Dec 19, 2023, 2:32 PM IST
ಒಬ್ಬ ಬೆಂಕಿ, ಮತ್ತೊಬ್ಬ ಬಿರುಗಾಳಿ. ಕರ್ನಾಟಕದಲ್ಲಿ ಕೇಸರಿ ಕೋಟೆಯನ್ನು ಧೂಳೀಪಟ ಮಾಡಿ ಕಾಂಗ್ರೆಸ್‌ನನ್ನು(Congress) ಗೆಲ್ಲಿಸಿದ್ದು ಇದೇ ಬೆಂಕಿ-ಬಿರುಗಾಳಿ ಜೋಡಿ. ಕಾಂಗ್ರೆಸ್‌ನ ಈ ಭಲೇ ಜೋಡಿಯ ಮುಂದೀಗ ಟಾರ್ಗೆಟ್ 20, ಮಿಷನ್ ಟ್ವೆಂಟಿ ಚಾಲೆಂಜ್. ಮುಖ್ಯಮಂತ್ರಿ ಸಿದ್ದರಾಮಯ್ಯನವರ(Siddaramaiah) ಬಾಯಲ್ಲೂ ಟಾರ್ಗೆಟ್ ಟ್ವಿಂಟಿ, ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್(dk shivakumar ಅವರ ಬಾಯಲ್ಲೂ ಟಾರ್ಗೆಟ್ ಟ್ವೆಂಟಿ. ಲೋಕಸಭಾ(Loksabha) ಚುನಾವಣೆಯಲ್ಲಿ ಮಿಷನ್ ಟ್ವೆಂಟಿಯ ಗುರಿ ಹೊತ್ತು ಹೊರಟಿದೆ ಸಿದ್ದು-ಡಿಕೆ ಜೋಡಿ. ಮತ್ತೊಂದ್ಕಡೆ ವಿಧಾನಸಭಾ ಚುನಾವಣೆಯಲ್ಲಿ ಸೋತಿರೋ ಬಿಜೆಪಿ ಲೋಕಸಭೆಯಲ್ಲಿ ನಮ್ಮದೇ ಆಟ ಅಂತಿದೆ. ಕರ್ನಾಟಕದ ಮಟ್ಟಿಗೆ ಹೇಳೋದಾದ್ರೆ, ಅಸೆಂಬ್ಲಿ ಎಲೆಕ್ಷನ್‌ನ ಲೆಕ್ಕವೇ ಬೇರೆ, ಪಾರ್ಲಿಮೆಂಟ್ ಅಖಾಡದ ಆಟವೇ ಬೇರೆ. ಹೀಗಾಗಿ ಇಲ್ಲಿ ಗೆದ್ದ ಮಾತ್ರಕ್ಕೆ ಡೆಲ್ಲಿ ಗೆಲ್ಲೋದು ಸುಲಭವಲ್ಲ ಅನ್ನೋ ಸತ್ಯವನ್ನು ಅರಿತಿರೋ ಕಾಂಗ್ರೆಸ್, ಮಿಷನ್ 20 ಗುರಿ ತಲುಪಲು ತೆರೆಯ ಹಿಂದೆ ಭಾರೀ ರಣತಂತ್ರಗಳನ್ನು ಹೆಣೆಯುತ್ತಿದೆ. ಲೋಕಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿ ಕನಿಷ್ಠ 20 ಸ್ಥಾನಗಳನ್ನು ಗೆದ್ದೇ ಗೆಲ್ಲುವ ಶಪಥ ಮಾಡಿರೋ ಸಿಎಂ-ಡಿಸಿಎಂ ಅದಕ್ಕಾಗಿ ಸಿದ್ಧತೆ ಶುರು ಮಾಡಿದ್ದಾರೆ. ಯುದ್ಧ ಗೆಲ್ಲುವ ಕುದುರೆಗಳನ್ನು ಹುಡುಕುತ್ತಿದ್ದಾರೆ. 28ಕ್ಕೆ ಇಪ್ಪತ್ತೆಂಟೂ ಕ್ಷೇತ್ರಗಳಲ್ಲಿ ಬಲಿಷ್ಠ ಅಭ್ಯರ್ಥಿಗಳನ್ನು ಕಣಕ್ಕಿಳಿಸುವ ಲೆಕ್ಕಾಚಾರದಲ್ಲಿದ್ದಾರೆ. ಇಬ್ಬರ ಟಾರ್ಗೆಟ್ ಒಂದೇ, ಮಿನಿಮಮ್ ಟ್ವೆಂಟಿ ಸೀಟು. ಹಾಗಂತ ಕಾಂಗ್ರೆಸ್ ಹೈಕಮಾಂಡ್‌ಗೆ ಇಬ್ಬರೂ ಮಾತು ಕೊಟ್ಟು ಬಂದಿದ್ದಾರೆ.
ಇದನ್ನೂ ವೀಕ್ಷಿಸಿ: ದಾವೂದ್ ಬಗ್ಗೆ ಸತ್ಯ ಮುಚ್ಚಿಟ್ಟಿತಾ ಪಾಕಿಸ್ತಾನ..? ಭೂಗತ ಪಾತಕಿಗೆ ಏನಾಗಿದೆ..? ಪಾಕ್ ಏನಂತಿದೆ..?