Feb 23, 2024, 4:53 PM IST
ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ (Congress)ಸರ್ಕಾರ. ಗ್ಯಾರಂಟಿಗಳ ಶ್ರೀರಕ್ಷೆಯನ್ನು ಬೆನ್ನಿಗೆ ಕಟ್ಟಿಕೊಂಡಿರೋ ಜೋಡೆತ್ತು ಸರ್ಕಾರ. ಕೊಟ್ಟ ಮಾತನ್ನು ಉಳಿಸಿಕೊಂಡಿದ್ದೇವೆ ಅಂತ ಎದೆ ತಟ್ಟಿ ಹೇಳ್ತಾ ಇರೋ ಗ್ಯಾರಂಟಿ(Guarantee) ಸರ್ಕಾರ. ಗ್ಯಾರಂಟಿಗಳ ಬಲದಿಂದಲೇ ರಾಜ್ಯದಲ್ಲಿ ಲೋಕಸಭಾ ಚುನಾವಣೆ(Loksabha) ಗೆಲ್ತೀವಿ ಅಂತ ಅಬ್ಬರಿಸ್ತಾ ಇರೋ ಸಿದ್ದು ಸರ್ಕಾರ. ಎಲ್ಲವೂ ಸರಿಯಾದ ದಾರಿಯಲ್ಲಿ ಸಾಗ್ತಾ ಇದೆ ಅನ್ನೋವಾಗ್ಲೇ ಸರ್ಕಾರಕ್ಕೆ ಇಕ್ಕಟ್ಟು ತಂದು, ಬಿಕ್ಕಟ್ಟು ಸೃಷ್ಠಿ ಮಾಡಿವೆ 4 ನಾಲ್ಕು ವಿವಾದಗಳು. ವಿವಾದಗಳಿಗೂ ಕಾಂಗ್ರೆಸ್‌ಗೂ ಬಿಡದ ನಂಟು. ಪ್ರತಿಪಕ್ಷದಲ್ಲಿರ್ಲಿ, ಆಡಳಿತ ಪಕ್ಷದಲ್ಲಿರ್ಲಿ. ಕಾಂಗ್ರೆಸ್ ಸದಾ ಒಂದಿಲ್ಲೊಂದು ವಿವಾದಗಳ ಕೇಂದ್ರ ಬಿಂದುವಾಗ್ತಾನೇ ಬಂದಿದೆ. ಈಗ ರಾಜ್ಯ ಸರ್ಕಾರದಲ್ಲೂ ಅಂಥದ್ದೇ ನಾಲ್ಕು ವಿವಾದಗಳು ಸದ್ದು ಮಾಡ್ತಾ ಇವೆ. ಕಾಂಗ್ರೆಸ್ ಸರ್ಕಾರದ ಸುತ್ತ ಸುತ್ತಿದ ನಾಲ್ಕು ವಿವಾದಗಳಿವು. ಇದು ಸಿದ್ದರಾಮಯ್ಯ ಸರ್ಕಾರದ ಮೊದಲ ವಿವಾದ ಮತ್ತು ಎಡವಟ್ಟು. ನೀವು ಶಾಲೆಗಳಲ್ಲಿ "ಜ್ಞಾನ ದೇಗುಲವಿದು, ಕೈಮುಗಿದು ಒಳಗೆ ಬನ್ನಿ" ಅನ್ನೋ ಘೋಷವಾಕ್ಯದ ಫಲಕಗಳನ್ನು ನೋಡಿರ್ತೀರಿ. ಇದು ರಾಷ್ಟ್ರಕವಿ ಕುವೆಂಪು ಅವರ ಕವನದಿಂದ ಪ್ರೇರೇಪಿತವಾದ ಸಾಲು.
ಇದನ್ನೂ ವೀಕ್ಷಿಸಿ: Congress-APP : ಲೋಕಸಭೆ ಚುನಾವಣೆಗೆ ಕಾಂಗ್ರೆಸ್-ಆಪ್ ಮಹಾ ಮೈತ್ರಿ..! ದೆಹಲಿಯಲ್ಲಿ ಮೈತ್ರಿ..ಪಂಜಾಬ್‌ನಲ್ಲಿ ಏನು..?