ಷನ್ ಮುಗಿದಾಯ್ತು, ಕಾಂಗ್ರೆಸ್ ಗೆದ್ದಾಯ್ತು, ಸಿಎಂ, ಡಿಸಿಎಂ ಆಯ್ಕೆನೂ ಮುಗಿಯಿತು. ಹೆಚ್ಚುಕಮ್ಮಿ ಸಂಪುಟವೂ ರೆಡಿ ಆಗೋಯ್ತು. ಹಾಗಿದ್ರೆ ಬಾಕಿ ಉಳಿದಿರೋದೇನು? ಇವರದ್ದೇನು ಬಾಕಿ ಉಳಿದಿಲ್ಲ. ಈಗ ಬಾಕಿ ಉಳಿದಿರೋದು ವೋಟ್ ಒತ್ತಿದ ಮತದಾರನದ್ದು. ಅದ್ದೂರಿಯಾಗಿ ಸರ್ಕಾರ ರಚಿಸಿದ ಕಾಂಗ್ರೆಸ್‌ನಿಂದ ಜನಸಾಮಾನ್ಯ ಐದು ಗ್ಯಾರಂಟಿಗಳನ್ನು ಯಾವಾಗ ಕೊಡ್ತಾರೆ ಎಂದು ಕಾಯ್ತಿದ್ದಾನೆ. ಗೃಹ ಜ್ಯೋತಿ, ಗೃಹಲಕ್ಷ್ಮಿ, ಅನ್ನಭಾಗ್ಯ, ಪದವೀಧರರಿಗೆ 3 ಸಾವಿರ ರೂಪಾಯಿ ಮತ್ತು ಸರ್ಕಾರಿ ಬಸ್ಸುಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣ. ಕಾಂಗ್ರೆಸ್ ಪಕ್ಷ ಈ ಐದು ಪ್ರಮುಖ ಗ್ಯಾರಂಟಿಗಳನ್ನು ರಾಜ್ಯದ ಜನತೆಗೆ ನೀಡಿತ್ತು. ಈಗ ಈ ಗ್ಯಾರಂಟಿಗಳಿಂದ ಅದ್ಭುತವಾಗಿ ಗೆದ್ದಿರುವ ಕಾಂಗ್ರೆಸ್ ಪಕ್ಷ, ಗೆಲುವಿನಷ್ಟೇ ಅದ್ಭುತವಾಗಿ ಜನರಿಗೆ ಕೊಡಬಲ್ಲಾದ ಅನ್ನೋ ಪ್ರಶ್ನೆ ಹುಟ್ಟಿಕೊಂಡಿದೆ.

ಇದನ್ನೂ ವೀಕ್ಷಿಸಿ: 'ಬೀದಿಯಲ್ಲಿ ಹೋಗೋರಿಗೆಲ್ಲಾ ದುಡ್ಡು ಕೊಡೋಕ್ಕಾಗುತ್ತ..' ಗ್ಯಾರಂಟಿ ಬಗ್ಗೆ ಡಿಕೆಶಿ ಕೊಂಕು!