2019ರ ಸೋಲಿನ ಸೇಡು ತೀರಿಸಿಕೊಳ್ಳಲು ಎಚ್‌ಡಿಡಿ ಅಖಾಡಕ್ಕೆ! ಸೋಮಣ್ಣ ಪರ ಭರ್ಜರಿ ಪ್ರಚಾರಕ್ಕೆ ಇಳಿದ ದೊಡ್ಡ ಗೌಡರು

2019ರ ಸೋಲಿನ ಸೇಡು ತೀರಿಸಿಕೊಳ್ಳಲು ಎಚ್‌ಡಿಡಿ ಅಖಾಡಕ್ಕೆ! ಸೋಮಣ್ಣ ಪರ ಭರ್ಜರಿ ಪ್ರಚಾರಕ್ಕೆ ಇಳಿದ ದೊಡ್ಡ ಗೌಡರು

Published : Apr 15, 2024, 12:07 PM ISTUpdated : Apr 15, 2024, 12:08 PM IST

ಎರಡನೇ ಸಲ ತುಮಕೂರಿನಲ್ಲಿ ಎಚ್.ಡಿ ದೇವೇಗೌಡ ಪ್ರಚಾರ
2019ರ ಸೋಲಿನ ಸೇಡು ತೀರಿಸಿಕೊಳ್ಳಲು ಮುಂದಾದ ಎಚ್‌ಡಿಡಿ
ಸೋಮಣ್ಣನ ಗೆಲುವು ಮೂಲಕ ಸೇಡು ತೀರಿಸಿಕೊಳ್ಳಲು ಕಸರತ್ತು

ಲೋಕಸಭಾ ಚುನಾವಣೆ (Lok Sabha Elections) ಪ್ರಚಾರ ಜೋರಾಗಿದೆ. ತಮ್ಮ ತಮ್ಮ ಅಭ್ಯರ್ಥಿಗಳನ್ನು ಗೆಲ್ಲಿಸಿಕೊಳ್ಳಲು ಆಯಾ ಪಕ್ಷಗಳು ದೊಡ್ಡ ಮಟ್ಟದ ರೋಡ್‌ ಶೋ, ಪ್ರಚಾರ ಕಾರ್ಯಗಳನ್ನು ಮಾಡುತ್ತಿವೆ. ಈ  ನಡುವೆ ಎರಡನೇ ಸಲ ತುಮಕೂರಿನಲ್ಲಿ(Tumakuru) ಎಚ್.ಡಿ ದೇವೇಗೌಡ (HD DeveGowda) ಅವರು ಪ್ರಚಾರಕ್ಕೆ ಇಳಿಯಲಿದ್ದಾರೆ. 2019ರ ಸೋಲಿನ ಸೇಡು ತೀರಿಸಿಕೊಳ್ಳಲು ಎಚ್‌ಡಿಡಿ ಮುಂದಾಗಿದ್ದು, ಅದನ್ನು ಸೋಮಣ್ಣ ಮೂಲಕ ಈಡೇರಿಸಿಕೊಳ್ಳಲಿದ್ದಾರೆ ಎನ್ನಲಾಗಿದೆ. ಹಾಸನ ಬಳಿಕ ತುಮಕೂರನ್ನು ಅವರು ಪ್ರತಿಷ್ಟೆಯಾಗಿ ತೆಗೆದುಕೊಂಡಿದ್ದು, ಮೈತ್ರಿ ಅಭ್ಯರ್ಥಿ ವಿ.ಸೋಮಣ್ಣರನ್ನು(V Somamma) ಗೆಲ್ಲಿಸುವಂತೆ ಮತದಾರರಿಗೆ ಮನವಿ ಮಾಡುತ್ತಿದ್ದಾರೆ. ಗೃಹ ಸಚಿವರ ತವರು ಕ್ಷೇತ್ರವಾದ ಕೊರಟಗೆರೆಯಲ್ಲಿಯೇ ಈ ಪ್ರಚಾರ ಸಭೆ ನಡೆಯಲಿದ್ದು, ತುಮಕೂರು ಗ್ರಾಮಾಂತರ ಕ್ಷೇತ್ರದ ಊರ್ಡಿಗೆರೆಯಲ್ಲೂ ಪ್ರಚಾರ ಮಾಡಲಾಗುತ್ತದೆ. ಇದಾದ ನಂತರದಲ್ಲಿ ಸಂಜೆ ತುಮಕೂರು ನಗರದಲ್ಲಿ ಮತಯಾಚನೆ ಮಾಡಲಿದ್ದಾರೆ. ಇನ್ನು ರಾತ್ರಿ ತುಮಕೂರಿನಲ್ಲೇ ಎಚ್.ಡಿ ದೇವೇಗೌಡ ಅವರು ವಾಸ್ತವ್ಯ ಹೂಡಲಿದ್ದು, ನಾಡಿದ್ದು‌ ಮಧುಗಿರಿಯಲ್ಲಿ ಪ್ರಚಾರ ಮಾಡಲಿದ್ದಾರೆ.

