ಹೆಜ್ಜೆ ಹೆಜ್ಜೆಗೂ ಬಿಬಿಎಂಪಿ ಗುತ್ತಿಗೆದಾರರು ಯೂಟರ್ನ್: ಕಮಿಷನ್ ದಂಗಲ್‌ನಲ್ಲಿ ದಿನಕ್ಕೊಂದು ಟ್ವಿಸ್ಟ್ !

ಹೆಜ್ಜೆ ಹೆಜ್ಜೆಗೂ ಬಿಬಿಎಂಪಿ ಗುತ್ತಿಗೆದಾರರು ಯೂಟರ್ನ್: ಕಮಿಷನ್ ದಂಗಲ್‌ನಲ್ಲಿ ದಿನಕ್ಕೊಂದು ಟ್ವಿಸ್ಟ್ !

Published : Aug 18, 2023, 10:53 AM IST

ಗುತ್ತಿಗೆದಾರರ ಕಮಿಷನ್ ದಂಗಲ್ನಲ್ಲಿ ದಿನಕ್ಕೊಂದು ಟ್ವಿಸ್ಟ್
ಹೆಜ್ಜೆ ಹೆಜ್ಜೆಗೂ ಬಿಬಿಎಂಪಿ ಗುತ್ತಿಗೆದಾರರು ಯೂಟರ್ನ್..!
ಪೊಲೀಸ್ ವಿಚಾರಣೆಯಲ್ಲೂ ಉಲ್ಟಾ ಹೊಡೆದ ಗುತ್ತಿಗೆದಾರರು

ಬಿಬಿಎಂಪಿ ಗುತ್ತಿಗೆದಾರರ ಬಾಕಿ ಬಿಲ್ ಪಾವತಿಗೆ ಕಮಿಷನ್ ಕೇಳುತ್ತಿದ್ದಾರೆ ಅನ್ನೋ ಗಂಭೀರ ಆರೋಪ ರಾಜ್ಯ ರಾಜಕೀಯದಲ್ಲಿ ಭಾರೀ ಸಂಚಲನ ಸೃಷ್ಟಿಸಿತ್ತು.. ಡಿಕೆಶಿ ಅಧಿಕಾರಿಗಳ ಮೂಲಕ ಕಮಿಷನ್(Commission) ಬೇಡಿಕೆ ಇಡ್ತಿದ್ದಾರೆ ಎಂದು ಗವರ್ನರ್‌ಗೆ ದೂರು ಕೊಟ್ಟಿದ್ದರು. ಅಷ್ಟೇ ಅಲ್ಲ ಗುತ್ತಿಗೆದಾರ(Contractor) ಹೇಮಂತ ಬಹಿರಂಗವಾಗೇ ಡಿಕೆಶಿಗೆ ಅಜ್ಜಯ್ಯನ ಮೇಲೆ ಆಣೆ ಪ್ರಮಾಣಕ್ಕೆ ಆಹ್ವಾನ ಕೊಟ್ಟಿದ್ರು. ಗುತ್ತಿಗೆದಾರರ ಕಮಿಷನ್ ದಂಗಲ್ ಇಲ್ಲಿಗೆ ನಿಂತಿಲ್ಲ. ಮಾಜಿ ಸಿಎಂ ಬಿಸ್‌ವೈ, ಬೊಮ್ಮಾಯಿ ಅವರನ್ನೂ  ಭೇಟಿ ಮಾಡಿದ್ರು. ಇದರ ಬೆನ್ನಲ್ಲೇ ಜೆಡಿಎಸ್, ಬಿಜೆಪಿ(BJP) ನಾಯಕರು ಸಿದ್ದು ಸರ್ಕಾರದ ವಿರುದ್ಧ ಕಮಿಷನ್ ಟೀಕಾಸ್ತ್ರ ಹಿಡಿದು ದಾಳಿಗೆ ಇಳಿದರು. ಯಾವಾಗ ಪ್ರಕರಣದಲ್ಲಿ ರಾಜಕೀಯ ಬಿರುಗಾಳಿ ಏಳ್ತೋ ಗುತ್ತಿಗೆದಾರರು ಯೂಟರ್ನ್ ಹೊಡೆದು ಬಿಟ್ರು. ಹೀಗೆ ಆಗಸ್ಟ್ 14ರಂದು ಗುತ್ತಿಗೆದಾರರು ಯೂಟರ್ನ್ ಹೊಡೆದು ಬಿಟ್ರು.. ನಾವು ಕಮಿಷನ್ ಆರೋಪವನ್ನೇ ಮಾಡಿಲ್ಲ ಎಂದರು. ಈ ಮಧ್ಯೆ ಗುತ್ತಿಗೆದಾರರು ಗವರ್ನರ್‌ಗೆ ಬರೆದ ದೂರಿಗೆ ಪ್ರತಿಯಾಗಿ ಬಿಬಿಎಂಪಿ(BBMP) ಹಣಕಾಸು ವಿಭಾಗದ ಅಪರ ಆಯುಕ್ತ ಮಹಾದೇವ್ ಗುತ್ತಿಗೆದಾರರ ವಿರುದ್ಧ ಹೈಗ್ರೌಂಡ್ಸ್ ಠಾಣೆಗೆ ಪ್ರತಿ ದೂರು ನೀಡಿದ್ದರು. ಗುತ್ತಿಗೆದಾರರು ಬಾಕಿ ಬಿಲ್‌ಗಾಗಿ ಒತ್ತಡ ಹಾಕೋದಲ್ದೆ ರಾಜ್ಯಪಾಲರಿಗೆ ಕೊಟ್ಟ ದೂರಿನಲ್ಲಿ ದಯಾಮರಣಕ್ಕೆ ಮನವಿ ಮಾಡಿದ್ದಾರೆ. ಹೀಗಾಗಿ ದೂರಿನ ಅಸಲಿಯತ್ತು ಪರಿಶೀಲಿಸಿ ಹಾಗೂ ಅಸಲಿ ಸಹಿಗಳೇ ಎಂಬುದನ್ನ ಪರಿಶೀಲಿಸಿ ಎಂದು ಮನವಿ ಮಾಡಿದ್ದರು. ಇದೀಗ ದೂರು ಸ್ವೀಕರಿಸಿದ ಶೇಷಾದ್ರಿಪುರಂ ವಿಭಾಗದ ಎಸಿಪಿ ಪ್ರಕಾಶ್‌ ರೆಡ್ಡಿ ತನಿಖೆಗೆ ಇಳಿದಿದ್ದಾರೆ. ಆದ್ರೆ, ತನಿಖೆ ವೇಳೆಯೂ ಗುತ್ತಿಗೆದಾರರು ಯೂಟರ್ನ್ ಹೊಡೆದಿದ್ದಾರೆ.

