Apr 1, 2023, 11:38 PM IST
ಸೂರತ್ ಕೋರ್ಟ್ ರಾಹುಲ್ ಗಾಂಧಿಗೆ ಜೈಲು ಶಿಕ್ಷೆ ವಿಧಿಸಿದ ತೀರ್ಪನ್ನು ಕಾಂಗ್ರೆಸ್ ತನ್ನ ಲಾಭಕ್ಕೆ ಬಳಸಿಕೊಳ್ಳುವ ಸಾಧ್ಯತೆ ಇದೆ. ರಾಹುಲ್ ಗಾಂಧಿ ತೀರ್ಪಿಗೆ ಮೇಲ್ಮನವಿ ಸಲ್ಲಿಸಿಲ್ಲ. ಇಷ್ಟೇ ಅಲ್ಲ ಈ ತೀರ್ಪಿಗೆ ಸ್ಟೇ ತರುವ ಅವಕಾಶವೂ ಕಾಂಗ್ರೆಸ್‌ಗೆ ಇತ್ತು. ಆದರೆ ಇದ್ಯಾವುದನ್ನು ಮಾಡದ ಕಾಂಗ್ರೆಸ್, ಅನರ್ಹತೆ, ಜೈಲು ಶಿಕ್ಷೆಯನ್ನೇ ಮುಂದಿಟ್ಟು ಅನುಕಂಪದ ಆಧಾರದಲ್ಲಿ ಮತಗಳಿಸಲು ಕಾಂಗ್ರೆಸ್ ಮಹತ್ವದ ಹೆಜ್ಜೆ ಇಟ್ಟ ಸಾಧ್ಯತೆ ಕಾಣಿಸುತ್ತಿದೆ. ಇದರ ಬೆನ್ನಲ್ಲೇ ರಾಹುಲ್ ಗಾಂಧಿ ವಿರುದ್ಧ ಮತ್ತೆರಡು ಕ್ರಿಮಿನಲ್ ಡಿಫಮೇಶ್ ಪ್ರಕರಣ ಕೂಡ ಕಂಟಕವಾಗಿ ಪರಿಣಮಿಸಿದೆ. ಇತ್ತ ರಾಜ್ಯದಲ್ಲಿ ಚುನಾವಣಾ ಕಾವು ಜೋರಾಗಿದೆ. ಒಂದೆಡೆ ಅಭ್ಯರ್ಥಿಗಳ ಆಯ್ಕೆ, ಮತ್ತೊಂದೆಡೆ ಪಕ್ಷಾಂತರ ಪರ್ವಗಳು ಜೋರಾಗುತ್ತಿದೆ.