ಇದನ್ನೂ ವೀಕ್ಷಿಸಿ:  2000 ಜನ ಸೇರಿದ್ರು ಅಂದ್ರೆ ಯಾರು ನಂಬ್ತಾರೆ? ವಿವೇಕ್ ಹೆಬ್ಬಾರ್ ಜತೆ ಅಷ್ಟು ಜನ ಎಲ್ಲಿಂದ ಬಂದ್ರು? ದೇಶಪಾಂಡೆ ಪ್ರಶ್ನೆ

20:58ಅಣ್ಣನನ್ನೇ ಓವರ್ ಟೇಕ್ ಮಾಡಿದ್ರಾ ಮುದ್ದಿನ ತಂಗಿ? ಅರ್ಧ ನಿಜವಾಗಿದೆ ಅಂದು ಇಂದಿರಾ ನುಡಿದಿದ್ದ ಭವಿಷ್ಯ!
20:43ಸಿಎಂ ಪಟ್ಟದ ಪಗಡೆಯಾಟದಲ್ಲಿ ಡಿಕೆಶಿ ವೈರಾಗ್ಯದ ನುಡಿ: ಸಿದ್ದು ಅಹಿಂದ ಬ್ರಹ್ಮಾಸ್ತ್ರಕ್ಕೆ ಸಿಂಹಾಸನ ದಿಗ್ಬಂಧನ?
22:34ರಾಹುಕಾಲ ರಹಸ್ಯ..! ಸಿದ್ದು ಆಪ್ತನ ಪತ್ರವ್ಯೂಹ.. ರಾಹುಲ್ ಕೈಯಲ್ಲಿ ಡಿ.ಕೆ.ಶಿವಕುಮಾರ್ ಪಟ್ಟ ಭವಿಷ್ಯ!
25:15ಜೂನಿಯರ್ ಇಂದಿರೆ, ಪ್ರಚಂಡ ಪ್ರಿಯಾಂಕಾ; ಬದ್ಧವೈರಿಗಳ ಬಾಯಲ್ಲೇ ಗುಣಗಾನ
23:33ಒಂದೇ ಕಲ್ಲಿನಲ್ಲಿ ಎರಡು ಹಕ್ಕಿ ಹೊಡೆದಿದ್ದು ಹೇಗೆ ರಣಬೇಟೆಗಾರ ಸಿಎಂ ಸಿದ್ದರಾಮಯ್ಯ?
05:37ಡೆವಿಲ್ ಸಿನಿಮಾದಲ್ಲಿ ದರ್ಶನ್ ಸಿಎಂ..! ಕಿಚ್ಚ ಸುದೀಪ್ ಹೇಳಿದ ಪಾಲಿಟಿಕ್ಸ್ ಸೀಕ್ರೆಟ್ ಏನು?
21:17ಸಿದ್ದು ಸಮರವ್ಯೂಹ.. ಡಿಕೆ ಚತುರದಾಳ.. ಡಿನ್ನರ್ ದಂಗಲ್: ಒಂದು ಸಭೆ.. ಮೂರು ಸಂದೇಶ.. ಚಾಣಾಕ್ಷ ಬಂಡೆ!
18:13ಸಿದ್ದು ಸೇನೆಯಲ್ಲಿ ಬಿರುಕು: ಅಹಿಂದ ಅರಸೊತ್ತಿಗೆ, ಸಾಹುಕಾರ್​ಗೆ ಸಿಗುತ್ತಾ ಪ್ರಚಂಡ ಪವರ್?
19:47ಅರಸು ಆಳ್ವಿಕೆ ದಾಖಲೆ ಮುರಿಯೋವರೆಗೂ ಸಿದ್ದು ಸಿಎಂ ಕುರ್ಚಿ ಗಡದ್ದು; ಪುತ್ರನ ಹೇಳಿಕೆಯಿಂದ ಮತ್ತೆ ಮಾಡ್ತಿದೆ ಸದ್ದು!
20:50ಸಿಂಹಾಸನ ಸಂಗ್ರಾಮದಲ್ಲಿ ಡಿಕೆ ಶಿವಕುಮಾರ್ 'ಸ್ನೇಹವ್ಯೂಹ': ಸಿದ್ದು ಸಿಪಾಯಿಗಳನ್ನೇ ಸೆಳೆಯುವ ಬಂಡೆಯ ಹೊಸ ದಾಳ!
Read more