ಇದನ್ನೂ ವೀಕ್ಷಿಸಿ:  ಬಿಜೆಪಿಗೆ ಬಿಗ್ ಶಾಕ್ ಕೊಡ್ತಾರಾ ಬಾಂಬೆ ಬಾಯ್ಸ್ ? ಕಾಂಗ್ರೆಸ್‌ಗೆ ವಲಸಿಗ ಶಾಸಕರ ಘರ್‌ವಾಪ್ಸಿ ಬಹುತೇಕ ಫಿಕ್ಸ್ ?

21:09ಇದು ದಳಪತಿ ಕೋಟೆ ಕಣೋ! ವಿಜಯ್ ಶಪಥಕ್ಕೆ ನಡುಗಿದ್ದೇಕೆ ದ್ರಾವಿಡ ನೆಲದ ರಾಜಕಾರಣ?
23:39ಕೈ ಕೊಟ್ಟವರ್ಯಾರೋ ಮಂಜುನಾಥ?; ಬಿಜೆಪಿಯಲ್ಲಿ ಅಡ್ಡಮತದಾನದ ಆಂತರಿಕ ಜ್ವಾಲಾಮುಖಿ ಸ್ಫೋಟ!
23:38ಬಿಡದಿ ಟೌನ್‌ಶಿಪ್ ರಣರಂಗದಲ್ಲಿ ಪತ್ರಕ್ಕೆ ಪತ್ರ, ಸವಾಲ್‌ಗೆ ಸವಾಲ್, ಜಿದ್ದಿಗೆ ಜಿದ್ದು!
06:49ಪ್ಯಾನ್ ಇಂಡಿಯಾ ಹೀರೋ ವಿಜಯ್ ಈಗ ಈಗ ಪ್ಯಾನ್ ಇಂಡಿಯಾ ಲೀಡರ್! ಹುಟ್ಟುಹಬ್ಬದ ದಿನ ಸಿಕ್ತು ಸಾಕ್ಷಿ!
24:49Karnataka Congress: ಹರಿಪ್ರಸಾದ್‌ಗೆ ಕೆಪಿಸಿಸಿ ಗದ್ದುಗೆ: ಡಿಕೆ-ಬಿಕೆ ಜೋಡಿಯಿಂದ ಹೊಸ ಮ್ಯಾಜಿಕ್ ಸಾಧ್ಯನಾ?
03:42'ದಳಪತಿ' ಕುರ್ಚಿಗೆ ಕಂಟಕ? ಅಣ್ಣಾ ಮಲೈ-ರಜನಿಕಾಂತ್-ಅಜಿತ್ 'ತ್ರಿಮೂರ್ತಿ'ಗಳ ಆಟ ಶುರುವಾಗ್ತಿದ್ಯಾ?
19:09ಕನಕಾಧಿಪತಿ ಚದುರಂಗ.. BJP ಪಡೆ ಕೋಲಾಹಲ: ಹಸ್ತಕೋಟೆಗೇ ಗೊತ್ತಿರಲಿಲ್ಲ.. ಡಿಕೆ ಹೂಡಿದ ಚಕ್ರವ್ಯೂಹ!
18:09362 ನಂಬರ್‌ಗಾಗಿ ಬಿಜೆಪಿ ಆಟ, ಕಂಪನಕ್ಕೆ ಬಂಗಾಳದಿಂದ ಯುಪಿ ವರೆಗೂ ಉರುಳುತ್ತಿದೆ ವಿಕೆಟ್
20:37ಆಪರೇಷನ್ ಗೃಹಲಕ್ಷ್ಮೀ: ಸತ್ತವರ ಖಾತೆಗೆ ಹಣ! 4 ಲಕ್ಷ ಅನರ್ಹರ ಮೇಲೆ ಸರ್ಕಾರದ ಬಿಗ್ ಆ್ಯಕ್ಷನ್
21:25DK Shivakumar: ಸಿದ್ದು ಸಂಪ್ರದಾಯ ಮುರಿದ ಡಿಕೆಶಿ: ಗಾಂಧಿಗಿರಿ ಹಿಂದಿನ ರಣತಂತ್ರವೇನು?
Read more