Jul 2, 2024, 1:02 PM IST
ಡಿಸಿಎಂ ಸ್ಥಾನ, ಕೆಪಿಸಿಸಿ ಅಧ್ಯಕ್ಷರ(KPCC president) ಬದಲಾವಣೆ ಬಗ್ಗೆ ಮಾತಾಡ್ತಿದ್ದವರಿಗೆ ಶಾಕ್ ನೀಡಲಾಗಿದೆ. ಕಾರ್ಯಕ್ಷಮತೆ ಅಸ್ತ್ರ ಪ್ರಯೋಗಿಸಲು ಡಿಸಿಎಂ ಡಿಕೆಶಿ (DK Shivakumar) ಮುಂದಾಗಿದ್ದಾರೆ. ಕೆಪಿಸಿಸಿ ಹಂತದಲ್ಲಿ ಸತ್ಯಶೋಧನಾ ಸಮಿತಿ ರಚಿಸಲು (Fact Finding Committees) ಡಿಕೆ ಶಿವಕುಮಾರ್ ಮುಂದಾಗಿದ್ದಾರೆ. ಕೆಪಿಸಿಸಿ ಸತ್ಯಶೋಧನ ಸಮಿತಿ ಮೂಲಕ ವರದಿ ತರಿಸಿಕೊಳ್ಳಲು ನಿರ್ಧಾರ ಮಾಡಿದ್ದು, ಈ ಮೂಲಕ ಸಚಿವರು, ಶಾಸಕರ ಕಾರ್ಯಕ್ಷಮತೆ ಅಳೆಯಲಾಗುವುದು. ಲೋಕಸಭೆಯಲ್ಲಿ ಕಳಪೆ ಸಾಧನೆ ಶೋಧಕ್ಕೆ ಡಿಸಿಎಂ ಡಿಕೆಶಿ ಮುಂದಾಗಿದ್ದಾರೆ. ವಿಧಾನಸಭಾ ಕ್ಷೇತ್ರಗಳ ಅಸಲಿ ಕಾರಣ ತಿಳಿಯಲು ಡಿಕೆಶಿ ನಿರ್ಧಿರಿಸಿದ್ದು, ಎಐಸಿಸಿ ಫ್ಯಾಕ್ಟ್ ಫೈಡಿಂಗ್ ಕಮಿಟಿಗೂ ಮಾಹಿತಿ ನೀಡಲಿದ್ದಾರೆ. ಡಿಕೆಶಿ ಕಾರ್ಯಕ್ಷಮತೆ ಅಸ್ತ್ರಕ್ಕೆ ಸಚಿವರು ದಂಗಾಗಿದ್ದಾರೆ. ಸುಮಾರು 17 ಸಚಿವರು ತಮ್ಮ ಸ್ವ ಕ್ಷೇತ್ರದಲ್ಲಿ ಲೀಡ್ ಕೊಡಿಸುವಲ್ಲಿ ವಿಫಲವಾಗಿದ್ದು, ಡಿಸಿಎಂ ಸ್ಥಾನಕ್ಕೆ ಪಟ್ಟು ಹಿಡಿದಿರುವವರಿಂದಲೂ ಲೀಡ್ ಕೊಡಿಸುವಲ್ಲಿ ವಿಫಲ. ಇದೇ ಅಸ್ತ್ರ ಬಳಸಿ ತಿರುಗೇಟು ನೀಡಲು ಡಿಸಿಎಂ ಡಿಕೆಶಿ ಪ್ಲ್ಯಾನ್ ಮಾಡಿದ್ದಾರೆ. ಫ್ಯಾಕ್ಟ್ ಫೈಂಡಿಂಗ್ ಕಮಿಟಿ ವರದಿಗೂ ಮುನ್ನವೇ ಸತ್ಯಶೋಧನೆ ಗಿಳಿದ ಡಿಕೆಶಿ. ಕಳಪೆ ಸಾಧನೆ ಮಾಡಿದ ಕ್ಷೇತ್ರಗಳ ಕಾರಣ ತಿಳಿದುಕೊಳ್ಳಲು ತೀರ್ಮಾನ ಮಾಡಿದ್ದಾರೆ. ಡಿಸಿಎಂ ರೇಸ್‌ಲ್ಲಿರುವ ಪರಮೇಶ್ವರ್ ಕೂಡ ಲೀಡ್ ಕೊಡಿಸುವಲ್ಲಿ ವಿಫಲವಾಗಿದ್ದು, ಸಚಿವ ಎಂಬಿ ಪಾಟೀಲ್ ಸಹ ತಮ್ಮ ಕ್ಷೇತ್ರದಲ್ಲಿ ಲೀಡ್ ಕೊಡಿಸುವಲ್ಲಿ ವಿಫಲವಾಗಿದ್ದಾರೆ.
ಇದನ್ನೂ ವೀಕ್ಷಿಸಿ: ಸರ್ಕಾರದಲ್ಲಿ ಶಾಸಕ V/S ಸಚಿವರ ಸಂಘರ್ಷ: ಪರೋಕ್ಷವಾಗಿ ರಾಜೀನಾಮೆ ಮಾತಾಡಿದ್ರಾ ಕುಲಕರ್ಣಿ?