
ಬೆಂಗಳೂರು-ಮೈಸೂರು ರಸ್ತೆಯಲ್ಲಿರುವ ಕಾಂಗ್ರೆಸ್ ಕಚೇರಿಯಿಂದ ರ‍್ಯಾಲಿ
ರೋಡ್ ಶೋ ಮೂಲಕ ನಾಮಪತ್ರ ಸಲ್ಲಿಕೆಗೆ ಆಗಮಿಸುವ ಡಿ.ಕೆ.ಸುರೇಶ್
ಸಿದ್ಧರಾಮಯ್ಯ,ಡಿಸಿಎಂ ಡಿಕೆಶಿ,ಗೃಹ ಸಚಿವ ಡಾ.ಜಿ.ಪರಮೇಶ್ವರ್ ಭಾಗಿ
ಇಂದಿನಿಂದ ಲೋಕಸಭಾ ಚುನಾವಣಾ(Loksabha) ರಣಕಣ ರಂಗೇರಲಿದ್ದು, ಮೊದಲ ಹಂತದ ಚುನಾವಣಾ ಕ್ಷೇತ್ರಗಳಲ್ಲಿ ಇಂದಿನಿಂದ ನಾಮಪತ್ರ(Nomination) ಸಲ್ಲಿಕೆ ಮಾಡಲಾಗುವುದು. ನಾಮಪತ್ರ ಸಲ್ಲಿಕೆಗೆ ಸಾಕ್ಷಿಯಾಗಲಿರುವ ರಾಜ್ಯದ ಮತದಾರರು. ಘಟಾನುಘಟಿ ನಾಯಕರಿಂದ ನಾಮಪತ್ರ ಸಲ್ಲಿಕೆ ಆರಂಭವಾಗಲಿದೆ. ಡಿ.ಕೆ.ಶಿವಕುಮಾರ್ ಸಹೋದರ ಡಿ.ಕೆ.ಸುರೇಶ್(DK Suresh) ಇಂದೇ ನಾಮಪತ್ರ ಸಲ್ಲಿಸಲಿದ್ದಾರೆ. ಬೆಂಗಳೂರು ಗ್ರಾಮಾಂತರ(Bengaluru Rural) ಕಾಂಗ್ರೆಸ್(Congress) ಅಭ್ಯರ್ಥಿಯಾಗಿ ಅವರು ಕಣಕ್ಕೆ ಇಳಿದಿದ್ದಾರೆ. ಮೈತ್ರಿ ಅಭ್ಯರ್ಥಿಯ ವಿರುದ್ಧ ನೇರ ಹಣಾಹಣಿಗೆ ಇಳಿದಿರುವ ಡಿ.ಕೆ.ಸುರೇಶ್. ನಾಮಪತ್ರ ಸಲ್ಲಿಕೆಯ ಮೊದಲ ದಿನವೇ ಉಮೇದುವಾರಿಕೆ ಸಲ್ಲಿಕೆ. ನಾಮಪತ್ರ ಸಲ್ಲಿಕೆಗೆ ಮುನ್ನ ಡಿ ಕೆ ಸಹೋದರಿಂದ ಮನೆದೇವರಿಗೆ ಪೂಜೆ ಮಾಡಲಾಗುತ್ತದೆ. ಮನೆ ದೇವರಾದ ಕನಕಪುರದ ಕೆಂಕ್ಕೆರಮ್ಮ,ಶಕ್ತಿದೇವತೆ ಕಬ್ಬಾಳಮ್ಮನಿಗೆ ವಿಶೇಷ ಪೂಜೆ. ಕ್ಷೇತ್ರದ ವಿವಿಧ ದೇವಾಲಯಗಳಲ್ಲಿ ಪೂಜೆ, ದರ್ಗಾಗಳಲ್ಲಿ ಪ್ರಾರ್ಥನೆ. ನಂತರ ಬೃಹತ್ ರೋಡ್ ಶೋವನ್ನು ಡಿಕೆಶಿ ಸಹೋದರರು ನಡೆಸಲಿದ್ದಾರೆ.
ಇದನ್ನೂ ವೀಕ್ಷಿಸಿ: ರಾಜ್ಯದ 25 ಸ್ಥಾನಗಳಿಗೆ ಟಿಕೆಟ್ ಘೋಷಣೆ: ಅಳೆದು ತೂಗಿ ಎಲ್ಲಾ ಜಾತಿಗಳಿಗೂ ಟಿಕೆಟ್ ಹಂಚಿದ ಬಿಜೆಪಿ !